Raja Rani 2 : ರಾಜಾರಾಣಿ 2 ಯಾರೆಲ್ಲ ಜೋಡಿಗಳು ಬರುತ್ತಿದ್ದಾರೆ ? ಇಲ್ಲಿದೆ ಲಿಸ್ಟ್

By Infoflick Correspondent

Updated:Tuesday, June 7, 2022, 21:39[IST]

Raja Rani 2 :   ರಾಜಾರಾಣಿ 2 ಯಾರೆಲ್ಲ ಜೋಡಿಗಳು ಬರುತ್ತಿದ್ದಾರೆ ? ಇಲ್ಲಿದೆ ಲಿಸ್ಟ್

ಬಹುನಿರೀಕ್ಷೆಯ ರಾಜಾ ರಾಣಿ -2 ಮತ್ತೆ ಪ್ರಸಾರವಾಗುತ್ತಿದೆ. ಜೂನ್ 11ರಂದು ರಾಜ ರಾಣಿ-2 ರಿಯಾಲಿಟಿ ಶೋ ಅದ್ದೂರಿಯಾಗಿ ಪ್ರಾರಂಭವಾಗುತ್ತಿದೆ. ಈಗಾಗಲೇ ಅದ್ದೂರಿ ಆರಂಭದ ಪ್ರೋಮೋ ರಿಲೀಸ್ ಆಗಿದ್ದು ಪ್ರೇಕ್ಷಕರು ಕಾತರರಾಗಿದ್ದಾರೆ. ವಾರಾಂತ್ಯದಲ್ಲಿ ರಾತ್ರಿ 7.30ಕ್ಕೆ ರಾಜ-ರಾಣಿ-2 ಪ್ರಸಾರವಾಗಲಿದೆ 

ಈ ಶೋನಲ್ಲಿ 12 ಪ್ರಸಿದ್ಧ ಜೋಡಿಗಳು ಭಾಗಿಯಾಗಲಿದ್ದಾರೆ. ಈಗಾಗಲೇ ಸ್ಪರ್ಧಿಗಳ ಲಿಸ್ಟ್ ರಿಲೀಸ್ ಆಗಿದ್ದು ಸ್ಪರ್ಧಿಗಳ ಪುಟ್ಟ ಪರಿಚಯದ ವಿಡಿಯೋವನ್ನು ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ. ಈ ಬಾರಿ ಕೂಡ ಅನೇಕ ಸೆಲೆಬ್ರಿಟಿ ಜೋಡಿಗಳು ರಾಜ-ರಾಣಿ-2 ಶೋನಲ್ಲಿ ಭಾಗಿಯಾಗುತ್ತಿದ್ದಾರೆ.     

ವೀಣಾ ಸುಂದರ್ ಮತ್ತು ಸುಂದರ್, ಅರುಣ್ ಮಾಧುರ್ಯ, ಸಂದೇಶ್ ಮನೇಶಾ, ಕಾವ್ಯ ಮತ್ತು ಕುಮಾರ್, ಸುಜಾತಾ ಮತ್ತು ಅಕ್ಷಯ್ ದಂಪತಿ ಸೇರಿದಂತೆ ಇನ್ನು ಅನೇಕ ಜೋಡಿಗಳು ರಾಜ-ರಾಣಿ ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. 

ರಾಜ- ರಾಣಿ ಮೊದಲ ಸೀಸನ್‌ನಲ್ಲಿ ಕಿರುತೆರೆಯ ಖ್ಯಾತ ನಟಿ ನೇಹಾ ಗೌಡ ಮತ್ತು ಚಂದನ್ ದಂಪತಿ ವಿನ್ನರ್ ಆಗಿ ಹೊರಹೊಮ್ಮಿದ್ದರು. 2ನೇ ಸೀಸನ್ ಯಾರು ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ

(video credit : kannada entertainment )