ಸತ್ಯ ಸೀರಿಯಲ್ ನಾಯಕಿ ಸತ್ಯ ಅವರ ನಿಜವಾದ ಗಂಡ ಯಾರು ಗೊತ್ತಾ..? ಅವ್ರು ಚಿತ್ರರಂಗದವರೆ ಇಲ್ನೋಡಿ

Updated: Tuesday, February 23, 2021, 19:18 [IST]

ಹೌದು ಈಗಾಗಲೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಪ್ರಸಾರವಾಗುತ್ತಿದ್ದು ಕೆಲ ಸೀರಿಯಲ್ಗಳು ತುಂಬಾ ಕಾಂಪಿಟೇಶನ್ ಕೊಡುತ್ತಾ ಹೋಗುತ್ತಿವೆ. ಹೌದು ಈಗಾಗಲೇ ಪ್ರಸಾರವಾಗುತ್ತಿರುವ ಗಟ್ಟಿಮೇಳ, ಜೊತೆ ಜೊತೆಯಲಿ, ಕನ್ನಡತಿ, ಹೀಗೆ ಅನೇಕ ಧಾರವಾಹಿಗಳು ಕನ್ನಡಿಗರ ಮನಸ್ಸನ್ನು ಗೆದ್ದು ತುಂಬಾ ಫೇಮಸ್ ಆಗಿವೆ. ಹಾಗೆ ಜನಪ್ರಿಯತೆಯನ್ನು ಸಹ ಕೆಲವು ಸೀರಿಯಲ್ಗಳು ಹೊಂದಿವೆ. ಅದೇ ನಿಟ್ಟಿನಲ್ಲಿ ಸತ್ಯ ಧಾರವಾಹಿ ಕೂಡ ಈಗಾಗಲೇ ಹೆಚ್ಚು ಜನಪ್ರಿಯತೆ ಹೊಂದಿದ್ದು, ಸಿರಿಯಲ್ ನಟಿ ಸತ್ಯ ಅವರು ಎಲ್ಲರಿಗೂ ತುಂಬ ಹತ್ತಿರವಾಗಿದ್ದಾರೆ.     

ಸತ್ಯ ಧಾರವಾಹಿಯ ಪಾತ್ರದಾರಿ ಗೌತಮಿ ಜಾದವ್ ನಿಜ ಜೀವನದಲ್ಲಿ ಸತ್ಯ ಧಾರಾವಾಹಿಯ ಪಾತ್ರಕ್ಕೆ ಉಲ್ಟಾ ಆಗಿದ್ದಾರಂತೆ. ಹೌದು ತುಂಬಾ ಮೃದು ಸ್ವಭಾವದವರು ಎನ್ನಲಾಗಿದೆ. ಹಾಗೇನೆ ಇವರ ನಿಜ ಜೀವನದಲ್ಲಿ ಇವರ ಪತಿ ಕೂಡ ಸಿನಿಮಾರಂಗದವರೆ ಆಗಿದ್ದು, ಆದರೆ ಇವರು ನಟರಲ್ಲ, ಬದಲಿಗೆ ಒಬ್ಬ ಸಿನಿಮಾಟೋಗ್ರಾಫರ್ ಎಂದು ತಿಳಿದುಬಂದಿದೆ. ಹೌದು ಅಭಿಷೇಕ್ ಕಾಸರಗೋಡ್ ಅವ್ರು ಗೌತಮಿ ಜಾದವ್ ಅವರನ್ನು ವಿವಾಹವಾಗಿದ್ದಾರೆ. ಮತ್ತು ಇವರು ಗಣೇಶ್ ಎಂಬ ಪತ್ರಕರ್ತರೊಬ್ಬರ ಮಗ ಎಂದು ತಿಳಿದುಬಂದಿದೆ. ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಿನಿಮಾ ಮಾಯಾಬಜಾರ್ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಕೆಲಸ ಮಾಡಿದ್ದಾರಂತೆ.     

ಆಪರೇಷನ್ ಅಲಮೇಲಮ್ಮ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿರುವ ಅಭಿಷೇಕ್ ಅವರು, ಇದೆ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಗೌತಮಿ ಹಾಗೂ ಮತ್ತು ಅಭಿಷೇಕ್ ದಂಪತಿಗಳು ಒಬ್ಬರಿಗೊಬ್ಬರು ತಮ್ಮ ತಮ್ಮ ಕೆಲಸಗಳಲ್ಲಿ ಸಾತ್ ಕೊಟ್ಟುಕೊಂಡು, ಒಬ್ಬರು ಇನ್ನೊಬ್ಬರ ಯಶಸ್ಸನ್ನ ಕಾಣುತ್ತಾರಂತೆ, ನಿಜಜೀವನದಲ್ಲಿ ತುಂಬಾ ಸಂತೋಷದಿಂದ ಇದ್ದಾರೆ ಕೂಡ. ಹಾಗೆ ಗೌತಮಿ ಜಾಧವ್, ಅವರ ಮನೆಯಲ್ಲಿ ನಾಯಿಜೊತೆ ಹೆಚ್ಚು ಕಾಲ ಕಳೆಯುತ್ತಾರೆ, ಹಾಗೆ ತಮ್ಮ ಪ್ರೀತಿ ನಾಯಿಗೆ ಊಟ ಮಾಡಿಸುತ್ತಾ ತುಂಬಾ ಸಂತೋಷದಿಂದ ಇರುತ್ತಾರೆ ಎಂದು ತಿಳಿದುಬಂದಿದೆ. ಹೌದು ಸ್ನೇಹತರೆ ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮತ್ತು ಈ ಕ್ಯೂಟ್ ಜೋಡಿ ಹೇಗಿದೆ ಕಾಮೆಂಟ್ ಮಾಡಿ, ಧನ್ಯವಾದಗಳು...