KGF 2 : ಕೆಜಿಎಫ್ 2 ಚಿತ್ರವನ್ನ ಹಾಡಿ ಹೊಗಳಿದ ಖ್ಯಾತ ನಿರ್ದೇಶಕ ಶಂಕರ್..! ಟ್ವಿಟರ್ ನಲ್ಲಿ ಹೇಳಿದ್ದಿಷ್ಟು

By Infoflick Correspondent

Updated:Wednesday, May 18, 2022, 08:23[IST]

KGF 2 : ಕೆಜಿಎಫ್ 2 ಚಿತ್ರವನ್ನ ಹಾಡಿ ಹೊಗಳಿದ ಖ್ಯಾತ ನಿರ್ದೇಶಕ ಶಂಕರ್..! ಟ್ವಿಟರ್ ನಲ್ಲಿ ಹೇಳಿದ್ದಿಷ್ಟು

ಶಂಕರ್ ಷಣ್ಮುಗಂ, ಎಸ್. ಶಂಕರ್ ಅಥವಾ ಅವರ ಇನ್ನೊಂದು ಹೆಸರು ಶಂಕರ್ ಎಂದು ಮನ್ನಣೆ ಪಡೆದಿದ್ದಾರೆ. ಇವರು ತಮಿಳು ಚಿತ್ರರಂಗದಲ್ಲಿ ಪ್ರಧಾನವಾಗಿ ಕೆಲಸ ಮಾಡುವ ಭಾರತೀಯ ಚಲನಚಿತ್ರ ನಿರ್ಮಾಪಕರಾಗಿದ್ದಾರೆ.  ಅವರು ಜಂಟಲ್‌ಮ್ಯಾನ್ ಚಿತ್ರದಲ್ಲಿ ನಿರ್ದೇಶಕರಾಗಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು, ಇದಕ್ಕಾಗಿ ಶಂಕರ್ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮತ್ತು ಅತ್ಯುತ್ತಮ ನಿರ್ದೇಶಕರಿಗಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದು ಕೊಂಡಿದ್ದಾರೆ.    

ಹೌದು ಇದೀಗ ಅದೇ ನಿರ್ದೇಶಕ ಶಂಕರ್ ಅವರು ಕೆಜಿಎಫ್ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈಗ ಕೆಜಿಎಫ್ ಭಾಗ-2 ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಹನ್ನೆರಡು ನೂರು ಕೋಟಿ ಕಲೆಕ್ಷನ್ ಮಾಡಿ ಇನ್ನೂ ಕೂಡ ಕಲೆಕ್ಷನ್ ಮಾಡುತ್ತಲೇ ಇದೆ. ಈ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ಕರೆದುಕೊಂಡು ಹೋಗಿದೆ ಎನ್ನಬಹುದು. ಹೌದು ಖ್ಯಾತ ನಿರ್ದೇಶಕ ಶಂಕರ್ ಅವರು ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿ, ಕೆಜಿಎಫ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಹೌದು ಕೆಜಿಎಫ್ ಒಂದು ಮಾಸ್ ಸಿನಿಮಾ ಆಗಿದ್ದು, ಇದೀಗ ವಿಶ್ವ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಚಿತ್ರ ಇದು ಕನ್ನಡಿಗರಿಗೆ ಮಾತ್ರ ಹೆಮ್ಮೆಯ ವಿಷಯ ಅಲ್ಲದೆ, ಬದಲಿಗೆ ಇಡೀ ಭಾರತೀಯ ಚಿತ್ರರಂಗ ಹೆಮ್ಮೆಪಡುವ ವಿಷಯ.

ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಭಾಗ-2 ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಮುಂದಿನ ದಿನಗಳಲ್ಲಿ ಯಾರು ಕೂಡ ಈ ಸಿನಿಮಾ ಮರೆಯುವುದಿಲ್ಲ. ಶಂಕರ್ ಅವರು ಟ್ವಿಟರ್ ನಲ್ಲಿ ಹೇಳಿದ್ದಿಷ್ಟು. ಅಂತಿಮವಾಗಿ KGF2 ಕಟಿಂಗ್ ಎಡ್ಜ್ ಶೈಲಿಯ ಕಥೆ ಹೇಳುವುದು, ಚಿತ್ರಕಥೆ ಸಂಕಲನವನ್ನು ನೋಡಿದೆ. ಇಂಟರ್‌ಕಟ್ ಆಕ್ಷನ್ ಮತ್ತು ಸಂಭಾಷಣೆಗೆ ಬೋಲ್ಡ್ ಮೂವ್, ಸುಂದರವಾಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಮಾಸ್ ಪವರ್‌ಹೌಸ್‌ನ ಪುನರುಜ್ಜೀವನದ ಶೈಲಿ ಇದು ಎಂದು ಹೇಳಿಕೊಂಡಿದ್ದಾರೆ. ಯಶ್ ಅವರಿಗೆ ಹಾಗೂ ಪ್ರಶಾಂತ್ ನೀಲ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.