ಎಲ್ಲರೂ ನಿಬ್ಬೆರಗಾಗುವಂತೆ ಮಾದಕ ನೃತ್ಯದಲ್ಲಿ ಶ್ವೇತಾ ಶ್ರೀವಾತ್ಸವ್..! ಹೀಗೆಲ್ಲಾ ಮಾಡಬೇಡಮ್ಮ ಎಂದ ನೆಟ್ಟಿಗರು
Updated:Thursday, March 24, 2022, 11:25[IST]

ಕಲಾವಿದರು ಅಂದ್ರೆ ಹಾಗೇನೇ ಯಾವಾಗ ಯಾವ ರೀತಿಯ ಹಾಡುಗಳ ವಿಡಿಯೋಗಳನ್ನು ಅವರ ಖುಷಿಗೋ ಅಥವಾ ಅವರ ಅಭಿಮಾನಿಗಳ ಖುಷಿಗೊ ನಮಗೂ ಗೊತ್ತಿಲ್ಲ, ಮನರಂಜನೆ ವಿಡಿಯೋಗಳನ್ನ ಶೇರ್ ಮಾಡುತ್ತಲೆ ಇರುತ್ತಾರೆ. ಜೊತೆಗೆ ಅಷ್ಟೇ ಆಕ್ಟಿವ್ ಸಹ ಇರುತ್ತಾರೆ. ಆಗಾಗ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತ ಸಕ್ಕತ್ ಖುಷಿಯಲ್ಲಿರುತ್ತಾರೆ ಎಂದು ಹೇಳಿದರೆ ತಪ್ಪಾಗಲಾರದು. ಹೌದು ನಟಿ ಶ್ವೇತಾ ಶ್ರೀವಾತ್ಸವ್ ಅವರು ತುಂಬಾ ಜನರಿಗೆ ಚಿರಪರಿಚಿತ. ಕನ್ನಡ ಚಿತ್ರರಂಗಕ್ಕೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ಎಂಟ್ರಿ ಕೊಟ್ಟವರು. ಹಾಗೆ ಕಿರುಗೂರಿನ ಗಯ್ಯಾಳಿಗಳು ಸಿನಿಮಾ ಮೂಲಕ ನಟಿ ಶ್ವೇತಾ ಶ್ರೀವಾತ್ಸವ್ ಹೆಚ್ಚು ಪ್ರಸಿದ್ಧಿ ಪಡೆದದ್ದು ನಿಜ.
ಅದಾದ ಮೇಲೆ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ ನಟಿ ಶ್ವೇತಾ ಶ್ರೀವಾತ್ಸವ್ (Shwetha srivastava) ಅವರ ಅಭಿಮಾನಿ ಬಳಗ ಕೂಡ ತುಂಬಾ ದೊಡ್ಡದಿದೆ. ಇತ್ತೀಚಿಗೆ ಯಾವ ಸಿನಿಮಾಗಳಲ್ಲಿ ನಟಿ ಶ್ವೇತಾ ಶ್ರೀವಾಸ್ತವ್ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣವೂ ಇದ್ದು ವಿವಾಹವಾದ ಮೇಲೆ ಸಿನಿಮಾರಂಗದಿಂದ ಕೊಂಚ ದೂರವೆ ಇದ್ದಾರೆ. ಹಾಗೆ ಅವರ ಮಗಳ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ್ಅವರು ಆಗಾಗ ಮನೆಯಲ್ಲಿಯೇ ಕೆಲವೊಂದಿಷ್ಟು ಯೋಗ, ಜೊತೆಗೆ ಡ್ಯಾನ್ಸ್, ಕೆಲ ಚಟುವಟಿಕೆಗಳ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಬ್ಬ-ಹರಿದಿನಗಳು ಬಂದರೆ ಮಗಳ ಜೊತೆ ಎಂಜಾಯ್ ಮಾಡಿ, ಅದರ ವಿಡಿಯೋ ತುಣುಕನ್ನ ಅಭಿಮಾನಿಗಳ ಬಳಿ ಹಂಚಿಕೊಳ್ಳುತ್ತಾರೆ.
ಇದೀಗ ಇನ್ನೊಂದು ವಿಡಿಯೋ ನಟಿ ಶ್ವೇತಾ ಶ್ರೀವಾತ್ಸವ್ ಅವರದ್ಡಾಗಿದ್ದು ವಿಡಿಯೋದಲ್ಲಿ ಇಂಗ್ಲಿಷ್ ಹಾಡಿಗೆ ಶ್ವೇತಾ ಅವರು ಡ್ಯಾನ್ಸ್ ಮಾಡಿದ್ದಾರೆ. ಹೌದು ಚಾಲೆಂಜ್ ಡಾನ್ಸ್ ಮಾಡಿದ್ದಾರೆ. ಈ ಡ್ಯಾನ್ಸ್ ನೋಡಿ ಕೆಲವರು ಖುಷಿಪಟ್ಟರೆ, ಇನ್ನು ಕೆಲವರು ಈ ರೀತಿ ಹಾಡುಗಳಿಗೆ ಡಾನ್ಸ್ ಮಾಡಬೇಡಿ ಅದು ನೋಡಲು ಹೆಚ್ಚು ಅಸಯ್ಯ ಆಗಿರುತ್ತದೆ. ಈ ರೀತಿ ಡಾನ್ಸ್ ಎಂದಿಗೂ ಮಾಡಲೇಬೇಡಿ, ನಿಮ್ಮ ಮೇಲೆ ಗೌರವ ಇದೆ ಎಂಬುದಾಗಿ ಹೇಳಿದ್ದಾರೆ ಎಂದು ವಿಡಿಯೋ ಕಮೆಂಟ್ ಬಾಕ್ಸಲ್ಲಿ ತಿಳಿದುಬಂದಿದೆ. ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ. ಹಾಗೆ ವಿಡಿಯೋ ಇಲ್ಲಿದೆ ಒಮ್ಮೆ ನೋಡಿ. ಜೊತೆಗೆ ವೀಡಿಯೋ ನೋಡಿದ ಬಳಿಕ ನಟಿ ಶ್ವೇತಾ ಶ್ರೀವಾತ್ಸವ್ ಅವರ ಈ ಡಾನ್ಸ್ ಹೇಗಿದೆ ತಿಳಿಸಿ...