ಬ್ರೇಕಿಂಗ್ ನ್ಯೂಸ್; ಕನ್ನಡದ ಮತ್ತೊಬ್ಬ ಖ್ಯಾತ ನಟ ಕೊರೊನಾಗೆ ಬಲಿ..!

Updated: Friday, May 7, 2021, 15:59 [IST]

ಹೌದು ಸ್ನೇಹಿತರೆ ಎಪ್ಪತ್ತು ಎಂಬತ್ತರ ದಶಕದ ಕನ್ನಡ ಇಂಡಸ್ಟ್ರಿಯ ಇನ್ನೊಬ್ಬ ಖ್ಯಾತ ಹಿರಿಯ ನಟ ಇದೀಗ ಕೊರೋನಾಗೆ ಬಲಿಯಾಗಿದ್ದು, ಈಗಷ್ಟೆ ಉಸಿರಾಟದ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆ  ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬೆಟ್ಟದ ಹೂವು ಚಿತ್ರದಲ್ಲಿ ಅಭಿನಯಿಸಿದ್ದ ಖ್ಯಾತ ಹಿರಿಯ ನಟ ಶಂಕನಾದ ಅರವಿಂದ್ ಅವರು ಇದೀಗ ಕೊರೋನಾಗೆ ಬಲಿಯಾಗಿದ್ದಾರೆ. 

ಇವರಿಗೆ ಇದೀಗ 70ವರ್ಷ ಎಂದು ಹೇಳಲಾಗುತ್ತಿದೆ. ಹಾಗೇನೇ ನಟ ಕಾಶೀನಾಥ್ ಅವರ ಎಲ್ಲಾ ಸಿನಿಮಾದಲ್ಲಿ ಬಹುಬೇಡಿಕೆಯ ನಟ ಇವರಾಗಿದ್ದರು. ಹಾಗೆ ಶಂಖನಾದ ಅರವಿಂದ್ ಎಪ್ಪತ್ತು ಎಂಬತ್ತರ ದಶಕದಲ್ಲಿ ಬೇಡಿಕೆಯ ನಟರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು,ಮತ್ತು ಸಿನಿಮಾ ರಂಗದಲ್ಲಿ ತಮ್ಮದೇ ಆದ ವಿಭಿನ್ನ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದರು. ಇದೀಗ ಮೂವರು ಮಕ್ಕಳನ್ನು ಅಗಲಿದ ಶಂಕನಾದ ಅರವಿಂದ್ ಅವರು ಇಹಲೋಕ ತ್ಯಜಿಸಿದ್ದಾರೆ. 

ಅಷ್ಟಕ್ಕೂ ಈ ನಟರಿಗೆ ಆಗಿದ್ದೇನು ಗೊತ್ತಾ.? ಈ ವಿಡಿಯೋ ನೋಡಿ, ಬಳಿಕ ನಿಮ್ಮ ಅಭಿಪ್ರಾಯ ತಿಳಿಸಿ. ಜೊತೆಗೆ ಕರೋನದಿಂದ ಮತ್ತೊಬ್ಬ ಖ್ಯಾತ ಹಿರಿಯ ನಟ ಸಾವನ್ನಪ್ಪಿದ್ದು, ಇಡೀ ಕನ್ನಡ ಚಿತ್ರರಂಗ ಇವರ ಸಾವಿಗೆ ಕಂಬನಿ ಮಿಡಿದಿದೆ. ಹಾಗೆ ನಟನ ಸಾವಿಗೆ ಸಂತಾಪ ಸಹ ಸೂಚಿಸಿದ್ದಾರೆ. ಜೊತೆಗೆ ಇನ್ನೊಬ್ಬ ಖ್ಯಾತ ನಟನನ್ನು ಕಳೆದುಕೊಂಡು ಕನ್ನಡ ಇಂಡಸ್ಟ್ರಿ ಬಡವಾಯಿತು ಎಂದರೆ ತಪ್ಪಾಗಲಾರದು....