ಕೆಜಿಎಫ್ 2 ಡೈಲಾಗ್ ಹೊಡೆಯುವ ಮೂಲಕ ರಸ್ತೆಯಲ್ಲೆ ಗಮನ ಸೆಳೆದ ಶಿಲ್ಪಾ ಶೆಟ್ಟಿ..! ಕನ್ನಡದ ಬಗ್ಗೆ ಹೇಳಿದ್ದಿಷ್ಟು

By Infoflick Correspondent

Updated:Tuesday, April 26, 2022, 16:24[IST]

ಕೆಜಿಎಫ್ 2 ಡೈಲಾಗ್ ಹೊಡೆಯುವ ಮೂಲಕ ರಸ್ತೆಯಲ್ಲೆ ಗಮನ ಸೆಳೆದ ಶಿಲ್ಪಾ ಶೆಟ್ಟಿ..! ಕನ್ನಡದ ಬಗ್ಗೆ ಹೇಳಿದ್ದಿಷ್ಟು

ಕನ್ನಡ ಚಿತ್ರರಂಗ ಇದೀಗ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಅದು ಕೇವಲ ಕೆಜಿಎಫ್ ಚಿತ್ರದ ಮೂಲಕ ಮಾತ್ರ ಅಲ್ಲದೇನೆ ಡಾಕ್ಟರ್ ವಿಷ್ಣುವರ್ಧನ್, ವರನಟ ಡಾಕ್ಟರ್ ರಾಜಕುಮಾರ್ ಅವರ ಕಾಲದಲ್ಲಿಯೂ ಕೂಡ ಕನ್ನಡ ಸಿನಿಮಾರಂಗ ತುಂಬಾನೇ ಬೆಳೆದಿತ್ತು. ಇದೀಗ ಕನ್ನಡ ಕೆಜಿಎಫ್ ಚಿತ್ರ ಗೆದ್ದಿದೆ. ಅದು ಹೆಮ್ಮೆ ಪಡುವ ವಿಷಯ. ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ ಎಲ್ಲಾ ಚಿತ್ರರಂಗದವರು ಕನ್ನಡ ಸಿನಿಮಾವನ್ನ ಈಗ ಅಪ್ಪಿ ಒಪ್ಪಿಕೊಂಡಿದ್ದಾರೆ. ಪ್ರೀತಿಯಿಂದ ರಾಕಿಬಾಯ್ ಎಂಟ್ರಿಗೆ ಫಿದಾ ಆಗಿದ್ದಾರೆ. ಹೌದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಟು ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ನಿರ್ದೇಶಕ ಆಗಿದ್ದು ಇದೀಗ ಪ್ರಶಾಂತ್ ನೀಲ್ ಅವರು ಕೂಡ ಹೆಚ್ಚು ಗಮನಸೆಳೆಯುತ್ತಿದ್ದಾರೆ ಎಂದು ಹೇಳಬಹುದು.

ಹೌದು ಕೆಜಿಎಫ್ ಹವದ ನಡುವೆ ಮಂಗಳೂರು ಮೂಲದ ಬೆಡಗಿ ಬಾಲಿವುಡ್ ನಟಿ ಕೆಜಿಎಫ್ ಚಿತ್ರದ ಬಗ್ಗೆ ಶಿಲ್ಪಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಹೌದು ಅವರ ಫೋಟೋಗ್ರಾಫರ್ ಕೆಜಿಎಫ್ ಚಿತ್ರದ ಬಗ್ಗೆ ಕೇಳಿದಾಗ, ವೈಲೆನ್ಸ್ ವೈಲೆನ್ಸ್ ವೈಲೆನ್ಸ್ ಎಂದು ಡೈಲಾಗ್ ಹೊಡೆದು ಶಿಲ್ಪಶೆಟ್ಟಿ ಕನ್ನಡದ ಬಗ್ಗೆ ಹೆಚ್ಚು ಹೆಮ್ಮೆಪಡುವಂತೆ ಮಾತನಾಡಿದ್ದಾರೆ. ಹೌದು ನಟಿ ಶಿಲ್ಪ ಶೆಟ್ಟಿ ಅವರ ವಿಡಿಯೋ ವೈರಲ್ ಆಗುತ್ತಿದಂತೆ, ಅವರೇ ಸ್ವತಹ ಕಾಮೆಂಟ್ ಮಾಡಿದ್ದು ಕರ್ನಾಟಕ ಹೆಚ್ಚು ಆಳುತ್ತಿದೆ ಎಂದು ಕನ್ನಡದ ಬಗ್ಗೆ ಮಾತನಾಡಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ಇಡೀ ಕರ್ನಾಟಕ ಎಲ್ಲಾ ಚಿತ್ರರಂಗದವರನ್ನು ಆಳುತ್ತಿದೆ ಎನ್ನುವ ಮಾತಿನ ಅರ್ಥದಲ್ಲಿ ಶಿಲ್ಪಾಶೆಟ್ಟಿ ಇದೀಗ ಈ ರೀತಿ ಅನಿಸಿಕೆ ಬರೆದಿದ್ದಾರೆ.   

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಕನ್ನಡದ ಬಗ್ಗೆ ನಟಿ ಶಿಲ್ಪಾ ಶೆಟ್ಟಿ ಹೆಚ್ಚು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿಯೇ ಮಾತನಾಡಿದ್ದಾರೆ. ಇದೀಗ ಯಶ್ ಕೆಜಿಎಫ್ ಬಗ್ಗೆ ಆಡಿದ ಮಾತು ಕೇಳಿ. ಕನ್ನಡದ ಬಗ್ಗೆ ಸದಾ ಹೆಮ್ಮೆ ಇರುವ ನಟಿ ಶಿಲ್ಪ ಶೆಟ್ಟಿಯವರ ಈ ಪ್ರೀತಿಯ ಮಾತು ಕೇಳಿ. ಹಾಗೆ ವಿಡಿಯೋ ನೋಡಿದ ಬಳಿಕ ಶೇರ್ ಮಾಡಿ ಧನ್ಯವಾದಗಳು...