ಸರಿಗಮಪ ಹನುಮಂತನ ಮದುವೆ: ಹುಡುಗಿ ಎಲ್ಲಿಯವಳು ಗೊತ್ತಾ..?

Updated: Tuesday, May 4, 2021, 15:18 [IST]

ಸರಿಗಮಪ ಸೀಸನ್ 15ರ ರನ್ನರ್ ಅಪ್ ಆಗಿದ್ದ ಹಾಗೂ ಜನಪದ ಗೀತೆಗಳ ಮೂಲಕ ರಾಜ್ಯದ ಜನರ ಮನ ಗೆದ್ದಿದ್ದ ಹಾವೇರಿಯ ಹನುಮಂತ ರಾಜ್ಯದ ಜನರನ್ನು ಮೋಡಿ ಮಾಡಿದ್ದ. ಯಾವುದೇ ಸಂಗೀತ ತರಬೇತಿಯನ್ನು ಪಡೆಯದೇ ಕುರಿ ಮೇಯಿಸುತ್ತಾ  ಕುರಿಗಾಹಿ, ಜನಪದ ಗಾಯನಗಳನ್ನು ಹಾಡುತ್ತಿದ್ದರು. ತಮ್ಮ ಧ್ವನಿಯ ಮೂಲಕ ಸಂಗೀತ ಪ್ರಿಯರಲ್ಲಿ ಹೊಸ ಸಂಚಲನವನ್ನು ಉಂಟುಮಾಡಿದ ಹನುಮಂತ ಅವರು ಕನ್ನಡ ಚಿತ್ರರಂಗದ ಮೂರು ಸಿನಿಮಾಗಳಲ್ಲಿ ಹಾಡನ್ನು ಹಾಡಿದ್ದಾರೆ. ಆದರೆ ಹಾಡುಗಳು ಇದುವರೆಗೂ ಬಿಡುಗಡೆಯಾಗಿಲ್ಲ.   

ಇದೀಗ ಹನುಮಂತ ಅವರಿಗೆ ಮದುವೆ ಮಾಡಲು ಹುಡುಗಿ ಹುಡುಕಿದ್ದಾರೆ. ಲಂಬಾಣಿ ಸಮಾಜದಲ್ಲಿ ಹುಡುಗನಿಗೆ 21 ವರ್ಷವಾದಾಗ ಆತನಿಗೆ ಮದುವೆ ಮಾಡಬೇಕು ಎಂಬ ಸಂಪ್ರದಾಯವಿದೆ. ಇದೀಗ ಹನುಮಂತ ಅವರಿಗೆ ವಯಸ್ಸಾಗಿದ್ದು, ಹುಡುಗಿಯನ್ನು ಹುಡುಕಿದ್ದಾರೆ. ಇನ್ನು ಹುಡುಗಿ ಹಾವೇರಿ ಜಿಲ್ಲೆಗೆ ಸೇರಿದವರಾಗಿದ್ದು, ಪಿಯುಸಿ ಓದಿದ್ದಾರೆ ಎಂದು ಹೇಳಲಾಗಿದೆ.

ಇನ್ನು ಹನುಮಂತ ಮದುವೆಯಾಗುತ್ತಿರುವ ಹುಡುಗಿ ಹೇಗಿದ್ದಾಳೆ ಎಂದು ನೋಡಲು ಯಾವುದೇ ಮೂಲಗಳು ಇಲ್ಲ. ಹೌದು ಹನುಮಂತ ಮದುವೆಯಾಗುತ್ತಿರುವ ಹುಡುಗಿ ಹೇಗಿದ್ದಾರೆ? ಮದುವೆ ಯಾವಾಗ? ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿಲ್ಲ. ಇನ್ನು ಕೆಲವು ಮೂಲಗಳ ಪ್ರಕಾರ ಹನುಮಂತ ಅವರು ಇದೇ ವರ್ಷ ಮದುವೆಯಾಗುತ್ತಾರಂತೆ. ಇನ್ನು ಇವರ ದಾಂಪತ್ಯ ಜೀವನದ ಸಂಸಾರ ಸುಖವಾಗಿ ಹಾಗೂ ಆರೋಗ್ಯವಾಗಿರಲಿ ಎಂದು ನಾವು ಈ ಮೂಲಕ ಹಾರೈಸೋಣ.