ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ ಲಕ್ಷ್ಮೀ ಬಾರಮ್ಮ ಧಾರವಾಹಿ ನಟಿ
Updated:Monday, April 25, 2022, 19:03[IST]

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ವೀಕ್ಷಕರ ಮನಸ್ಸನ್ನು ಗೆದ್ದಿದ್ದ ಧಾರಾವಾಹಿ. ಈ ಧಾರಾವಾಹಿ ಕನ್ನಡ ಕಿರುತೆರೆಯ ಭಾರಿ ಯಶಸ್ಸು ಕಂಡಿದೆ. ಇನ್ನು ಈ ಧಾರಾವಾಹಿಯಲ್ಲಿ ನಟಿಸಿದ ಅನೇಕ ಕಲಾವಿದರು ಜನ ಮನ ಗೆದ್ದ ಕಲಾವಿದರು. ಧಾರಾವಾಹಿಯಲ್ಲಿ ನಟಿಸಿದ ಚಂದನ್, ಕವಿತಾ ಗೌಡ, ನೇಹಾ ಗೌಡ ಸೇರಿದಂತೆ ಅನೇಕ ಕಲಾವಿದರು ಕನ್ನಡಿಗರ ಮನೆ ಮಾತಾಗಿದ್ದರು. ಈ ಧಾರಾವಾಹಿಯಲ್ಲಿ ಲಕ್ಷ್ಮಿ ಪಾತ್ರದಲ್ಲು ನಟಿಯಾಗಿ ಅಭಿನಯಿಸಿದ್ದ ರಶ್ಮಿ ಪ್ರಭಾಕರ್ ಅವರು ಕೂಡ ಸಾಕಷ್ಟು ಪ್ರಖ್ಯಾತಿಯನ್ನು ಪಡೆದರು.
ಕವಿತಾ ಗೌಡ ಅವರು ಧಾರವಾಹಿಯಿಂದ ನಿರ್ಗಮಿಸಿದಾಗ ಅವರ ಪಾತ್ರವನ್ನು ರಶ್ಮಿ ಪ್ರಭಾಕರ್ ಅವರು ನಿರ್ವಹಿಸಿದ್ದರು. ಹೌದು ರಶ್ಮಿ ಪ್ರಭಾಕರ್ ಅವರು ಕವಿತಾ ಗೌಡ ಅವರ ಚಿನ್ನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಜನಪ್ರಿಯತೆ ಪಡೆದ ರಶ್ಮಿ ಪ್ರಭಾಕರ್ ಈ ಧಾರಾವಾಹಿಯ ನಂತರ ಮನಸೆಲ್ಲಾ ನೀನೆ ಧಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಶ್ಮಿ ಪ್ರಭಾಕರ್ ಇದೀಗ ತಮ್ಮ ಭಾವಿ ಪತಿ ಕುರಿತು ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ತಮ್ಮ ಪ್ರಿಯಕರನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ರಶ್ಮಿ ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದೀಗಾಗಲೇ ಮದುವೆ ತಯಾರಿ ನಡೆಸಿದ್ದಾರೆ.
ಇದೀಗ ನಟಿ ರಶ್ಮಿ ಪ್ರಭಾಕರ್ ಏಪ್ರಿಲ್ 25ರಂದು ಗೆಳೆಯ ನಿಖಿಲ್ ಭಾರ್ಗವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಸವನಗುಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಸೋಮವಾರ ಬೆಳಗ್ಗೆ 9.21ರಿಂದ 10.19ರ ವರೆಗೆ ಇರುವ ಶುಭ ಮುಹೂರ್ತದಲ್ಲಿ ಮದುವೆಯಾಗುತ್ತಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.