Big Boss Ott : ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಿದ್ದ ಸ್ಪರ್ಧಿ..! ಕಣ್ಣೀರು ಹಾಕಿದ ಬಿಗ್ ಮನೆಯ ಮಂದಿ..!

By Infoflick Correspondent

Updated:Saturday, September 3, 2022, 14:52[IST]

Big Boss Ott :  ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಿದ್ದ ಸ್ಪರ್ಧಿ..! ಕಣ್ಣೀರು ಹಾಕಿದ ಬಿಗ್ ಮನೆಯ ಮಂದಿ..!

ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತಿರುವ ಬಿಗ್ ಬಾಸ್ ಸೀಸನ್ ಓ ಟಿ ಟಿ ಇದೀಗ ಒಂದು ಹಂತಕ್ಕೆ ಬಂದು ತಲುಪಿದೆ. ಈ ಬಾರಿಯ ಬಿಗ್ ಬಾಸ್ ವಿಶೇಷವಾಗಿ ಎಂಟ್ರಿ ಕೊಟ್ಟಿತ್ತು. ಹೌದು ಒ ಟಿ ಟಿ ಮೂಲಕ ಬಿಗ್ ಬಾಸ್ ಪ್ರಸಾರ ಆಗುತ್ತಿದೆ ಎಂದು ಮೊದಲ ಬಾರಿ ಬಿಗ್ ಬಾಸ್ ಓಟಿಟಿ ಸೀಸನ್ ಒನ್ ಪ್ರಾರಂಭ ಮಾಡಿದ್ದು ಆರಂಭದಲ್ಲಿ ಈ ಕಾರ್ಯಕ್ರಮದ ವಿರುದ್ಧ ಕೆಲವರು ಹೆಚ್ಚು ಅಸಮಾಧಾನ ಹೊರಹಾಕಿದರು. ಕೆಲವರ ಬಿಗ್ಬಾಸ್ ಮನೆಯ ಆಯ್ಕೆ ವಿಚಾರವಾಗಿ ಹೆಚ್ಚು ಚರ್ಚೆಯಾಗಿದ್ದನ್ನು ನೀವು ಕೂಡ ಗಮನಿಸಿದ್ದೀರಿ. ಇಂತಹ ಜನರನ್ನೆಲ್ಲ ಬಿಗ್ ಬಾಸ್ ಮನೆಗೆ ಕಳುಹಿಸುವುದಾದರೆ ಇಂತಹ ಶೋಗೆ ಮಾನ ಮರ್ಯಾದೆ ಇದೆಯಾ, ಪ್ರತಿಷ್ಠಿತ ವೇದಿಕೆಗೆ ಇದೆಲ್ಲ ಬೇಕಾ ಎನ್ನುವ ಟೀಕೆಯ ಮಾತುಗಳು ಸಹ ಕೇಳಿ ಬಂದಿದವು.

ಹೌದು, ಟೀಕೆಯ ನಡುವೆ ಬಿಗ್ ಬಾಸ್ ಈ ಬಾರಿ ನಾಲ್ಕು ವಾರಗಳನ್ನು ಮುಕ್ತಾಯ ಮಾಡಿದೆ. ಈಗಾಗಲೇ ನಾಲ್ಕೈದು ಜನರು ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದಾರೆ. ಈಗ ಬಿಗ್ಬಾಸ್ ಕಾರ್ಯಕ್ರಮ ತುಂಬಾ ಚಾತುಕಾರ್ಯದಿಂದ ನಡೆಯುತ್ತಿದ್ದು,, ಪ್ರತಿಯೊಬ್ಬ ಸ್ಪರ್ಧಿಗಳು ಹೆಚ್ಚು ಮಜವಾಗಿ ಆಟವಾಡುತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಫಿನಾಲೆಗೆ ಹತ್ತಿರ ಆಗುತ್ತಿದ್ದಂತೆ ಎಚ್ಚರದಿಂದ ಆಟ ಆಡುತ್ತಿದ್ದಾರೆ ಎಂದೇ ನಾವು ಹೇಳಬಹುದು. ಬಿಗ್ಬಾಸ್ ಫಿನಾಲೆಗೆ ಕೇವಲ ಎರಡು ಹೆಜ್ಜೆ ಇದೆ, ಯಾರು ಆ ಮೆಟ್ಟಿಲು ಹತ್ತುತ್ತಾರೆ, ಹಾಗೆ ಯಾರು ಆ ಮೆಟ್ಟಿಲಲ್ಲೆ ಎಡವಿ ಬೀಳುತ್ತಾರೆ ಕಾದು ನೋಡಬೇಕಿದೆ. ಅದರಲ್ಲೂ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಹೋಗುತ್ತಾರೆ ಎನ್ನುವ ವಿಚಾರ ಇದೀಗ ವೀಕ್ಷಕರು ಕುತೂಹಲದಿಂದ ಹೆಚ್ಚು ಕಾಯುತ್ತಿದ್ದಾರೆ.

ಇಂದಿನ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮವನ್ನೆ ಈಗ ಎದುರು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದವರ ಪೈಕಿ, ಅಕ್ಷತಾ, ಸಾನ್ಯ, ರಾಕೇಶ್, ಜಸ್ವಂತ್, ಸೋನು, ಜಯಶ್ರೀ, ನಂದಿನಿ, ಜೊತೆಗೆ ಚೈತ್ರ ಅವರು ಕೂಡ ಇದ್ದಾರೆ. ಇವರಲ್ಲಿ ಈ ವಾರ ಸೋನು, ಹಾಗೆ ರಾಕೇಶ್, ಜಯಶ್ರೀ, ನಂದಿನಿ, ಅಕ್ಷತಾ, ಜಸ್ವಂತ್ ಅವರು ಸಹ ಪಾರಾಗಲಿದ್ದು ಚೈತ್ರ ಅವರು ಹೊರ ಹೋಗಬಹುದು ಎನ್ನಲಾಗಿ ತಿಳಿದು ಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ. ಹಾಗೆ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಬಿಗ್ ಬಾಸ್ ಮನೆಯಲ್ಲಿ  ಯಾರು ಎಂಬುದಾಗಿ ನಮಗೆ ನಿಮ್ಮ ಅನಿಸಿಕೆಯನ್ನು ಕೂಡ ತಪ್ಪದೆ ತಿಳಿಸಿ ಧನ್ಯವಾದಗಳು...