ಗಿಚ್ಚಿ ಗಿಲಿಗಿಲಿ ಶೋಗೆ ಯಾರೆಲ್ಲಾ ಕಂಟೆಸ್ಟೆಂಟ್ ಆಗಿ ಬರುತ್ತಿದ್ದಾರೆ ಗೊತ್ತಾ..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

By Infoflick Correspondent

Updated:Friday, April 8, 2022, 15:59[IST]

ಗಿಚ್ಚಿ ಗಿಲಿಗಿಲಿ ಶೋಗೆ ಯಾರೆಲ್ಲಾ ಕಂಟೆಸ್ಟೆಂಟ್ ಆಗಿ ಬರುತ್ತಿದ್ದಾರೆ ಗೊತ್ತಾ..? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

 

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ವಿಭಿನ್ನವಾದ ಸಕ್ಕತ್ ಕಾರ್ಯಕ್ರಮಗಳು ಈಗಾಗಲೇ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ಹೊಸಬರಲ್ಲಿರುವ ಸಾಕಷ್ಟು ನಟನೆಯ ಕಲೆಯನ್ನು, ಅವರ ಹೊಸತನವನ್ನು ಈಗಾಗಲೇ ಸರಿಗಮಪ, ಕಾಮಿಡಿ ಕಿಲಾಡಿಗಳು, ಹಾಗೇನೇ ಈ ಸಣ್ಣ ಮಕ್ಕಳ ಕಾರ್ಯಕ್ರಮಗಳು, ಡ್ರಾಮಾ ಜೂನಿಯರ್ಸ್ ಹೀಗೆ ಅತ್ಯದ್ಭುತ ಕಾರ್ಯಕ್ರಮದ ವೇದಿಕೆ ಮೂಲಕ ಸಾಕಷ್ಟು ಜನರಿಗೆ ಬೆಳಕಾಗಿವೆ. ಇದೀಗ ಅಂತಹುದೇ ಮತ್ತೊಂದು ಮನರಂಜನೆ ನೀಡುವ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ತರುವಲ್ಲಿ ಮುಂದಾಗಿದ್ದು, ಏಪ್ರಿಲ್ 9 ನೇ ತಾರೀಖಿನಂದು ರಾತ್ರಿ 7.30ಕ್ಕೆ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮ ಅದ್ದೂರಿಯಾಗಿ ಆರಂಭವಾಗಲಿದೆ.

ಗಿಚ್ಚಿ ಗಿಲಿ ಗಿಲಿ ಎನ್ನುವ ಸಕ್ಕತ್ ಕಾನ್ಸೆಪ್ಟ್ ಮೂಲಕ ಕಾಮಿಡಿ ಮಾಡಲು ಇದೆ ಏಪ್ರಿಲ್ ಒಂಬತ್ತರಿಂದ ಕಲರ್ಸ್ ಕನ್ನಡದಲ್ಲಿ ಹೊಸ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದು ಕನ್ನಡದ ಎಲ್ಲಾ ವೀಕ್ಷಕರು ಹೆಚ್ಚು ಕುತೂಹಲಕಾರಿಯಾಗಿದ್ದಾರೆ ಎನ್ನಲಾಗಿದೆ. ಹೌದು ಈಗಾಗಲೇ ಜಡ್ಜಸ್ ಗಳಾಗಿ ಮಜಾ ಟಾಕೀಸ್ ನ ಸೃಜನ್ ಲೋಕೇಶ್, ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅವರು ಅವರ ಕೆಲಸವನ್ನು ನಿಭಾಯಿಸಲಿದ್ದಾರೆ. ಜೊತೆಗೆ ಬಿಗ್ ಬಾಸ್ ವಿನ್ನರ್ ಹಾಗೂ ಖ್ಯಾತ ಸ್ಪೋರ್ಟ್ಸ್ ನ ನಿರೂಪಕಿ ಸಹ ನಿರೂಪಣೆ ಮಾಡಲಿದ್ದಾರೆ. ಹೌದು ರೀನಾ ಡಿಸೋಜ ಹಾಗೂ ಮಂಜು ಪಾವಗಡ ಗಿಚ್ಚಿ ಗಿಲಿಗಿಲಿ ಎಂಬ ಕಾರ್ಯಕ್ರಮದ ನಿರೂಪಕರಾಗಿ ಸೇರಿದ್ದಾರೆ. ಹೌದು ಈ ಮಂಜು ಪಾವಗಡ ಹಾಗೂ ರೀನ ಡಿಸೋಜ  ಅವರು ಹೇಗೆ ನಿರೂಪಣೆಯ ಮಾಡುತ್ತಾರೆ ಎಂದು ಕಾದು ನೋಡಬೇಕು.

ಈ ಕಾರ್ಯಕ್ರಮದ ನಿರೂಪಕರಾಗಿದ್ದು ನೂತನ ಕಾರ್ಯಕ್ರಮಕ್ಕೆ ಯಾವೆಲ್ಲ ಕಂಟೆಸ್ಟೆಂಟ್ ಗಳು ಬರಲಿದ್ದಾರೆ ಎಂದು ವೀಕ್ಷಣೆ ಪ್ರಿಯರು ಹೆಚ್ಚು ಕುತೂಹಲಕಾರಿಯಾಗಿ ಕಾರ್ಯಕ್ರಮವನ್ನು ಎದುರು ನೋಡುತ್ತಿದ್ದಾರೆ. ಇದೀಗ ಆ ಮಾಹಿತಿ ಸಹ ಬಹಿರಂಗವಾಗಿ ತಿಳಿದುಬಂದಿದೆ. ಅಸಲಿಗೆ ಯಾವೆಲ್ಲ ಕಂಟೆಸ್ಟೆಂಟ್ ಗಳು ಈ ಗಿಚ್ಚಿ ಗಿಲಿ ಗಿಲಿ ಎಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ ಗೊತ್ತಾ..? ಆ ಹತ್ತು ಜನರ ಲಿಸ್ಟ್ ಬಿಡುಗಡೆಯಾಗಿದ್ದು, ಅವರವರ ಬೇರೆಬೇರೆಯ ವೇದಿಕೆ ಮೂಲಕ ಇದೀಗ ಕಾಮಿಡಿ ವೇದಿಕೆಗೆ ಬರುತ್ತಿದ್ದಾರೆ. ಅವರು ಯಾರು ಎಂಬುದಾಗಿ ತಿಳಿಯಲು ಈ ವಿಡಿಯೋ ನೋಡಿ. ಹಾಗೆ ಇವರಲ್ಲಿ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಆಗಬಹುದು ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...

(video credit ; kannada entertainment )