ಯುವರತ್ನ ಚಿತ್ರವನ್ನು ಈಗ ನಿಮ್ಮ ಮನೆಯಲ್ಲಿಯೇ ನೋಡಿ..! ಅದ್ಹೇಗೆ ಗೊತ್ತಾ..?

Updated: Thursday, April 8, 2021, 16:42 [IST]

ಹೌದು ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಮೂಡಿ ಬಂದತಹ ಯುವರತ್ನ ಸಿನಿಮಾ ಎಪ್ರಿಲ್ ಒಂದನೇ ತಾರೀಕು ಇಡೀ ರಾಜ್ಯಾದ್ಯಂತ ಸೇರಿ ಆಂಧ್ರದಲ್ಲಿಯೂ ಸಹ ಈ ಚಿತ್ರ ತೆರೆಕಂಡಿತ್ತು. ಮತ್ತು ಬಿಡುಗಡೆಯಾದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದು, ಹೆಚ್ಚಿನ ಮಟ್ಟದಲ್ಲಿ ಸದ್ದು ಮಾಡಿತ್ತು. ಯುವರತ್ನ ಸಿನಿಮಾ ಮೊದಲ ದಿನವೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದು, ಈ ಸಿನಿಮಾ ಸಕ್ಕತ್ತಾಗಿ ಮೂಡಿಬಂದಿದ್ದು ಅಪ್ಪು ಅಭಿನಯಕ್ಕೆ ಅಭಿಮಾನಿಗಳು ಫಿದಾ ಆದರು. 

ಅಂದಹಾಗೆ ಸಿನಿಮಾದಲ್ಲಿಯ ಚಿತ್ರಕಥೆ ಎಲ್ಲರಿಗೂ ಇಷ್ಟವಾಗಿದ್ದು, ಭರ್ಜರಿಯಾಗಿ ಪ್ರದರ್ಶನ ಕಂಡಿತು. ಯುವರತ್ನ ಸಿನಿಮಾಕ್ಕೆ ಕರೋನವೈರಸ್ ಮಹಾಮಾರಿ ಬಂದಿದ್ದು, ರಾಜ್ಯ ಸರ್ಕಾರ ಕೇವಲ ಥಿಯೇಟರ್ನಲ್ಲಿ 50 ಪರ್ಸೆಂಟ್ ಸೀಟಿಗಾಗಿ ಅವಕಾಶ ನೀಡಿತು. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಯುವರತ್ನ ಸಿನಿಮಾಕ್ಕೆ ದೊಡ್ಡ ಹೊಡೆತ ಬಿದ್ದಂತಾಯಿತು. ಮತ್ತೆ ಏಳನೇ ತಾರೀಖಿನವರೆಗೂ ಪುನೀತ್ ಅಂಡ್ ಇಡೀ ಯುವರತ್ನ ಟೀಮ್ ಹೋಗಿ ಮನವಿ ಮಾಡಿಕೊಂಡ ಬಳಿಕ 100 ಪರ್ಸೆಂಟ್ ಸೀಟಿಗೆ ಅನುಮತಿ ನೀಡಿತು.  

ಇದೀಗ ನಿಮ್ಮ ನೆಚ್ಚಿನ ಯುವರತ್ನ ಸಿನಿಮಾವನ್ನು ನೀವು ನಿಮ್ಮ ಮನೇಲಿ ಕುಳಿತುಕೊಂಡು ನೋಡಬಹುದು, ಹೇಗೆ ಅಂತೀರಾ, ಹೌದು ಅಮೇಜಾನ್ ಪ್ರೈಮ್ ನಲ್ಲಿ ಇದೀಗ ಅಪ್ಪು ಅಭಿನಯದ ಯುವರತ್ನ ಚಿತ್ರ ಬಿಡುಗಡೆ ಆಗಿದೆ. ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವುದಕ್ಕೆ, ಅಲ್ಲಿ ಹೋಗುವ ಅವಕಾಶ ಇಲ್ಲವೆಂದಲ್ಲಿ, ನಿಮ್ಮ ಮನೇಲಿ ಕುಳಿತು ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಿ...