Charlie 777 : ಚಾರ್ಲಿ ಚಿತ್ರ ನೋಡಿದವರೆಲ್ಲಾ ಕಣ್ಣೀರು ಹಾಕುತ್ತಿರುವುದೇಕೆ : ಇಲ್ಲಿದೆ ನೋಡಿ ವಿಮರ್ಶೆ
Updated:Friday, June 10, 2022, 12:31[IST]

ರಕ್ಷಿತ್ ಶೆಟ್ಟಿ ಮತ್ತು ಕಿರಣ್ರಾಜ್ ಕಾಂಬಿನೇಷನ್ನಲ್ಲಿ 777 ಚಾರ್ಲಿ ಸಿನಿಮಾ ಮೊದಲಿನಿಂದಲೂ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಆರಂಭದಿಂದಲೂ ಒಂದು ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. 777 ಚಾರ್ಲಿ ಚಿತ್ರ ತುಂಬಾ ವಿಶೇಷವಾಗಿದ್ದು, ಭಾವನಾತ್ಮಕವಾಗಿ ಚಿತ್ರೀಕರಿಸಲಾಗಿದೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಇಂದು ರಿಲೀಸ್ ಆಗಿದೆ. ಪರಮಂವ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಕಿರಣ್ ರಾಜ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ನೋಬಿನ್ ಪೌಲ್ ಅವರು ಸಂಗೀತ ನೀಡಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಹಲವರು ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಶಾರ್ವರಿ, ರಾಜ್ ಬಿ ಶೆಟ್ಟಿ, ದಾನೀಶ್ ಸೇಠ್, ಸಂಗೀತ ಶೃಂಗೇರಿ ಸೇರಿದಂತೆ ಹಲವರು ನಟಿಸಿದ್ದಾರೆ.
ರಕ್ಷಿತ್ ಶೆಟ್ಟಿ ಧರ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಧರ್ಮನಿಗೆ ತಂದೆ-ತಾಯಿ ಇರುವುದಿಲ್ಲ. ಶಿಸ್ತಿನ ಬದುಕು ಅವನದ್ದಲ್ಲ. ಯಾಂತ್ರಿಕ ಬದುಕು ನಡೆಸುತ್ತಾನೆ. ಧರ್ಮ ಯಾರೊಂದಿಗೂ ಹೊಂದಿಕೊಳ್ಳುವುದಿಲ್ಲ. ಮಕ್ಕಳು ಕೂಡ ಧರ್ಮನನ್ನು ಹಿಟ್ಲರ್ ಎಂದು ಕರೆಯುತ್ತಾರೆ. ಯಾರೊಂದಿಗೂ ಸಂಪರ್ಕವಿಲ್ಲದ ಧರ್ಮ ಮನೆಯನ್ನು ಕ್ಲೀನ್ ಮಾಡುವುದನ್ನೇ ಬಿಟ್ಟು 10 ವರ್ಷಗಳಾಗಿರುತ್ತದೆ. ಇದೇ ವೇಳೆ ಧರ್ಮನ ಬದುಕುನಲ್ಲಿ ಚಾರ್ಲಿ ಎಂಟ್ರಿಯಾಗುತ್ತದೆ. ಈ ಶ್ವಾನ ಬಂದ ನಂತರ ಧರ್ಮನ ಜೀವನದಲ್ಲಿ ದೊಡ್ಡ ತಿರುವು ಬರುತ್ತದೆ. ಅಲ್ಲಿಂದ ಧರ್ಮ ಹಾಗೂ ಚಾರ್ಲಿ ಒಟ್ಟಿಗೆ ಪ್ರಯಾಣಿಸುತ್ತಾರೆ. ಈ ಪಯಣದಲ್ಲಿ ಬರುವ ಸಾಲುಗಳು, ಆಗುವ ಅನುಭವಗಳು ಎಲ್ಲವನ್ನೂ ಧರ್ಮ ಹಾಗಗೂ ಚಾರ್ಲಿ ಇಬ್ಬರೂ ಎದುರಿಸುತ್ತಾರೆ. ಇದೇ ಚಿತ್ರದ ಕಥೆ.
ಚಿತ್ರದಲ್ಲಿ ಭಾವುಕತೆಗೆ ಒತ್ತು ಕೊಟ್ಟಿದೆ. ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗುತ್ತದೆ. ತಾಳ್ಮೆಯಿಂದ ಕಿರಣ್ ರಾಜ್ ಅವರು ಚಿತ್ರ ನಿರ್ಮಿಸಿದ್ದಾರೆ. ಇದರಲ್ಲಿ ಕ್ಯಾಮೆರಾ ವರ್ಕ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಇನ್ನು ಚಿತ್ರದಲ್ಲಿನ ಡಾಗ್ ಶೋ ಸೀನ್ ಅಂತೂ ತುಂಬಾ ಚೆನ್ನಾಗಿದೆ. ತಮಾಷೆಯಾಗಿರುವ ಚಿತ್ರದಲ್ಲಿ ಕಣ್ಣಿರು ತರಿಸುವಂತಹ ಸನ್ನಿವೇಷಗಳೂ ಇವೆ. ಸಿನಿಮಾದ ಕೊನೆಯಲ್ಲಿ ಎಲ್ಲರ ಬಾಯಲ್ಲೂ ವಾವ್, ಸೂಪರ್ ಎಂಬ ಪದಗಳು ತಮಗೇ ತಿಳಿಯದಂತೆ ಬರುವುದಂತೂ ಸತ್ಯ. ನೀವೂ ಮಿಸ್ ಮಾಡದೇ ಈ ಚಿತ್ರವನ್ನು ಥಿಯೇಟರ್ ಗೆ ಹೋಗಿ ನೋಡಿ. ( video credit : review corner )