ಮದುವೆಯತ್ತ ವಾಲಿದ ಸರಿಗಮಪ ಹನುಮಂತನ ಚಿತ್ತ ?

By Infoflick Correspondent

Updated:Sunday, March 20, 2022, 09:46[IST]

ಮದುವೆಯತ್ತ ವಾಲಿದ ಸರಿಗಮಪ ಹನುಮಂತನ ಚಿತ್ತ ?

ಹೆಗಲ ಮೇಲೋಂದು ಟವಲ್ ಹಾಕಿ, ಪಂಚೆಯುಟ್ಟು ಕೈಯಲ್ಲಿ ಬುತ್ತಿ ಗಂಟು ಹಿಡಿದು ಕುರಿ ಕಾಯುತ್ತಾ ಹಾಡಿಕೊಂಡಿದ್ದ ಈ ಹಳ್ಳಿ ಹೈದ ಈಗ ಕರುನಾಡ ಹಾಡುಗಾರ. ಸರಿಗಮಪ ವೇದಿಕೆಯಲ್ಲಿ ಹಾಡಿ ಪ್ರೇಕ್ಷಕರನ್ನ ಕುಣಿಸಿದ ಹನುಮಂತ, ಡ್ಯಾನ್ಸ್​​ ಕರ್ನಾಟಕ ಡ್ಯಾನ್ಸ್​​ ಸ್ಟೇಜ್​ ಮೇಲೆ ತಾನು ಕುಣಿದು, ನೋಡುಗರನ್ನು ಕುಣಿಸಿ ರಂಜಿಸಿದ. ಈಗ ಹನುಮಂತ್ ನ ಕುರಿತಾದ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಹನುಮಂತ್ ಮದುಮಗನಾಗುತ್ತಿದ್ದಾನೆ.   

ಹನುಮಂತನ‌‌ ಮುಗ್ದತೆ, ಆತನ ಕಂಠಕ್ಕೆ ಹನುಮಂತನಿಗೆ ಫ್ಯಾನ್ ಫಾಲೋವರ್ಸ್ ಗಳು ಹೆಚ್ಚಾಗಿಯೇ ಇದ್ದಾರೆ. ಈಗಾಗಲೇ 3 ಸಿನಿಮಾಗಳಲ್ಲಿ ಹನುಮಂತ ಅವರು ಗಾಯನ ಮಾಡಿದ್ದು ಇನ್ನೇನು ಬಿಡುಗಡೆಯಾಗುತ್ತಿದೆ. ಹನುಮಂತ್ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.ಮದುವೆಯ ಹಸೆಮಣೆ ಏರಲಿದ್ದಾರೆ ಹನುಮಂತ್. 

ಇತ್ತೀಚಿಗಷ್ಟೇ ತನ್ನ ತಂಗಿಯ ವಿವಾಹವನು ಮಾಡಿರುವ ಹನುಮಂತ್ ತನ್ನ ಮದುವೆಯನ್ನು ಸರಳವಾಗಿ ಆಗಲು ನಿಶ್ಚಯಿಸಿದ್ದಾರೆ. ಹನುಮಂತಣ್ಣನ ಮನೆಯಲ್ಲಿ ವಿವಾಹದ ಸಿದ್ಧತೆಗಳು ಜೋರಾಗಿ ನಡೆಯುತ್ತಿದೆ‌‌. ಹನುಮಂತ್ ಮದುವೆಯಾಗುತ್ತಿರುವ ಹುಡುಗಿ ಹಾವೇರಿ ಜಿಲ್ಲೆಯವರಾಗಿದ್ದು
ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ.  ವಿವಾಹ ಮಹೋತ್ಸವ ಹಾವೇರಿಯಲ್ಲಿ ನಡೆಯಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.