ಸತೀಶ್ ವಜ್ರನ ಹತ್ಯೆ ಆಗುವ ಒಂದು ವಾರಕ್ಕೂ ಮುನ್ನ ಆಗಿದ್ದೇನು..? ಬಾಮೈದನನ ವಿಚಾರ ಬಯಲು

By Infoflick Correspondent

Updated:Tuesday, June 21, 2022, 19:10[IST]

ಸತೀಶ್ ವಜ್ರನ ಹತ್ಯೆ ಆಗುವ ಒಂದು ವಾರಕ್ಕೂ ಮುನ್ನ ಆಗಿದ್ದೇನು..? ಬಾಮೈದನನ ವಿಚಾರ ಬಯಲು

ಕನ್ನಡದ ಉದಯೋನ್ಮುಖ ನಟ ಕ್ರಷ್ ಹಾಗೂ ಲಗೋರಿ ಕಿರು ಚಿತ್ರದ ನಾಯಕ ನಟ ಸತೀಶ್ ವಜ್ರ ಈಗಾಗಲೇ ಇಹಲೋಕ ತ್ಯಜಿಸಿದ್ದಾರೆ. ನಟ ಸತೀಶ್ ವಜ್ರ ನ್ಯಾಚುರಲ್ ಆಗಿ ಸಾವನ್ನಪ್ಪಿದ್ದರೆ ಬಹುಶಹ ನಮಗೆ ನಿಮಗೆ ಎಷ್ಟು ನೋವಾಗುತ್ತಿತ್ತೊ ಇಲ್ಲವೋ ಗೊತ್ತಿಲ್ಲ, ಬದಲಿಗೆ ಅವರ ಸ್ವಂತ ಬಾಮೈದುನ, ಹೆಂಡತಿಯ ತಮ್ಮ ಬರ್ಬರವಾಗಿ ಹತ್ಯೆ ಮಾಡಿರುವುದು ತುಂಬಾ ದುಃಖದ ವಿಚಾರ. ಸ್ನೇಹಿತರೆ ಈಗಾಗಲೇ ನಟ ಸತೀಶ್ ವಜ್ರ ಅವರ ಕುಟುಂಬ, ಎತ್ತರಕ್ಕೆ ಬೆಳೆದು ಜೀವನ ಕಲ್ಪಿಸಿಕೊಳ್ಳುತ್ತಿದ್ದ, ಸಿನಿಮಾರಂಗದಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತಿದ್ದ ಮಗನ ಕಳೆದುಕೊಂಡು ಕಣ್ಣೀರಿನಲ್ಲಿ ಕೈ ಕಳೆಯುವಂತಾಗಿದೆ. ಇನ್ನೊಂದು ಕಡೆ ತಂದೆ ಸತೀಶ್ ಹಾಗೂ ತಾಯಿ ಸುಧಾ ವಜ್ರ ಅವರನ್ನು ಕಳೆದುಕೊಂಡ ಸತೀಶ್ ಅವರ ಎಂಟು ವರ್ಷದ ಮಗ ಕೂಡ ತಬ್ಬಲಿಯಾಗಿದೆ..ಸತೀಶ್ ಅವರ ತಾಯಿ ಕೂಡ ಮಗನನ್ನು ಕಳೆದುಕೊಂಡು ಈ ಜೀವನವೇ ಬೇಡ ಎನ್ನುವ ಮಟ್ಟಕ್ಕೆ ನೋವನ್ನು ಅನುಭವಿಸುತ್ತಿದ್ದಾರೆ.   

ಹೀಗಿರುವಾಗ ಇದೀಗ ಮತ್ತೊಂದು ವಿಚಾರ ಸತೀಶ್ ಅವರ ಹತ್ಯೆಗೆ ಸಂಬಂಧಿಸಿದಂತೆ ಹೊರಬಂದಿದ್ದು ಅಸಲಿಗೆ ಸತೀಶ್ ವಜ್ರ ಅವರ ಸಾವಾಗುವ ಒಂದು ವಾರಕ್ಕೂ ಮುನ್ನ ಅವರ ಬಾಮೈದುನ ಸುದರ್ಶನ್ ಮಾಡಿದ ಕೆಲಸ ಏನೆಂಬುದಾಗಿ ಅವರ ಸ್ನೇಹಿತ ಬಳಗದವರ ಮೂಲಕ ತಿಳಿದುಬಂದಿದೆ. ಹೌದು ಸತೀಶ್ ವಜ್ರ ಹಾಗೂ ಸುಧಾ ವಜ್ರ ಅವರ ತಮ್ಮ ಸುದರ್ಶನ್ ಆರಂಭದಿಂದಲೂ ಕೂಡ ತುಂಬಾ ಗಲಾಟೆ ಮಾಡಿಕೊಂಡು ಆಗಾಗ ಸತೀಶ್ ವಜ್ರಾ ಅವ್ರಿಗೆ ಆವಾಜ್ ಹಾಕಿದ್ದನಂತೆ. ನಿನ್ನ ತಲೆ ತೆಗೆತ್ತೇನೆ ಎಂದು ಹೇಳಿದ್ದನಂತೆ. ಆದರೆ ಯಾವಾಗ ಅವರಕ್ಕ ಸುಧಾ ವಜ್ರ ತೀರಿಹೋದರೋ ಇದಕ್ಕೆಲ್ಲ ಕಾರಣ ಸತೀಶನೇ ಎಂಬುದಾಗಿ ಬಲವಾಗಿ ನಂಬಿದ್ದ ಸುದರ್ಶನ್ ಎನ್ನಲಾಗಿದೆ. ತದನಂತರ ಹೆಚ್ಚು ಗಲಾಟೆ ಕೂಡ ಮಾಡಿಕೊಂಡಿದ್ದ, ನನ್ನ ಅಕ್ಕ ಹೋದ ಮೇಲೆ ಇವನು ಖುಷಿಖುಷಿಯಾಗಿ ಚೆನ್ನಾಗಿ ಓಡಾಡಿಕೊಂಡು ಇದ್ದಾನೆ. ಇನ್ನಷ್ಟು ದಿನಗಳ ಅಂತರದಲ್ಲಿ ಇನ್ನೊಂದು ಮದುವೆಯಾಗುತ್ತಾನೆ.  

ಈ ಸಿನಿಮಾರಂಗದಲ್ಲಿ ಒಂದು ವೇಳೆ ಹೆಚ್ಚು ಬೆಳೆದರೆ ನಾವು ಇವನನ್ನು ಏನೂ ಮಾಡಲು ಆಗುವುದಿಲ್ಲ ಎನ್ನುವ ದ್ವೇಷ ಇಟ್ಟುಕೊಂಡು ಎಲ್ಲಾ ಪ್ಲಾನ್ ಮಾಡಿ ಸತೀಶ್ ವಜ್ರನ ಹತ್ಯೆ ಮಾಡಿ ಹೋಗಿದ್ದಾರೆ ಎಂದು ಕೇಳಿಬಂದಿದೆ. ಹೌದು ಸತೀಶ್ ವಜ್ರ ಹತ್ಯೆಗೂ ಒಂದು ವಾರಕ್ಕೂ ಮುನ್ನ ಸರಿಯಾದ ರೀತಿ ಪ್ಲಾನ್ ಮಾಡಿಕೊಂಡ ಸುದರ್ಶನ್, ಮೊದಲು ಭಾವನನ್ನು ನಂಬಿಸಬೇಕು ಎಂದು ಆತನ ಜೊತೆ ತುಂಬಾ ಚೆನ್ನಾಗಿ ಮಾತನಾಡುತ್ತಿದ್ದನಂತೆ. ಫೋನ್ ಮೂಲಕ ಆತನ ಆರೋಗ್ಯ ಕ್ಷೇಮ ವಿಚಾರಿಸುತ್ತಾ, ನಂಬಿಸುವ ಪ್ರಯತ್ನ ಮಾಡಿದ್ದಾನೆ. ಇದನ್ನೆಲ್ಲ ನಂಬಿದ ಸತೀಶ್ ವಜ್ರ ಅವನೇನು ಚಿಕ್ಕವನು, ಆಗಿದ್ದು ಆಗಿಹೋಯಿತು, ಈಗ ಸ್ವಲ್ಪ ತಿಳಿದುಕೊಂಡಿದ್ದಾನೆ, ಎಷ್ಟೇ ಆಗಲಿ ನನ್ನ ಹೆಂಡತಿಯ ತಮ್ಮ ಎಂದು ಆತನ ಜೊತೆ ಪ್ರೀತಿಯಿಂದ ಸತೀಶ್ ವಜ್ರ ಅವರು ಮಾತನಾಡಲು ಮತ್ತೆ ಮುಂದುವರಿಸಿದರಂತೆ.

ಆದರೆ ದಿನೇ ದಿನೇ ನಟ ಸತೀಶ್ ವಜ್ರ ಅವರ ಜೊತೆ ಹೆಚ್ಚು ಮಾತನಾಡಿಸುತ್ತಾ ಎಲ್ಲಾ ಪ್ಲಾನ್ ಮಾಡಿಕೊಂಡಂತೆ, ಅಂದು ರಾತ್ರಿ ಬೆಂಗಳೂರಿನ ಆರ್ ಆರ್ ನಗರದ ಸತೀಶ್ ಮನೆಗೆ ಬಂದು, ಅಲ್ಲೇ ಉಳಿಯಲು ಸತೀಶ್ ಜೊತೆ ಮಾತನಾಡಿ ನಂಬಿಸಿ, ಆತ ಮಲಗಿದ ಮೇಲೆಯೇ ಈ ರೀತಿ ಕೃತ್ಯವೆಸಗಿ ಭಾವನ ಹತ್ಯೆ ಮಾಡಿ ಹೋಗಿದ್ದಾರೆ ಎನ್ನಲಾಗಿದೆ. ಹೌದು ಜೀವನದಲ್ಲಿ ಒಬ್ಬ ಮನುಷ್ಯ ಆಗಲಿ, ಅಥವಾ ಅದು ಒಂದು ವಿಚಾರ ಆಗಲಿ, ಎಷ್ಟು ನಂಬಬೇಕು ಅಷ್ಟೇ ನಂಬಬೇಕು. ಆದರೆ ತೀರಾ ನಂಬಿಕೆ ಒಳ್ಳೆಯದು ಅಲ್ಲ ಎಂಬುದಾಗಿ ಈ ಮೂಲಕ ತಿಳಿಯುತ್ತದೆ. ಸತೀಶ್ ಆ ರೀತಿ ಯೋಚನೆ ಮಾಡದೆ ಇದ್ದರೂ ಎಂದರೆ ಅವರು ತುಂಬಾ ಜೀವನದಲ್ಲಿ ಎಲ್ಲಾ ತಿಳಿದುಕೊಂಡು ಜೀವನ ಮಾಡುತ್ತಿದ್ದರು ಎಂದು ಎನಿಸುತ್ತದೆ. ಹಾಗೇನೂ ಮಾಡಲ್ಲ ನನ್ನ ಬಾಮೈದುನ ಎಂದು ನಂಬಿರುವ ಸತೀಶ್ ವಜ್ರನ ಮನಸ್ಸು ಎಷ್ಟು ಒಳ್ಳೆಯದು ಆಗಿರಬೇಡ ಅಲ್ವಾ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಪ್ರಕಾರ ಉಸಿರುಗಟ್ಟಿಸಿ ಸತೀಶ್ ದ್ವನಿ ಹೊರ ಹೋಗದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿ ಕೇಳಿ ಬಂದಿದೆ. 

ಹೌದು ಸತೀಶ್ ವಜ್ರನ ಹತ್ಯೆಮಾಡಿದ ಸುದರ್ಶನ್ ಈಗ ಜೈಲುಪಾಲು. ಸತೀಶ್ ಅವರ ಮಗನೂ ಸಹ ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾಗಿದೆ. ಇದೊಂದೇ ಕಾರಣಕ್ಕೆ ಸತೀಶ್ ವಜ್ರ ಅವರ ಹತ್ಯೆ ಮಾಡಿದ್ದಾರೆ ಸುದರ್ಶನ್ ಎಂದು ನಾವು ಹೇಳಲಿಕ್ಕಾಗದು.. ಬೇರೆ ಏನಾದ್ರೂ ಕಾರಣ ಇತ್ತೋ ಅದು ಗೊತ್ತಿಲ್ಲ. ಮಾಹಿತಿ ಇನ್ನೂ ಹೆಚ್ಚು ಹೊರಬಂದಿಲ್ಲ. ಈ ವಿಚಾರ ತಿಳಿದ ಕನ್ನಡಿಗರು ಸತೀಶ್ ವಜ್ರನ ಅಭಿಮಾನಿಗಳು ಆ ಸುದರ್ಶನ್ಗೂ ಸಹ ದೊಡ್ಡ ಶಿಕ್ಷೆಯಾಗಬೇಕು ಎಂದು ಆಕ್ರೋಶ ಅವರ ಹಾಕುತ್ತಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ.