ಸತೀಶ್ ನೀನಾಸಂ ಮಗು ಫೋಟೋ ನೋಡಿ ಶಾಕ್ ಆದ ಫ್ಯಾನ್ಸ್..! ಅಸಲಿಗೆ ಪತ್ನಿ ಯಾರು..??

By Infoflick Correspondent

Updated:Friday, January 14, 2022, 22:18[IST]

ಸತೀಶ್ ನೀನಾಸಂ ಮಗು ಫೋಟೋ ನೋಡಿ ಶಾಕ್ ಆದ ಫ್ಯಾನ್ಸ್..! ಅಸಲಿಗೆ ಪತ್ನಿ ಯಾರು..??

ಕನ್ನಡದ ಉದಯೋನ್ಮುಖ ನಟ ಸತೀಶ್ ನೀನಾಸಂ ಅವರು ಈ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಕನ್ನಡದ ವಿಷಯಕ್ಕೆ ಮತ್ತು ಕನ್ನಡ ಸಿನಿಮಾಗಳ ವಿಷಯಕ್ಕೆ ಬಂದಾಗ ಧ್ವನಿ ಎತ್ತುತ್ತಾರೆ. ಸತೀಶ್ ಅವರು ಎಂತಹ ಪ್ರತಿಭೆ ಎಂಬುದು ಎಲ್ಲರಿಗೂ ಗೊತ್ತು. ಅವರ ನಟನೆ ಮಾಡಲು ಆರಂಭಿಸಿದರೆ, ಅವರ ಮಾತಿಗೆ, ಅವರ ಅಭಿನಯಕ್ಕೆ ಫಿದಾ ಆಗದೆ ಇರುವವರು ಯಾರು ಇಲ್ಲ. ಹಾಗೆ ಸತೀಶ್ ನೀನಾಸಂ ಕಾಮಿಡಿ ನಟನೆಗೆ ನಗದೇ ಇರುವವರು ಕೂಡ ಯಾರು ಇಲ್ಲ.  ಹೌದು ಸತೀಶ್ ನೀನಾಸಂ ಅವರದೇ ಆದ ಅಭಿನಯದ ಮೂಲಕ ಹೆಚ್ಚು ಅಭಿಮಾನಿ ಬಳಗ ಕೂಡ ಹೊಂದಿದ್ದಾರೆ.. ನಟ ಸತೀಶ್ ನೀನಾಸಂ ಈಗ ಸಾಮಾಜಿಕ ಜಾಲತಾಣದಲ್ಲಿ ಬಂದು ಮಗುವಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು  ಕೋರಿದ್ದಾರೆ. ಈ ಮಗುವಿನ ಫೋಟೋ ನೋಡಲು ತುಂಬಾ ಮುದ್ದಾಗಿದೆ. ಮಗುವಿನ ಫೋಟೋ ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು ನಟ ಸತೀಶ್ ಅವರಿಗೆ ಈಗಾಗಲೇ ಮದುವೆಯಾಗಿದೆಯಾ, ಅಸಲಿಗೆ ಈ ವಿಷಯ ನಮಗೆ ಗೊತ್ತಾಗಲೇ ಇಲ್ಲವಲ್ಲ ಸರ್ ಎಂಬುದಾಗಿ ಮಗುವಿನ ವರ್ಣನೆ ಮಾಡುತ್ತಾ ಕಾಮೆಂಟ್ನಲ್ಲಿ ಸತೀಶ್ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಗುವಿನ ಮುದ್ದಾದ ಫೋಟೋ ನೋಡಿ ನಿಮ್ಮ ಮಗು ಎಷ್ಟು ಮುದ್ದಾಗಿದೆ ಎಂದು ಅಭಿಪ್ರಾಯ ತಿಳಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಸತೀಶ್ ನೀನಾಸಂ ಅವರು ಮದುವೆಯಾಗಿದ್ದಾರ, ಹಾಗಾದ್ರೆ ಅವರ ಪತ್ನಿ ಯಾರು ಎಂಬುದು ಎಲ್ಲಿಯೂ ಕೂಡ ಬಹಿರಂಗವಾಗಿಲ್ಲ ಯಾಕೆ.?

ಇದೀಗ ಮೊದಲ ಬಾರಿಗೆ ತಮ್ಮ ಮಗುವಿನ ಮುದ್ದಾದ ಫೋಟೋ ಶೇರ್ ಮಾಡಿದ್ದಾರೆ ಹಾಗೆ ಪ್ರೈವೇಸಿ ಕಾರಣಕ್ಕಾಗಿ ನಾನು ನನ್ನ ಕುಟುಂಬದ ಪರಿಚಯವನ್ನು ಎಲ್ಲಿಯೂ ಸಹ ಮಾಡಿಕೊಟ್ಟಿಲ್ಲ ಎಂದು ಹೇಳಿದ್ದಾರೆ. ಈ ಮಗುವಿಗೆ ಈಗಾಗಲೇ ಐದು ತುಂಬಿ ಆರು ವರ್ಷಗಳಾಗಿದ್ದು, ಇದು ಮೊದಲ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದ ಫೋಟೋ ಆಗಿದೆ. ನಟ ಸತೀಶ್ ಅವರಿಗೆ ಮದುವೆಯಾಗಿ ಏಳು ವರ್ಷ ಆಗಿದೆ ಎನ್ನಲಾಗುತ್ತಿದೆ. ಸತೀಶ್ ಅವರು ಮಗು ಫೋಟೋ ಶೇರ್ ಮಾಡಿಕೊಂಡಿದ್ದು ಹೇಳಿದ್ದಾದರೂ ಏನು ಗೊತ್ತಾ ಮುಂದೆ ಓದಿ. 'ನಿಮಗೆಲ್ಲ ಸಂಕ್ರಾಂತಿ ಶುಭಾಶಯ ಕೋರುತ್ತಿದ್ದಾಳೆ,ನನ್ನ ಮಗಳು "ಮನಸ್ವಿತ"...

ಇದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಅವಳ ಮೊದಲ ಚಿತ್ರ.ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗು ನಮ್ಮ ಕುಟುಂಬ,ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ.ನಮ್ಮ ಕುಟುಂಬದ ಮೇಲೆ ನಿಮ್ಮ ಪ್ರೀತಿ ಹಾರೈಕೆ ಎಂದಿನಂತೆ ಸದಾ ಇರಲಿ. ಇದು ಅವಳ ಮೊದಲ ವರ್ಷ ತೆಗೆದ ಚಿತ್ರ, ಈಗ ಅವಳು 5ತುಂಬಿ 6ರ ಹೆಜ್ಜೆ ಇಡುತ್ತಿದ್ದಾಳೆ...ಧನ್ಯವಾದಗಳೊಂದಿಗೆ....
ಸುಪ್ರೀತಾ,ಮನಸ್ವಿತ,ಸತೀಶ್....