ನೀ* ಲಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ ಕನ್ನಡದ ಟಾಪ್ ನಟಿಯ ಗಂಡ ಅರೆಸ್ಟ್ : ಯಾರದು ನೋಡಿ ?

Updated: Tuesday, July 20, 2021, 16:13 [IST]

    

ಹೌದು ಸ್ನೇಹಿತರೆ ಈಗ ಮಾಧ್ಯಮ ಮೂಲಕ ತಿಳಿದು ಬಂದಿರುವ ಮಾಹಿತಿ ಪ್ರಕಾರ, ಅ    *ಶ್ಲೀಲವಾದ ಚಿತ್ರಗಳನ್ನು ನಿರ್ಮಿಸಿದ ಆರೋಪದಡಿ ಬಾಲಿವುಡ್ ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಗಂಡ ರಾಜ್ ಕುಂದ್ರಾ ಅವರ ಹೆಸರು ಕೇಳಿ ಬಂದಿದ್ದು, ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.    ಶಿಲ್ಪಾ ಶೆಟ್ಟಿ ಅವರು ಕನ್ನಡದ ಉಪೇಂದ್ರ ಜೊತೆ ಆಟೋ ಶಂಕರ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ . ಮತ್ತು ರವಿ ಚಂದ್ರನ್ ಜೊತೆ ಪ್ರೀತ್ಸೋದ್ ತಪ್ಪ ಸಿನಿಮಾದಲ್ಲಿ  ಸಹ ನಟಿಸಿದ್ದಾರೆ   ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ಜೊತೆ ನವೆಂಬರ್ ೨೨ ರಂದು 2009 ರಲ್ಲಿ ಮದುವೆಯಾಗಿದ್ದಾರೆ

ಅ   *ಶ್ಲೀಲವಾದ ಚಿತ್ರಗಳನ್ನು ತಯಾರಿಸಿ, ನಂತರ ಆ ಚಿತ್ರಗಳನ್ನ ಮೊಬೈಲ್ ಅಪ್ಲಿಕೇಶನ್ ನಲ್ಲಿಯೇ ಪೋಸ್ಟ್ ಮಾಡಿದವರ ವಿರುದ್ಧ ಈ ಹಿಂದೆಯೇ ಫೆಬ್ರವರಿಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಇದೆ ಅ  *ಶ್ಲೀಲ ಚಿತ್ರ ನಿರ್ಮಾಣದ ಪ್ರಕರಣದಲ್ಲಿ ಕುಂದ್ರಾ ಅವರೇ ಪ್ರಮುಖ ಸಂಚುಕೋರ ವ್ಯಕ್ತಿ ಎಂದು ಕೇಳಿ ಬಂದಿದೆ. ಜೊತೆಗೆ ಈ ಹಿನ್ನೆಲೆಗೆ ಸಂಬಂಧಿಸಿದಂತೆ ಕುಂದ್ರಾ ವಿರುದ್ಧ ಹೆಚ್ಚು ಸಾಕ್ಷ್ಯಗಳು ದೊರಕಿವೆ ಎಂದು ಪೊಲೀಸರು ಈ ಬಗ್ಗೆ ತಿಳಿಸಿದ್ದಾರೆ.

ಶಿಲ್ಪಾ ಶೆಟ್ಟಿ ಪತಿ ಕುಂದ್ರಾ ಅವರನ್ನು ನಿನ್ನೆ ಬಂಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ  ಎಂದು ಅಲ್ಲಿಯ ಪೊಲೀಸರು ಮಾಹಿತಿ ನೀಡಿದ್ದಾರೆ..