Yash : ಯಶ್ ಅದೃಷ್ಟದ ಬಗ್ಗೆ ಯಾರು ಕಾರಣ ಎಂದು ಶಿವಣ್ಣ ಹೇಳಿದ ಮಾತು ಏನು ಗೊತ್ತೆ ?
Updated:Tuesday, May 17, 2022, 14:08[IST]

ಕನ್ನಡ ಸಿನಿಮಾಗಳ ಮೇಲೆ, ಚಿತ್ರರಂಗದ ಮೇಲೆ ಅಪಾರ ಪ್ರೀತಿಯುಳ್ಳ ಶಿವಣ್ಣ, ಒಳ್ಳೆಯ ಎಲ್ಲ ಸಿನಿಮಾಗಳನ್ನು ವೀಕ್ಷಿಸಿ ಆ ಸಿನಿಮಾದ ತಂತ್ರಜ್ಞರಿಗೆ, ನಟರಿಗೆ ಅಭಿನಂದನೆ ತಿಳಿಸುತ್ತಾರೆ. ಕೆಜಿಎಫ್ ಬಗ್ಗೆ ಮಾತನಾಡಿದ ಶಿವಣ್ಣ ಈಗ ಯಶ್ ಹಾಗು ರಾಧಿಕಾ ಬಗ್ಗೆ ಏನು ಹೇಳಿದ್ದಾರೆ? ಯಶ್ ಅದೃಷ್ಟದ ಬಗ್ಗೆ ಏನು ಹೇಳಿದ್ದಾರೆಂಬುದು ಇಲ್ಲಿದೆ ನೊಡಿ ನನಗೆ ಯಶ್ ಕಂಡ್ರೆ ತುಂಬಾ ಇಷ್ಟ. ಅವರು ನೋಡಲು ತುಂಬಾ ಹ್ಯಾಂಡ್ಸಮ್ ಆಗಿ ಇದ್ದಾರೆ. ಯಶ್ ಸಿನಿಮಾ ನೋಡಲು ನಿಜಕ್ಕೂ ತುಂಬಾ ಖುಷಿಯಾಗುತ್ತೆ. ನಾವಿಬ್ಬರು ‘ತಮಸ್ಸು’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದೆವು. ಅಲ್ಲಿಂದ ಕೆಜಿಎಫ್ ಮೂಲಕ ಬೇರೆ ಲೆವೆಲ್ಗೆ ಬೆಳೆದಿದ್ದಾರೆ. ಅದರಲ್ಲಿಯೂ ಯಶ್, ರಾಧಿಕಾ ಅವರನ್ನು ಮದುವೆಯಾದ ಮೇಲೆ ಅದೃಷ್ಟ ಹೆಚ್ಚಾಗಿದೆ ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಯಶ್ ಬಗ್ಗೆ ವಿಶೇಷ ಪ್ರೀತಿ ವ್ಯಕ್ತಪಡಿಸಿದ್ದಾರೆ ಅವರು. ‘ಯಶ್ ಅವರನ್ನು ಕಂಡರೆ ನನಗೆ ಮೊದಲಿನಿಂದಲೂ ಹೆಚ್ಚು ಪ್ರೀತಿ. ನೀವು ತುಂಬಾ ಸ್ಮಾರ್ಟ್ ಕಾಣುತ್ತೀರಿ ಎಂದು ಅನೇಕ ಬಾರಿ ಹೇಳಿದ್ದೆ. ಈ ಸಿನಿಮಾದಲ್ಲಿ ಅವರು ಇನ್ನೂ ಸ್ಮಾರ್ಟ್ ಆಗಿ ಕಾಣುತ್ತಾರೆ. ಸಿನಿಮಾ ಚೆನ್ನಾಗಿದೆ’ ಎಂದಿದ್ದಾರೆ ಶಿವಣ್ಣ.
ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ. ಈವತ್ತು ನ್ಯಾಷನಲ್ ಸ್ಟಾರ್ ಆದ್ರೂ ಅದೇ ವಿನಯವಂತಿಕೆ ಉಳಿಸಿಕೊಂಡಿದ್ದಾರೆ. ಮೊದಲು ಹೇಗಿದ್ದರೋ ಹಾಗೇ ಇದ್ದಾರೆ’ ಎಂದಿದ್ದಾರೆ. ಒಳ್ಳೆಯ ಧನಾತ್ಮಕ ವ್ಯಕ್ತಿತ್ವ ಇರುವ ವ್ಯಕ್ತಿ ಯಶ್ ಎಂದಿದ್ದಾರೆ ಶಿವಣ್ಣ. (video credit : power tv news )