ಅಂದು ತುತ್ತು ಅನ್ನಕ್ಕೂ ಪರದಾಡಿದ ಅನುಶ್ರೀ, ಇಂದು ಕಟ್ಟಿಸಿದ ಮನೆ ನೋಡಿದ್ರೆ ಪಕ್ಕಾ ಬೆರಗಾಗ್ತಿರ..!
Updated: Monday, February 22, 2021, 11:31 [IST]

ಹೌದು ಕನ್ನಡಿಗರ ಮನಗೆದ್ದಿರುವ ಸರಿಗಮಪ ಖ್ಯಾತಿಯ ನಿರೂಪಕಿ ಅನುಶ್ರೀಯವರು ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಪರದಾಡುತ್ತಿದ್ದರಂತೆ. ಹೆಂಡತಿ-ಮಕ್ಕಳನ್ನು ಸಾಕುವುದಕ್ಕೆ ಆಗಲಿಲ್ಲವೆಂದು ಬಿಟ್ಟುಹೋದ ತಂದೆಯ ಜವಾಬ್ದಾರಿಯನ್ನು ಅನುಶ್ರೀ ಅವರು ಹೊತ್ತರು. ಜೀವನ ಕಟ್ಟಿಕೊಳ್ಳಲು ಬೆಂಗಳೂರಿಗೆ ಕಾಲಿಟ್ಟ ಅನುಶ್ರೀ ತಮ್ಮ ಮತ್ತು ತಾಯಿಯನ್ನ ಸ್ವತಃ ತಾವೇ ನೋಡಿಕೊಳ್ಳಲು ಮುಂದಾದರು. ಮಂಗಳೂರು ಮೂಲದ ಅನುಶ್ರೀ ತುಳು ಮಾತನಾಡುತ್ತಿದ್ದು, ಮೊದಲಿಗೆ ತುತ್ತು ಅನ್ನಕ್ಕಾಗಿ ಕೂಲಿ ಕೆಲಸ ಕೂಡ ಮಾಡಿದರಂತೆ.
ಚಟಪಟ ಮಾತನಾಡುವ ಈ ಹುಡುಗಿಯ ಮಾತು ಕೇಳಿ ಸಣ್ಣಪುಟ್ಟ ವೇದಿಕೆಯಲ್ಲಿ ನಿರೂಪಕಿಯಾಗಿ ಮೊದಲಿಗೆ ಕೆಲಸ ಮಾಡಲು ಮುಂದಾಗಿದ್ದಾರೆ. ಬಳಿಕ ಕಷ್ಟದ ಮೆಟ್ಟಿಲು ಹತ್ತಿ ಬಂದಂತೆ, ಹೆಚ್ಚು ಯಶಸ್ಸು ತಂದಿದ್ದು ಮಾತ್ರ ಸಿಂಗಿಂಗ್ ಶೋ ಸರಿಗಮಪ. ಹೌದು ಅಂದು ಅಷ್ಟು ಕಷ್ಟಪಟ್ಟು ಈಗ ಎಲ್ಲರ ಮನೆಮಾತಾಗಿರುವ ಅನುಶ್ರೀ ಅವರು ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ ಹಾಗೆ ಉತ್ತುಂಗದಲ್ಲಿದ್ದಾರೆ ಕೂಡ.
ಇದೀಗ ಸ್ವಂತ ಮನೆಯನ್ನು ಕೂಡ ಅನುಶ್ರೀಯವರು ಕಟ್ಟಿದ್ದಾರೆ ಎಂದು ತಿಳಿದುಬಂದಿದೆ.ಆ ಮನೆ ನೋಡಲು ಹೇಗಿದೆ ಗೊತ್ತಾ..? ಈ ಲೇಖನದ ಕೊನೆಯಲ್ಲಿರುವ ವಿಡಿಯೋವನ್ನು ನೋಡಿ,ಬಳಿಕ ನಿಮ್ಮ ಅಭಿಪ್ರಾಯಗಳನ್ನು ನಮಗೆ ತಿಳಿಸಿ, ಮತ್ತು ವಿಡಿಯೋ ಇಷ್ಟವಾದಲ್ಲಿ, ಅನುಶ್ರೀ ಕಷ್ಟ ಪಟ್ಟು ಮೇಲೆ ಬಂದ ರೀತಿ ನೋಡಿ ಎಲ್ಲರಿಗೂ ಮಾದರಿಯಂತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ, ಈ ಮಾಹಿತಿ ಶೇರ್ ಮಾಡಿ, ಧನ್ಯವಾದಗಳು....