Bigg Boss Ott : ಈ ವಾರ ಬಿಗ್ಬಾಸ್ ಮನೆಯಿಂದ ಯಾರು ಹೊರಕ್ಕೆ..? ಎಲೀಮಿನೆಟ್ ಆದ ಈ ಸ್ಪರ್ಧಿ..!

By Infoflick Correspondent

Updated:Saturday, August 27, 2022, 17:33[IST]

Bigg Boss Ott : ಈ ವಾರ ಬಿಗ್ಬಾಸ್ ಮನೆಯಿಂದ ಯಾರು ಹೊರಕ್ಕೆ..? ಎಲೀಮಿನೆಟ್ ಆದ ಈ ಸ್ಪರ್ಧಿ..!

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಜನ ಮನ್ನಣೆ ಗಳಿಸಿರುವ ಬಿಗ್ ಬಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಬಾರಿ ಬಿಗ್ ಬಾಸ್ ವಿಭಿನ್ನವಾಗಿ ಎಂಟ್ರಿ ಪಡೆಯಿತು. ಒಟಿಟಿ ವೇದಿಕೆ ಮೂಲಕ ವೂಟ್ ನಲ್ಲಿ ಪ್ರಸಾರ ಆಗುತ್ತಿದೆ. ಯಾವ ಚಾನೆಲ್ ನಲ್ಲಿ ಪ್ರಸಾರ ಆಗದ ಈ ಬಿಗ್ ಬಾಸ್ ಆರಂಭದಲ್ಲಿ ಬಿಗ್ ಬಾಸ್ ಮನೆಯೊಳಗಿನ ಕೆಲ ಸ್ಪರ್ಧಿಗಳ ಆಯ್ಕೆ ವಿಚಾರವಾಗಿ ಬಿಗ್ ಬಾಸ್ ಆಯೋಜಕ ಸದ್ಯಸ್ಯರ ವಿರುದ್ಧ ವೀಕ್ಷಕರು ಅಸಮಾಧಾನವಾಗಿದ್ದರು. ಹಾಗೆ ಇಂತಹವರನ್ನು ಯಾಕೆ ಬಿಗ್ ಬಾಸ್ ಅಂಥ ಪ್ರತಿಷ್ಠಿತ ಮನೆಗೆ ಕಳುಹಿಸುತ್ತೀರಾ ಎಂದು ಪ್ರಶ್ನೆ ಮಾಡಿದ್ದರು. ಹೌದು ಇದೆಲ್ಲದರ ನಡುವೆ ಬಿಗ್ ಬಾಸ್ ಮೂರು ವಾರಗಳು ಮುಗಿಯುವ ಹಂತಕ್ಕೆ ಬಂದಿದೆ.  

ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಮೂರನೇ ವಾರದ ಭರ್ಜರಿ ವೋಟಿಂಗ್ ಕಾರ್ಯ ನಡೆಸಿದ್ದು ಅಭಿಮಾನಿಗಳು ವಿಕ್ಷಕರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ವಾರ ಅಂದರೆ ಮೂರನೇ ವಾರ ಯಾರು ಬಿಗ್ ಬಾಸ್ ಮನೆಯಿಂದ ಹೊರ ಬೀಳುತ್ತಾರೆ, ಯಾರ್ಯಾರಿಗೆ ಎಷ್ಟು ಎಷ್ಟು ವೋಟು ಬರಲಿದೆ ಎಂದು ತುಂಬಾ ಕುತೂಹಲಕಾರಿ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ಒಟ್ಟು ಏಳು ಜನರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಆರ್ಯವರ್ಧನ್, ರುಪೇಶ್ ಶೆಟ್ಟಿ, ಜಯಶ್ರೀ ಆರಾಧ್ಯ, ಹಾಗೆ ಚೈತ್ರ, ಉದಯ್ ಸೂರ್ಯ, ಅಕ್ಷತಾ ಕುಕ್ಕಿ ಹಾಗೆ ಕೊನೆಯಲ್ಲಿ ಸೋಮಣ್ಣ ಮಾಚಿಮಾಡ ಅವರು ನಾಮಿನೇಟ್ ಆಗಿದ್ದಾರೆ. ಇವರಿಗೆ

ರೂಪೇಶ್ ಶೆಟ್ಟಿಗೆ 40 ಪೆರ್ಸೆಂಟ್ ವೋಟ್ ಸಿಕ್ಕಿದೆ. ಅಕ್ಷತಾ ಕುಕ್ಕಿಗೆ 20 ಪೆರ್ಸೆಂಟ್ ವೋಟ್, ಸೋಮಣ್ಣ ಅವರಿಗೆ 12 ಪೆರ್ಸೆಂಟ್ ವೋಟ್, ಹಾಗೆ ಜಯಶ್ರೀಗೆ 11 ಪೆರ್ಸೆಂಟ್, ಅರ್ಯವರ್ಧನ್ ಗುರೂಜಿಗೆ 8 ಪೆರ್ಸೆಂಟ್, ಉದಯ್ ಅವರಿಗೆ 5 ಪೆರ್ಸೆಂಟ್ ವೋಟ್, ಕೊನೆಗೆ ಚೈತ್ರಾ ಅವ್ರಿಗೆ 4 ಪೆರ್ಸೆಂಟ್ ವೋಟ್ ಸಿಕ್ಕಿದ್ದು ಇಷ್ಟು ವೋಟ್ ಗಳು ಬಂದಿದ್ದು  ಎಂದು ತಿಳಿದುಬಂದಿದೆ. ನಿಮ್ಮ ಪ್ರಕಾರ ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರಬೇಕು,, ಯಾರು ಬಿಗ್ ಬಾಸ್ ಮನೆಯಿಂದ ಮೂರನೇ ವಾರ ಎಲೀಮಿನೆಟ್ ಆಗಿ ಹೊರ ಬರಬೇಕು ಎಂಬುದಾಗಿ ಕಮೆಂಟ್ ಮಾಡಿ ತಿಳಿಸಿ. ಮಾಹಿತಿ ತಿಳಿದು ಬಂದಿರುವ ಪ್ರಕಾರ ಚೈತ್ರಾ ಅವರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು..