Yash : ಯಶ್ ಅದೆಷ್ಟು ಸಿಂಪಲ್ ನೋಡಿ..! ಈ ಗುಣವೇ ಅವರನ್ನ ಸೂಪರ್ ಸ್ಟಾರ್ ಮಾಡಿದ್ದು..!

By Infoflick Correspondent

Updated:Monday, May 16, 2022, 12:48[IST]

Yash :  ಯಶ್ ಅದೆಷ್ಟು ಸಿಂಪಲ್ ನೋಡಿ..! ಈ ಗುಣವೇ ಅವರನ್ನ ಸೂಪರ್ ಸ್ಟಾರ್ ಮಾಡಿದ್ದು..!

ಕನ್ನಡದ ರಾಕಿಂಗ್ ಸ್ಟಾರ್ ಯಶ್ ಇದೀಗ ತುಂಬಾನೇ ಫೇಮಸ್ ಆಗಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಇಡೀ ಕರ್ನಾಟಕ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದ್ದಾರೆ. ಕನ್ನಡದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಕೆಜಿಎಫ್ ಸಿನಿಮಾವನ್ನು ಹಾಡಿ ಹೊಗಳಿದ್ದು ಇದೀಗ ಯಶ್ ಕೂಡ ಸೂಪರ್ಸ್ಟಾರ್ ಎಂದು ಹೇಳಬಹುದು. ಹೌದು ಕೆಜಿಎಫ್ ಚಿತ್ರ ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿಯೂ ದೊಡ್ಡ ರೆಕಾರ್ಡ್ ಮಾಡುತ್ತಿದೆ. ಹನ್ನೆರಡು ನೂರು ಕೋಟಿ ಕಲೆಕ್ಷನ್ ಮಾಡಿ ಇನ್ನು ಕೂಡ ಮುನ್ನುಗುತ್ತಿದೆ ಎಂದು ಹೇಳಲಾಗುತ್ತಿದೆ. ರಾಕಿ ಬಾಯ್ ನಟನೆಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ.  

ಕೆಜಿಎಫ್ ಚಿತ್ರ ತಂಡ ತುಂಬಾನೇ ಕಷ್ಟ ಪಟ್ಟಿದ್ದು ಚಿತ್ರವನ್ನು ಈ ಮಟ್ಟಕ್ಕೆ ತಂದಿದ್ದು, ಸಿನಿ ಪ್ರಿಯರು ಸಿನಿಮಾ ಗೆಲ್ಲಿಸಿದರು. ಕೆಜಿಎಫ್ ಭಾಗ-3 ಕೂಡ ಇನ್ನೂ ಒಂದು ವರ್ಷದಲ್ಲಿ ತೆರೆಗೆ ಬರಲಿದ್ದು ಇದೇ ವರ್ಷದ ಕೊನೆಯಲ್ಲಿ ಭಾಗ 3 ರ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎಂದು ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರು ಮಾಹಿತಿ ನೀಡಿದ್ದಾರೆ. ಹೌದು ನಟ ರಾಕಿಂಗ್ ಸ್ಟಾರ್ ಯಶ್ ಇದೀಗ ಸೂಪರ್ ಸ್ಟಾರ್, ಸಾಕಷ್ಟು ಅಪಾರ ಅಭಿಮಾನಿ ಬಳಗವನ್ನು ಗಿಟ್ಟಿಸಿಕೊಂಡಿದ್ದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ಭಾರತೀಯ ಚಲನಚಿತ್ರ ರಂಗದಲ್ಲಿ ಹೆಚ್ಚು ಅಭಿಮಾನಿ ಬಳಗವ ಗಿಟ್ಟಿಸಿಕೊಂಡಿರುವ ನಟ ಆಗಿ ಹೊರಹೊಮ್ಮಿದ್ದಾರೆ ಎನ್ನಬಹುದು. ನಟ ರಾಕಿಂಗ್ ಸ್ಟಾರ್ ಯಶ್ ದೊಡ್ಡ ಮಟ್ಟಕ್ಕೆ ಬೆಳೆದಿರುವುದು ಖುಷಿಯ ವಿಚಾರ.

ನಮ್ಮ ಹೆಮ್ಮೆಯ ಕನ್ನಡ ಸಿನಿಮಾ ಗೆದ್ದಿರುವುದು ಖುಷಿ. ನಟ ಯಶ್ ಅವರ ಗುಣದ ಬಗ್ಗೆ ಹೇಳುವುದಾದರೆ, ತುಂಬಾನೇ ಸರಳ ವ್ಯಕ್ತಿ, ಎಲ್ಲರೊಟ್ಟಿಗೆ ಪ್ರೀತಿಯಿಂದ ಮಾತನಾಡುತ್ತಾ ಇವರದ್ದು ಎಂಥಹಾ ಸರಳ ವ್ಯಕ್ತಿತ್ವ ಎಂದೆನಿಸಿಕೊಳ್ಳುತ್ತಾರೆ. ಅಸಲಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಯಾವ ಗುಣಗಳು ಜನರಿಗೆ ಇಷ್ಟ ಆಗುತ್ತವೆ ಗೊತ್ತಾ..? ಈ ಗುಣವೇ ಅವರನ್ನು ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂದು ಅನ್ನಿಸುತ್ತದೆ. ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ. ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ. ಯಶ್ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..