ಗಾಜನೂರಿನ ಹಳೆ ಮನೆಯಲ್ಲಿ ಅಪ್ಪು ಫೋಟೋ..! ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

By Infoflick Correspondent

Updated:Thursday, March 3, 2022, 14:00[IST]

ಗಾಜನೂರಿನ ಹಳೆ ಮನೆಯಲ್ಲಿ ಅಪ್ಪು ಫೋಟೋ..! ವಿಡಿಯೋ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ

ಸ್ಯಾಂಡಲ್ ವುಡ್ ನ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್(Puneeth Rajkumar)  ಇದೀಗ ನಮ್ಮ ಜೊತೆಗೆ ಇಲ್ಲ. ಹೌದು ಪವರ್ ಇಲ್ಲದೇನೆ ಇಡೀ ರಾಜ್ಯವೇ ಅವರ ಅಗಲಿಕೆಯ ನೋವಲ್ಲಿ ಇದೆ. ಈಗಲೂ ಕೂಡ ಅವರ ಅಗಲಿಕೆಯ ಅರಗಿಸಿಕೊಳ್ಳಲು ಆಗುತ್ತಿಲ್ಲ. ಗಾಜನೂರಿನ ಬಗ್ಗೆ ನಿಮಗೆಲ್ಲರಿಗೆ ಕೆಲ ಮಾಹಿತಿ ಇದೆ. ನಟ ರಾಜಣ್ಣ (Rajkumar) ಅವರು ಹುಟ್ಟಿ ಬೆಳೆದ ಊರು. ವರನಟ ಡಾಕ್ಟರ್ ರಾಜಕುಮಾರ್ ಅವರು ಗಾಜನೂರಿನಲ್ಲಿ ಹುಟ್ಟಿ ಆಡಿಕೊಂಡು ಬೆಳೆದಿದ್ದು. ಚಾಮರಾಜನಗರ ಜಿಲ್ಲೆಯಲ್ಲಿ ಈ ಊರು ಬರುತ್ತದೆ. ನಟ ರಾಜಕುಮಾರ್ ಅವರು ಹುಟ್ಟಿ ಬೆಳೆದ ಮನೆ ಈಗಲೂ ಹಾಗೆಯೇ ಇದೆ. ರಾಜಕುಮಾರ್ ಅವರ ಈ ಹಳೆ ಮನೆಗೆ ಒಮ್ಮೆಯಾದರೂ ಈ ಜೀವನದಲ್ಲಿ ಭೇಟಿ ನೀಡಲೇಬೇಕು. ಕಾರಣ ಅವರೆಲ್ಲರೂ ಅಲ್ಲಿಯೇ ಆಡಿಕೊಂಡು ಬೆಳೆದವರು. ನಮ್ಮ ಪ್ರೀತಿಯ ಅಪ್ಪು ಕೂಡ ಅಲ್ಲಿಯೇ ಆಡಿ ಬೆಳೆದವರು.

ಇತ್ತೀಚಿಗೆ ಅವರ ಅಗಲಿಕೆ ಆಗುವ 15 ದಿನ ಮುಂಚಿತವಾಗಿ ಗಾಜನೂರಿನ (Gajanur) ಹಳೆ ಮನೆಗೆ ಹೋಗಿ ಅಲ್ಲಿಯ ಕೆಲ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಬಂದಿದ್ದರು ಅಪ್ಪು. ಇದೀಗ ನಮ್ಮ ಕರ್ನಾಟಕದ ಯುವಕನೊಬ್ಬ ಈ ಗಾಜನೂರಿಗೆ ಭೇಟಿ ಕೊಟ್ಟಿದ್ದಾರೆ. ಪ್ರತಿಯೊಂದು ಅಲ್ಲಿಯ ಅವಿಸ್ಮರಣೀಯ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅಭಿಮಾನಿಗಳಿಗಾಗಿ ಈ ಯುವಕ ಅಲ್ಲಿಗೆ ಭೇಟಿ ನೀಡಿ ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿಡಿಯೋದಲ್ಲಿ ತೋರಿಸಿದ್ದಾರೆ. ಹಳೆ ಮನೆಯ ಒಳಗೆ ಏನೆಲ್ಲಾ ಇದೆ ಎಂಬುದಾಗಿ ತೋರಿಸಿದ್ದಾರೆ. ನಟ ರಾಜಕುಮಾರ್ ಅವರ ಹಳೆಯ ಮನೆ ನೋಡಿ ತುಂಬಾನೇ ಖುಷಿಯಾಗಿದ್ದಾರೆ.  

ಹಾಗೆ ಅಪ್ಪು ಅವರ ಫೋಟೋವನ್ನು ನೋಡಿ ಮೂಕವಿಸ್ಮಿತರಾಗೆಬಿಟ್ಟರು ಎಂದು ಹೇಳಬಹುದು. ಕಾರಣ ಅಪ್ಪು ಅಗಲಿಕೆ.ಕ್ಯಾಮರಾ ಇಟ್ಟುಕೊಂಡು ಗಾಜನೂರಿನ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ತೋರಿಸುತ್ತಾ, ಅವರ ಹಳೆಯ ಮನೆಗೆ ಭೇಟಿ ಕೊಟ್ಟ ಈ ಯುವಕನ ವಿಡಿಯೋ ತುಂಬಾ ಅದ್ಭುತವಾಗಿದೆ. ನಿಜ ನೀವು ಈ ದೃಶ್ಯಗಳನ್ನು ನೋಡಿದಲ್ಲಿ ನಿಮಗೂ ಕಣ್ಣಂಚಲ್ಲಿ ಖಂಡಿತಾ ನೀರು ಬರುತ್ತದೆ.ಇನ್ನೊಂದು ಕಡೆ ಖುಷಿಯಾಗುತ್ತದೆ. ಅಸಲಿಗೆ ಈ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ.? ನೀವೇ ಒಂದು ಬಾರಿ ಈ ವಿಡಿಯೋ ನೋಡಿ. ಈ ಯುವಕನ ಪರಿಶ್ರಮಕ್ಕೆ ನಿಮ್ಮದು ಒಂದು ಮೆಚ್ಚುಗೆ ನೀಡಿ. ಹಾಗೆ ಈ ಗಾಜನೂರಿನ ಬಗ್ಗೆ ಮತ್ತು ರಾಜಕುಮಾರ್ ಅವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...