Meera Jasmine : ಅಪ್ಪು ನಟಿಗೆ ದಾಂಪತ್ಯ ಜೀವನದಲ್ಲಿ ಏನಾಯಿತು..? ಇದೀಗ ಮೀರಾ ಹೇಗಾಗಿದ್ದಾರೆ ನೋಡಿ..!

By Infoflick Correspondent

Updated:Tuesday, June 28, 2022, 22:23[IST]

Meera Jasmine : ಅಪ್ಪು ನಟಿಗೆ ದಾಂಪತ್ಯ ಜೀವನದಲ್ಲಿ ಏನಾಯಿತು..? ಇದೀಗ ಮೀರಾ ಹೇಗಾಗಿದ್ದಾರೆ ನೋಡಿ..!

ಸ್ಯಾಂಡಲ್ವುಡ್ ಚಿತ್ರರಂಗಕ್ಕೆ ಸಾಕಷ್ಟು ಬೇರೆ ರಾಜ್ಯದಿಂದ ನಟಿಮಣಿಯರು ಬಂದು ಯಶಸ್ವಿಯಾಗಿದ್ದಾರೆ. ಕನ್ನಡದ ಚಿತ್ರರಂಗದಲ್ಲಿ ಅವರದೇ ಆದ ಅಪಾರ ಅಭಿಮಾನಿಗಳ ಬಳಗವನ್ನು ಕೂಡ ಹೊಂದಿ ಹೆಚ್ಚು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು. ಹೌದು ಅವರ ಸಾಲಿನಲ್ಲಿ ನಟಿ ಮೀರಾ ಜಾಸ್ಮಿನ್ ಸಹ ಬರುತ್ತಾರೆ. ಕೇರಳದ ತಿರುವಳ್ಳ ಎಂಬ ಊರಲ್ಲಿ ಹುಟ್ಟಿದ ನಟಿ ಮೀರಾ ಜಾಸ್ಮಿನ್ 1982 ರಲ್ಲಿ ಜನಿಸಿದ್ದಾರೆ. ಹಾಗೆ ನಿಜ ಜೀವನದಲ್ಲಿ ಒಬ್ಬ ವೈದ್ಯರು ಆಗಬೇಕೆಂದುಕೊಂಡ ನಟಿಗೆ ನಿರ್ದೇಶಕರೊಬ್ಬರು ಗುರುತಿಸಿ ಅವರಿಗೆ ಸಿನಿಮಾದಲ್ಲಿ ಅವಕಾಶ ಕೊಡುತ್ತಾರೆ. 2002ರಲ್ಲಿ ಮಲಯಾಳಂ ಸಿನಿಮಾ ಮೂಲಕ ಅವಕಾಶ ಪಡೆದ ನಟಿ ರಾಜ್ಯಪ್ರಶಸ್ತಿ ಸಿನಿಮಾವೊಂದಕ್ಕೆ ತೆಗದುಕೊಂಡಿದ್ದು ವಿಶೇಷ.

2004ರಲ್ಲಿಯೂ ಕೂಡ ಮತ್ತೊಂದು ಸಿನಿಮಾ ಮಾಡಿದ್ದು ಅದೇ ವರ್ಷ ನಮ್ಮ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆ ಮೌರ್ಯ ಸಿನಿಮಾ ಕೂಡ ಮಾಡಿ ಯಶಸ್ವಿಯಾದವರು. ಮೌರ್ಯ ಸಿನಿಮಾ ಬಂದ ಮೇಲೆ ನಟಿ ಮೀರಾ ಜಸ್ಮಿನ್ ಅವರು ದೇವರು ಕೊಟ್ಟ ತಂಗಿ  ಅರಸು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಮೀರಾ ಜಾಸ್ಮಿನ್ ಜೀವನದಲ್ಲಿ ಎಲ್ಲವೂ ಇತ್ತು. ಸಿನಿಮಾರಂಗದಲ್ಲಿ ಅಂದುಕೊಂಡಂತೆ ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು ಎಂದು ಹೇಳಬಹುದು. ಅವಕಾಶಗಳು ಕೂಡ ಬರುತ್ತಿದ್ದವು. ಆದರೆ ಇವರ ವೈವಾಹಿಕ ಜೀವನ ಸುಖಕರವಾಗಿರಲಿಲ್ಲ ರಂದು ಹೇಳಲಾಗಿದೆ. 2014ರಲ್ಲಿ ಅನಿಲ್ ಎಂಬುವವರ ಜೊತೆ ಮೀರಾ ಜಾಸ್ಮಿನ್ ಮದುವೆಯಾಗುತ್ತಾರೆ.

ಈ ಅನಿಲ್ ಅವರಿಗೆ ಆಗಲೇ ಒಂದು ಮದುವೆಯಾಗಿ ಪೋಲೀಸ್ ಬಿಗಿಬಂದೋಬಸ್ತ್ ನಲ್ಲಿಯೇ ಮೀರಾ ಜಾಸ್ಮಿನ್ ಅವರನ್ನು ಮದುವೆಯಾಗುತ್ತಾನೆ. ಅದು ಮೀರಾ ಅವರ ಜೊತೆ ಎರಡನೇ ಮದುವೆಯಾಗಿರೋದು. ಮೊದಲನೇ ಹೆಂಡತಿಗೆ ವಿಚ್ಛೇದನ ನೀಡದೆನೆ ಮದುವೆಯಾದನು. ಹೌದು ತದನಂತರ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಈ ಅನಿಲನ ಜೊತೆಗ ನಟಿ ಮೀರಾ ಜಾಸ್ಮಿನ್ ಇರುವ ಸಮಯ ಬಂದಿತ್ತು. ಆ ನಂತರದ ದಿನಗಳಲ್ಲಿ ನಟಿ ಮೀರಾ ಜಾಸ್ಮಿನ್ ಅನಿಲ್ ನ ಜೊತೆ ದಾಂಪತ್ಯ ಜೀವನ ಮುಂದುವರೆಸದೆ ಕಾನೂನುಬದ್ಧ ವಿಚ್ಛೇದನ ಪಡೆದು ದೂರಾಗಿದ್ದರು ಎನ್ನಲಾಗಿದೆ. ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿರ್ರುವ ನಟಿ ಮೀರಾ ಜಾಸ್ಮಿನ್ ಸಾಂಪ್ರದಾಯಿಕ ಉಡುಗೆ ಮತ್ತು ಹಾಟ್ ಗ್ಲಾಮರಸ್ ಆಗಿ ಕಾಣಿಸುತ್ತಿದ್ದಾರೆ. ಹೆಚ್ಚು ವೈರಲ್ ಸಹ ಆಗುತ್ತಿದ್ದಾರೆ. ಇಲ್ಲಿದೆ ನೋಡಿ ನಟಿ ಮೀರಾ ಅವರ ಇನ್ಸ್ಟಾಗ್ರಾಮ್ ಖಾತೆ..

 

ಮೀರಾ ಜಾಸ್ಮಿನ್  ಅವರು ಇದೀಗ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..