ಗೋಲ್ಡನ್ ಗ್ಯಾಂಗ್ ನಲ್ಲಿ ಅಪ್ಪು ಬಗ್ಗೆ ಮತ್ತೊಂದು ವ್ಯಕ್ತಿತ್ವ ತೆರೆದಿಟ್ಟ ನಟ ಶರಣ್..! ಇಂಥಹವರು ಸಿಗ್ತಾರ..!!

By Infoflick Correspondent

Updated:Friday, January 14, 2022, 20:26[IST]

ಗೋಲ್ಡನ್ ಗ್ಯಾಂಗ್ ನಲ್ಲಿ ಅಪ್ಪು ಬಗ್ಗೆ ಮತ್ತೊಂದು ವ್ಯಕ್ತಿತ್ವ ತೆರೆದಿಟ್ಟ ನಟ ಶರಣ್..! ಇಂಥಹವರು ಸಿಗ್ತಾರ..!!

ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮ ಈಗಾಗಲೇ ಅದ್ದೂರಿಯಾಗಿ ಪ್ರಾರಂಭವಾಗಿದೆ. ನಟ ಗಣೇಶ್ ಅವರು ಗೋಲ್ಡನ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಕಳೆದ ವಾರ ನಟ ಶರಣ್, ಪ್ರೇಮ್, ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಆಗ ನಡೆದ ಕೆಲವೊಂದಿಷ್ಟು ಮಾತಿನ ಚಕಮಕಿ ನೋಡುಗರಿಗೆ ತುಂಬಾ ಇಷ್ಟವಾಯಿತು. ಕೆಲ ನೆನಪುಗಳು, ಕೆಲವೊಂದಿಷ್ಟು ಘಟನೆಗಳು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ  ಹೆಚ್ಚು ಕಲರ್ಫುಲ್ ಆಗಿ ಮೂಡಿಬಂದವು. ಹೌದು ಶರಣ್ ಅವರಿಗೆ ಗಣೇಶ್, ಅಪ್ಪು ಹಾಗೂ ನಿಮ್ಮ ಒಡನಾಟದ ಬಗ್ಗೆ ಬಂದು ಎರಡು ಮಾತುಗಳನ್ನು ಹೇಳಬಹುದಾ ಎಂದು ಕೇಳುತ್ತಾರೆ. ಆಗ ಶರಣ್ ಅವರು, ನಡೆದ ಒಂದು ಇನ್ಸಿಡೆಂಟ್ ಬಗ್ಗೆ ಹೇಳುತ್ತಾರೆ. ಈ ಮೂಲಕ ಅಪ್ಪು ಅವರ ಮತ್ತೊಂದು ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಾರೆ.    

ಹೌದು ನಾನು ಸಿನಿಮಾ ಹೀರೋ ಆಗೋಕಿಂತ ಮುಂಚೆ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿದ್ದೆ, ನಮ್ಮ ಬಸವ ಸಿನಿಮಾ ಶೂಟಿಂಗ್ ವೇಳೆ, ಪುನೀತ್ ಅವರನ್ನು ಕಂಡು ತುಂಬಾ ಆಶ್ಚರ್ಯಚಕಿತನಾಗಿ ನಟನೆ ಮಾಡಲು ಮುಂದಾಗಿದ್ದೆ. ಆಗ ಬೇರೆ ಬೇರೆ ಚಿತ್ರಗಳ ಡೇಟ್ಸ್ ಕೂಡ ಹೆಚ್ಚಾಗಿತ್ತು ನನಗೆ. ಜೊತೆಗೆ ಅಂದಿನ ದಿನ ನಮ್ಮ ಬಸವ ಸಿನಿಮಾ ಸೆಟ್ ಅಲ್ಲಿ ಇದ್ದೆ. ನಾಳೆ ಇನ್ನೊಂದು ಸಿನಿಮಾದ ನಿರ್ದೇಶಕರು ನೀವು ಬರಲೇಬೇಕು ಎಂದು ಹೇಳುತ್ತಿದ್ದರು. ನಾನು ನಮ್ಮ ಬಸವ ಸಿನಿಮಾ ಶೂಟಿಂಗ್ ಸೆಟ್ಟಿನಲ್ಲಿ ಕುಳಿತುಕೊಂಡು ನಾಳೆ ಇವರದು ತುಂಬಾ ಇಂಪಾರ್ಟೆಂಟ್ ಶೂಟ್ ಇದೆ, ಅವರು ಕೂಡ ಬಿಡುತ್ತಿಲ್ಲ ಏನು ಮಾಡೋದು ಈ ವಿಷಯ ಅಪ್ಪು ಅವರಿಗೆ ಗೊತ್ತಾಗದಂತೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದೆ..

ನಮ್ಮ ಬಸವ ಸಿನಿಮಾ ನಿರ್ದೇಶಕರು, ಆ ನಿರ್ದೇಶಕನ ಜೊತೆ ಮಾತನಾಡುತ್ತಿದ್ದು, ನಾವು ಡೇಟ್ ಪಡೆದಿದ್ದೇವೆ ಎಂದು ಹೇಳುತ್ತಿದ್ದರು. ಅದನ್ನು ನೋಡಿದ ಅಪ್ಪು ಅವರು ಏನಿದು ಎಂದು ಕೇಳುತ್ತಾರೆ, ನಾನು ಆಗ ಇರುವ ಎಲ್ಲಾ ವಿಷಯವನ್ನು ಹೇಳಿದೆ. ಬಳಿಕ ನಮ್ಮ ಬಸವ ಚಿತ್ರದ ನಿರ್ದೇಶಕರನ್ನು ಕರೆದುಕೊಂಡು ಆ ಕಡೆ ಅಪ್ಪು ಅವರು ಹೋಗಿದ್ದರು. ಬಳಿಕ ನಿರ್ದೇಶಕರು ಬಂದು ನಾಳೆ ನೀವು ಆ ಸಿನಿಮಾ ಶೂಟಿಂಗಿಗೆ ಹೋಗಬಹುದು ಎಂದು ಹೇಳಿದರು. ಅರೆ ಇದೇಗೆ ಸಾಧ್ಯ ಸಾರ್ ಎಂದೇ, ಅವರು ಅಪ್ಪು ಸಾರ್ ನಾಳೆ ಶೂಟಿಂಗನ್ನು ನಿಮಗಾಗಿ ಕ್ಯಾನ್ಸಲ್ ಮಾಡಿ ಇನ್ನೊಂದು ದಿನ ಡೇಟ್ ನೀಡುತ್ತೇನೆ ಎಂದರು. ಈ ಮಾತನ್ನು ಕೇಳಿ ಅಪ್ಪು ಅವರ ಬಗ್ಗೆ ನಿಜ ತುಂಬಾ ಹೆಮ್ಮೆ ಎನಿಸಿತು ಎಂದು ಹೇಳಿ, ಗೋಲ್ಡನ್ ಗ್ಯಾಂಗ್ ನಲ್ಲಿ ಪ್ರೀತಿಯ ಅಪ್ಪು ಅವರ ಬಗ್ಗೆ ನೆನೆಸಿ, ಶರಣ್ ಅವರು ಇಂತಹ ವ್ಯಕ್ತಿತ್ವ ಇನ್ನೆಲ್ಲಿ ಸಿಗುವುದಕ್ಕೆ ಸಾಧ್ಯ ಎಂದು ಅಪ್ಪು ಬಗ್ಗೆ ಮರೆಯಲಾರದ ನೆನಪನ್ನು ಹಂಚಿಕೊಂಡರು... ( video credit : zee kannada )