Sharan : ಡಾ. ರಾಜ್ ಕುಮಾರ್ ಅವರ ಮನೆಗೆ ಸತತ ಎರಡು ವರ್ಷ ಹೋಗಿದ್ದರಂತೆ ಶರಣ್..! ಕಾರಣವೇನು ನೋಡಿ

By Infoflick Correspondent

Updated:Thursday, May 26, 2022, 15:43[IST]

Sharan :  ಡಾ. ರಾಜ್ ಕುಮಾರ್ ಅವರ ಮನೆಗೆ ಸತತ ಎರಡು ವರ್ಷ ಹೋಗಿದ್ದರಂತೆ ಶರಣ್..! ಕಾರಣವೇನು ನೋಡಿ

ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟನೆಯ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದ ನಟ ಶರಣ್ ಅವರು ಇದೀಗ ಹೆಚ್ಚು ನಾಯಕನಟ ಸಿನಿಮಾಗಳ ಮಾಡುತ್ತಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಒಂದಾನೊಂದು ಕಾಲದಲ್ಲಿ ಕಾಮಿಡಿ ನಟ ಶರಣ್ ಅವರ ಅಭಿನಯ ನೋಡುತ್ತಿದ್ದಂತೆ ಎಲ್ಲರಿಗೂ ನಗು ಬರುತ್ತಿತ್ತು. ಈಗಲೂ ಕೂಡ ನಟ ಶರಣ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೂ ಆ ಕಾಮಿಡಿ ಜಲಕ್ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ನಾಯಕ ನಟ ಶರಣ್ ಅವರು ಯಾವುದೇ ಪಾತ್ರ ಮಾಡಿದರೂ ಅದಕ್ಕೆ ಕಾಮಿಡಿ ತುಂಬುತ್ತಾರೆ. ಅವರ ನಟನೆಯೂ ಹೆಚ್ಚು ಕಾಮಿಡಿ ಇಂದಲೇ  ಕೂಡಿರುತ್ತದೆ. ಅದೆಂತಹ ಸೀರಿಯಸ್ ಪಾತ್ರ ಇದ್ದರೂ ಕೂಡ ನೋಡುವ ವೀಕ್ಷಕರಿಗೆ ಅವರು ನಗೆ ಉಣಬಡಿಸುತ್ತಾರೆ.   

ಹೌದು ಶರಣ್ ಅವರು ಇತ್ತೀಚಿಗೆ ನಿರ್ದೇಶಕ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದ ಅವತಾರ ಪುರುಷ ಸಿನಿಮಾದಲ್ಲಿ ಅಭಿನಯ ಮಾಡಿದರು. ಅವತಾರ ಪುರುಷ ಚಿತ್ರ ದೊಡ್ಡಮಟ್ಟದಲ್ಲಿ ಯಶಸ್ವಿಯಾಯಿತು ಎನ್ನಬಹುದು. ಹೌದು ಮಜಾ ಟಾಕೀಸ್ ನಡೆಸಿಕೊಡುವ ನಟ ಸೃಜನ್ ಲೋಕೇಶ್ ಅವರು ಒಂದು ಬಾರಿ ಶರಣ್ ಮತ್ತು ಚಿಕ್ಕಣ್ಣ ಅವರನ್ನು ಅವರ ಕಾರ್ಯಕ್ರಮಕ್ಕೆ ಇನ್ವೈಟ್ ಮಾಡಿದ್ದರು. ಹಾಗೆ ಸಿನಿಮಾವೊಂದರ ಪ್ರಚಾರಕ್ಕಾಗಿ ಕರೆಸಿದ್ದರು. ಆ ವೇಳೆ ನಟ ಶರಣ್ ಅವರು ಡಾಕ್ಟರ್ ರಾಜಕುಮಾರ್ ಅವರ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಟ ಶರಣ್ ಮತ್ತು ರಾಜಕುಮಾರ್ ಅವರ ಒಡನಾಟ ಹೇಗಿತ್ತು ಎಂಬುದಾಗಿ ಅವರೆ ತಿಳಿಸಿದ್ದಾರೆ. ಸತತ ಎರಡು ವರ್ಷ ರಾಜಕುಮಾರ್ ಅವರ ಮನೆಗೆ ಶರಣ್ ಹೋಗಿದ್ದರಂತೆ ಅದಕ್ಕೆ ಕಾರಣವನ್ನು ಕೂಡ ಅವರೆ ತಿಳಿಸಿದ್ದು ಹೇಳಿದ ಮಾತು ನಿಜಕ್ಕೂ ಎಷ್ಟು ಸತ್ಯ ಎನಿಸುತ್ತದೆ..   

ಶರಣ್ ಹೇಳಿದ ಹಾಗೆ 'ನಾನು ಸತತ ಎರಡು ವರ್ಷ ರಾಜಣ್ಣ ಅವರ ಮನೆಗೆ ಹೋಗಿದ್ದೆ. ನಮ್ಮ ಮಾಸ್ಟರ್ ಭುವನ್, ನಟ ಶಿವಣ್ಣ, ರಾಘಣ್ಣ, ಅಪ್ಪು ಅವರಿಗೆ ಪರ್ಸನಲ್ ಟ್ರೈನರ್ ಆಗಿದ್ದರು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಮಾಸ್ಟರ್ ಭುವನ್ ಕರೆದುಕೊಂಡು ನಾನೇ ಬೈಕ್ ನಡೆಸಿಕೊಂಡು ಹೋಗುತ್ತಿದ್ದೆ. ಹಾಗಂತ ನಾನು ಡ್ರೈವರ್ ಆಗಿರಲಿಲ್ಲ, ಬದಲಿಗೆ ಸುಮ್ಮನೆ ಜೊತೆಗೆ ಹೋಗುತ್ತಿದ್ದೆ. ಆಗ ಎರಡು ವರ್ಷ ನಮ್ಮ ರಾಜಣ್ಣ ಅವರನ್ನು ನೋಡಿ ಬರುತ್ತಿದ್ದೆ. ಆ ದೇವರನ್ನು ಪ್ರತಿದಿನವೂ ನೋಡುವ ಪುಣ್ಯ ನನಗೆ ಸಿಕ್ಕಿತ್ತು' ಎಂಬುದಾಗಿ ಇದೀಗ ಈ ಶೋನಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ಶರಣ್ ಅವರು ಹೇಳಿದ ಈ ವೀಡಿಯೋ ನೋಡಿ. ಹಾಗೇ ವಿಡಿಯೋ ಇಷ್ಟವಾದಲ್ಲಿ ತಪ್ಪದೇ ಶೇರ್ ಕೂಡ ಮಾಡಿ. ಈ ಅಭಿಮಾನ ಎನ್ನುವುದು ಎಷ್ಟರಮಟ್ಟಿಗೆ ಇತ್ತು ರಾಜಣ್ಣ ಅವರ ಮೇಲೆ ಎಂಬುದು ನಿಮಗೂ ಗೊತ್ತಾಗುತ್ತದೆ. ಧನ್ಯವಾದಗಳು...