ಕೋಟಿ ಕೋಟಿ ಹಣವಿದ್ದರೂ, ಜೀವವೇ ಇಲ್ಲ: ನಟಿ ದೀಪಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು..?

By Infoflick Correspondent

Updated:Thursday, September 22, 2022, 21:55[IST]

ಕೋಟಿ ಕೋಟಿ ಹಣವಿದ್ದರೂ, ಜೀವವೇ ಇಲ್ಲ: ನಟಿ ದೀಪಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು..?

ಇತ್ತೀಚೆಗೆ ಬಣ್ಣದ ಲೋಕದಲ್ಲಿ ಯುವ ನಟ-ನಟಿಯರು ಸಣ್ಣ-ಸಣ್ಣ ವಿಚಾರಕ್ಕೆ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದೀಗ ತಮಿಳು ಚಿತ್ರರಂಗದ ಪ್ರತಿಭಾನ್ವಿತ ಯುವನಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ದೀಪಾ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರಿಗೆ ಪಾಲಿನ್ ಜೆಸ್ಸಿಕಾ ಎಂಬ ಮತ್ತೊಂದು ಹೆಸರು ಕೂಡ ಇದೆ. 29 ವರ್ಷದ ನಟಿ ದೀಪಾ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ವರದಿಯಾಗಿದೆ.

ಆಂಧ್ರ ಮೂಲದ ನಟಿ ದೀಪಾ ಅವರು ತಮಿಳಿನ ಚಿತ್ರರಂಗದಲ್ಲಿ ಆಕ್ಟೀವ್‌ ಆಗಿದ್ದರು. 'ತುಪ್ಪರಿವಾಲನ್', 'ವೈತಾ' ಪಾತ್ರಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಚೆನ್ನೈನ ವಿರುಗಂಬಾಕ್ಕಂನಲ್ಲಿ ದೀಪಾ ಅವರು ನೆಲೆಸಿದ್ದರು. ಸೆ.18ರಂದು ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಯುವ ಮೊದಲು ದೀಪಾ ಅವರು ತಮ್ಮ ಡೈರಿಯಲ್ಲಿ ಡೆತ್‌ನೋಟ್ ಅನ್ನು ಬರೆದಿದ್ದಾರೆ. ಇನ್ನು ನಟಿ ದೀಪಾ ಅವರು ಇತ್ತೀಚೆಗೆ ಯಾರೊಂದಿಗೂ ಸರಿಯಾಘೀ ಭೇಋಏಐಊಥಥೀಋಳೀಳಳ> ೈಅರು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ ಎಂದು ಹೇಳಲಾಗಿದೆ. 
   
ಭಾನುವಾರ ದೀಪಾ ಅವರ ಅಪಾರ್ಟ್‌ ಮೆಂಟ್‌ ಗೆ ಸ್ನೇಹಿತ ಪ್ರಭಾಕರನ್ ಬಂದಿದ್ದರು.  ಈ ವೇಳೆ ದೀಪಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ದೀಪಾ ಅವರು ಪ್ರೇಮ ವೈಪಲ್ಯಕ್ಕೆ ಒಳಗಾಗಿದ್ದರು. ಹೀಗಅಗಿ ಕೆಲ ದಿನಗಳಿಂದ ಒಂಟಿಯಾಗಿದ್ದರು ಎನ್ನಲಾಗಿದೆ. ಇನ್ನು ಡೆತ್‌ ನೋಟ ನಲ್ಲಿ ತಮ್ಮ ಪ್ರೀತಿಯ ಬಗ್ಗೆ ಬರೆದಿದ್ದು, ಕೊನೆಯವರೆಗೂ ಅವನ್ನೇ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ. ಆದರೆ ಅದು ಯಾರು ಎಂಬುದನ್ನು ಮಾತ್ರ ತಿಳಿಸಿಲ್ಲ. ಕೋಟಿ ಕೋಟಿ ಹಣ, ಆಸ್ತಿ ಇದ್ದರೂ ಹೀಗೆ ಚಿಕ್ಕವಯಸ್ಸಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.