ಮಾರ್ಡನ್ ರೈತ ಬಿಗ್ ಬಾಸ್ ಶಶಿಕುಮಾರ್‌ಗೆ ಕಂಕಣ ಭಾಗ್ಯ ಕೈ ಹಿಡಿಯುವ ಹುಡುಗಿ ಯಾರು?

By Infoflick Correspondent

Updated:Tuesday, July 26, 2022, 12:12[IST]

ಮಾರ್ಡನ್ ರೈತ ಬಿಗ್ ಬಾಸ್ ಶಶಿಕುಮಾರ್‌ಗೆ ಕಂಕಣ ಭಾಗ್ಯ  ಕೈ ಹಿಡಿಯುವ ಹುಡುಗಿ ಯಾರು?

ಮಾರ್ಡನ್ ರೈತ ಎಂದು ಪ್ರಸಿದ್ದಿ ಪಡೆದಿದ್ದ ಈ ಶಶಿ ಕುಮಾರ್ ಅವರ ವೈಯಕ್ತಿಕ ಜೀವನದ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್‌ 6ರ ವಿನ್ನರ್ ಶಶಿ ಕುಮಾರ್ ಪರ್ಸನಲ್ ಲೈಫ್‌ ವಿಚಾರವೊಂದು ರಿವೀಲ್ ಅಗಿದೆ. ಅದು ಅವರ ಮದುವೆಯ ಸುದ್ದಿ.ಕಿರುತೆರೆ, ಸಿನಿಮಾ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಶಶಿ ಕುಮಾರ್ ಮೂಲತಃ ಚಿಕ್ಕಬಳ್ಳಾಪುರದವರು. ಬೆಂಗಳೂರಿನ ಪ್ರತಿಷ್ಠಿತ ಜಿಕೆವಿಕೆಯಲ್ಲಿ ಕೃಷಿ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ಶಶಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ಸದ್ಯದಲ್ಲೇ ಶಶಿ ಕುಮಾರ್ ಅವರು ಮದುವೆಯಾಗಲಿದ್ದಾರೆ. ಮುಂದಿನ ತಿಂಗಳು ಅಂದರೆ ಆಗಸ್ಟ್ 6 ಮತ್ತು 7 ರಂದು ಶಶಿ ಕುಮಾರ್ ಮದುವೆ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಶಶಿ ಕುಮಾರ್ ಅಧಿಕೃತವಾಗಿ ಹೇಳಬೇಕಿದೆ.   

ಸದ್ಯ ಲಭಿಸಿರುವ ಮಾಹಿತಿ ಪ್ರಕಾರ ದೊಡ್ಡಬಳ್ಳಾಪುರ ಮೂಲದ ಸ್ವಾತಿ ಎನ್ನುವವರನ್ನು ಶಶಿ ಕುಮಾರ್ ಮದುವೆಯಾಗಲಿದ್ದಾರೆ.ಸ್ವಾತಿ ಕೂಡ ಕೃಷಿ ಕುಟುಂಬದಿಂದ ಬಂದವರು ಎನ್ನಲಾಗಿದೆ.

ಶಶಿಕುಮಾರ್ ಬಹುಮುಖ ಪ್ರತಿಭೆಯಾಗಿದ್ದು ಬೇಸಾಯದ ಜೊತೆ ಜೊತೆಗೆ ಭೂಮಿಕ ಎಂಬ ತಂಡವನ್ನು ಕಟ್ಟಿಕೊಂಡು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಜಾನಪದ ಕಲೆ ಕೂಡಾ ಕರಗತವಾಗಿದ್ದು ಅನೇಕ ನೃತ್ಯ ಹಾಗೂ ನಾಟಕಗಳನ್ನು ಪ್ರದರ್ಶನ ಮಾಡಿದ್ದಾರೆ. ಈ ಮೂಲಕ 5 ಚಿನ್ನದ ಪದಕಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ತಮಗೆ ಒಲಿದಿರುವ ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಇನ್ನಿತರ ಕಲೆಗಳನ್ನು ಬೇರೆಯವರಿಗೆ ಕೂಡಾ ಕಲಿಸಿಕೊಟ್ಟಿದ್ದಾರೆ.

ಮೊಹಬೂಬ ಎಂಬ ಚಿತ್ರದಲ್ಲಿ ಅವರು ನಾಯಕನಾಗಿ ನಟಿಸಿದ್ಧಾರೆ. ಈ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ಶಶಿಕುಮಾರ್ ಜೊತೆಗೆ ಪಾವನಾ ನಾಯಕಿಯಾಗಿ ನಟಿಸಿದ್ದರು. ಇದರ ಜೊತೆಗೆ ಅವರು ಶುಗರ್ ಫ್ಯಾಕ್ಟರಿ ಎಂಬ ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮೂವರು ನಾಯಕಿಯರೊಂದಿಗೆ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಶಿಕುಮಾರ್ ಪಾತ್ರ ಏನು ಎಂಬುದು ಸಸ್ಪೆನ್ಸ್. ಸಿನಿಮಾ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ತೆರೆ ಕಾಣಲಿದೆ.