ಪ್ರೀತಿಯೇ ನಟ ಸತೀಶ್ ವಜ್ರನ ಪ್ರಾಣ ತೆಗೀತಾ..? ನಿಜಕ್ಕೂ ಕಣ್ಣೀರು ತರಿಸುತ್ತೆ ಈ ವಿಡೀಯೋ..!

By Infoflick Correspondent

Updated:Monday, June 20, 2022, 12:29[IST]

ಪ್ರೀತಿಯೇ ನಟ ಸತೀಶ್ ವಜ್ರನ ಪ್ರಾಣ ತೆಗೀತಾ..? ನಿಜಕ್ಕೂ ಕಣ್ಣೀರು ತರಿಸುತ್ತೆ ಈ ವಿಡೀಯೋ..!

ಸ್ಯಾಂಡಲ್ವುಡ್ನ ಯುವ ನಾಯಕ ನಟ ಲಗೋರಿ ಚಿತ್ರದ ನಾಯಕ ಸತೀಶ್ ವಜ್ರ ಅವರನ್ನು ಮೊನ್ನೆ ತಡರಾತ್ರಿ ಹತ್ಯೆ ಮಾಡಿದ್ದಾರೆ. ಹೌದು ಈ ವಿಷಯ ನಿನ್ನೆ ಬೆಳಿಗ್ಗೆ ಇಡೀ ಕನ್ನಡ ಜನತೆಗೆ ಒಂದು ರೀತಿ ಶಾಕ್ ಎನ್ನಬಹುದು. ಯುವ ನಟ ಆಗಿ ಗುರುತಿಸಿಕೊಂಡಿದ್ದ ಹಾಗೆ ಕನ್ನಡ ಸಿನಿಮಾರಂಗದಲ್ಲಿ ಏನಾದರೂ ದೊಡ್ಡದು ಸಾಧನೆ ಮಾಡಬೇಕು ಎಂಬುದಾಗಿ ಅಂದುಕೊಂಡಿದ್ದ ನಟ ಸತೀಶ್ ವಜ್ರ ಅವರ ಸಾವಿನ ಸುದ್ದಿ ಎಲ್ಲರನ್ನೂ ಬೆರಗು ಮಾಡಿತು. ಈ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರ ಮನ ಒಂದು ಕ್ಷಣ ಅರೆ ಇದೇನಪ್ಪಾ ಇದು ನಿಜಾನಾ ಎನ್ನುವ ಮಟ್ಟಕ್ಕೆ ಸತೀಶ್ ವಜ್ರ ಅವರ ಹತ್ಯೆಯ ವಿಚಾರ ಎಲ್ಲರನ್ನೂ ಕಣ್ಣೀರು ಹಾಕಿಸುವಂತೆ ಮಾಡಿತು. ಹೌದು ನಟ ಸತೀಶ್ ವಜ್ರ ಅವರು ದೊಡ್ಡ ದೊಡ್ಡ ಕನಸುಗಳ ಹೊತ್ತು ಕನ್ನಡ ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಹುಟ್ಟೂರನ್ನು ಬಿಟ್ಟು ಎಸೆಸೆಲ್ಸಿ ಮುಗಿದ ಬಳಿಕವೇ ಬೆಂಗಳೂರಿಗೆ ಬಂದು ಸೇರಿಸಿಕೊಂಡಿದ್ದರು. 

ತುಂಬಾ ಬಡತನ ಜೀವನ ಹಳ್ಳಿಯಲ್ಲಿ ಆದ್ರೂ ಸಿಟಿಗೆ ಕನಸು ಹೊತ್ತು ಬಂದಿದ್ದ. ಅವರದೇ ಆದ ಒಂದು ಸ್ವಂತ ಕಟಿಂಗ್ ಶಾಪ್ ಬಿಜಿನೆಸ್ ಸಹ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಕೌಟುಂಬಿಕ ವಿಚಾರವಾಗಿ ಅವರ ನಿಜ ಜೀವನದಲ್ಲಿ ಅವರ ಪ್ರೀತಿಯೇ ಅವರಿಗೆ ಮುಳುವಾಯಿತ ಇಂದು ಎನ್ನಿಸುವಂತೆ ಈ ಘಟನೆ ನಡೆದಿದೆ. ನಿಜಕ್ಕೂ ಕನಸು ಹೊತ್ತಿದ್ದ ಈ ಯುವ ನಾಯಕ ಕಲಾವಿದ ಹುಡುಗನಿಗೆ ಹೀಗಾಗಬಾರದಿತ್ತು ಎಂದು ಹೆಚ್ಚು ಜನರು ಕಣ್ಣೀರು ಹಾಕಿದ್ದಾರೆ. ಅಸಲಿಗೆ ಸತೀಶ್ ವಜ್ರ ಅವರ ಜೀವನದಲ್ಲಿ ಏನೆಲ್ಲಾ ಆಯಿತು, ಅವರ, ಹಾಗೂ ಆ ಸುಧಾ ವಜ್ರ ಎನ್ನುವವರ ನಡುವೆ ಪ್ರೀತಿ ಹೇಗೆ ಹುಟ್ಟಿತು ಎಂಬುದಾಗಿ ಈ ವಿಡಿಯೋದಲ್ಲಿ ತಿಳಿದುಕೊಳ್ಳಿ. ಸತೀಶ್ ಮತ್ತು ಸುಧಾ ವಜ್ರ ಅವರು ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು.

ಈ ಜೋಡಿಗೆ ಎಂಟು ವರ್ಷದ ಮುದ್ದಾದ ಒಂದು ಗಂಡು ಮಗು ಕೂಡ ಇತ್ತು. ಎಲ್ಲವೂ ಸರಿ ಇತ್ತು, ಆದರೆ ವಿಧಿಯಾಟ ಬೇರೆ ಎನ್ನುವ ಹಾಗೆ ಸತೀಶ್ ವಜ್ರನ ಹೆಂಡತಿ ಕಳೆದ ಏಳು ತಿಂಗಳ ಹಿಂದೆ ಅನಾರೋಗ್ಯ ಸಮಸ್ಯೆಗೇನೆ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಸುಧಾ ಅವರ ತಮ್ಮ ಸುದರ್ಶನ್ ಮೊನ್ನೆ ತಡರಾತ್ರಿ ಆರ್ ಆರ್ ನಗರದ ಸತೀಶ್ ಮನೆಗೆ ಬಂದು ಉಳಿದುಕೊಳ್ಳಲು ಮಾತನಾಡಿದ್ದಾನೆ. ಸತೀಶ್ ವಜ್ರ ಅವರನ್ನ ನಂಬಿಸಿ ಗೆಳೆಯನ ಕರೆದುಕೊಂಡು ಬಂದು ಮಲಗಿದ್ದ ವೇಳೆಯೇ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ. ಸತೀಶ್ ವಜ್ರ ಅವರ ಸಾವು ನಿಜಕ್ಕೂ ತುಂಬಾ ಅನ್ಯಾಯ. ಈ ರೀತಿ ಬರ್ಬರವಾಗಿ ಹತ್ಯೆ ಮಾಡಿ ಸತೀಶ್ ಅವರ ಜೀವ ತೆಗೆದ ಆ ಆರೋಪಿಗೆ ತಕ್ಕ ಶಿಕ್ಷೆ ಆಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು... ( video credit : third eye )