ಚಿಕ್ಕಣ್ಣ ಕೂಡ ನನಗೆ ತಮ್ಮ ಇದ್ದ ಹಾಗೆ ಎಂದ ಶಿವಣ್ಣ..! ವಿಡಿಯೋ ಇಲ್ಲಿದೆ..!

By Infoflick Correspondent

Updated:Monday, March 7, 2022, 13:21[IST]

ಚಿಕ್ಕಣ್ಣ ಕೂಡ ನನಗೆ ತಮ್ಮ ಇದ್ದ ಹಾಗೆ ಎಂದ ಶಿವಣ್ಣ..! ವಿಡಿಯೋ ಇಲ್ಲಿದೆ..!

ನಟ ಪುನೀತ್ ರಾಜ್ ಕುಮಾರ್ (Puneeth Raj Kumar)  ಅವರ ಜೇಮ್ಸ್ ಚಿತ್ರದ ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನಿನ್ನೆಯಷ್ಟೇ ಜರುಗಿತು. ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ಕಲಾವಿದರು ಆಗಮಿಸಿ ಇಡೀ ಚಿತ್ರತಂಡದ ಬಗ್ಗೆ ಮಾತನಾಡಿ ಅಪ್ಪು ನೆನೆದು ತುಂಬಾ ಭಾವುಕರಾದರು. ಹೌದು ಪುನೀತ್ ಅವರು ಇದೀಗ ನಮ್ಮ ಜೊತೆಗಿಲ್ಲದೆ ನಾಲ್ಕು ತಿಂಗಳು ಕಳೆದಿದೆ, ಆದರೂ ಅವರ ಅಗಲಿಕೆಯ ನೋವು ಮಾತ್ರ ಇಂದಿಗೂ ಕಡಿಮೆ ಆಗಿಲ್ಲ. ನಿನ್ನೆ ವೇದಿಕೆ ಮೇಲೆ ಮಾತನಾಡಿದ ಶಿವಣ್ಣ(Shiv Raj Kumar) ಅವರು ನಿಜಕ್ಕೂ ತುಂಬಾನೇ ಕಷ್ಟ ಆಗುತ್ತದೆ, ಏನು ಮಾತನಾಡಬೇಕು ಗೊತ್ತಾಗುತ್ತಿಲ್ಲ. ನಾಲ್ಕು ತಿಂಗಳಿಂದ ಊಟ ಮಾಡುತ್ತಿದ್ದೇವೆ, ಮಲಗುತ್ತಿದ್ದೇವೆ, ಬದುಕಬೇಕು ಬದುಕುತ್ತಿದ್ದೇವೆ ಅಷ್ಟೇ ಎಂದು ಭಾವುಕರಾದರು.

ಜೊತೆಗೆ ಚಿಕ್ಕಣ್ಣ  (Chikkanna) ಅವರ ಬಗ್ಗೆ ಮಾತನಾಡಿದ ಶಿವಣ್ಣ ಚಿಕ್ಕಣ್ಣನ ನೋಡಿದಾಗ ನನಗೆ ತುಂಬಾ ನೋವಾಗುತ್ತದೆ, ಯಾಕೆಂದರೆ ರಾಜಕುಮಾರ ಚಿತ್ರದಲ್ಲಿ ತುಂಬಾ ಹತ್ತಿರವಾಗಿ ನೋಡಿದ್ದು ಅಪ್ಪು ಜೊತೆಗೆ ಅಭಿನಯ ಮಾಡಿದ್ದು, ನನ್ನ ತಮ್ಮನನ್ನು ಕಳೆದುಕೊಂಡ ನೋವು ಚಿಕ್ಕಣ್ಣ ಅವರನ್ನು ನೋಡಿದ ತಕ್ಷಣ ನನಗೆ ಹೆಚ್ಚಾಗುತ್ತದೆ. ಹಾಗೆ ಚಿಕ್ಕಣ್ಣ ಕೂಡ ನನಗೆ ತಮ್ಮ ಇದ್ದ ಹಾಗೆ ಎಂದರು. ಶಿವಣ್ಣನ ಮಾತು ಕೇಳಿ ಚಿಕ್ಕಣ್ಣ ಸಹ ಭಾವುಕರಾದರು ಎನ್ನಲಾಗಿದೆ. ಹೌದು ಮಾತು ಮುಂದುವರೆಸಿದ ಶಿವಣ್ಣ ಅಪ್ಪು ಎಲ್ಲರಲ್ಲಿಯೂ ಹಾಗೆ ಅಚ್ಚಳಿಯದೇ ಉಳಿದಿದ್ದಾನೆ. ನಮ್ಮ ನೆನಪಿನಲ್ಲಿ ಸದಾ  ಇರುತ್ತಾನೆ. ಪ್ರೊಡ್ಯೂಸರ್ಗೆ ಒಳ್ಳೆಯದಾಗಲಿ, ಚಿತ್ರತಂಡಕ್ಕೆ ಒಳ್ಳೆಯದಾಗಲಿ ಏನಾದರೂ ಕೆಲಸ ಇದ್ದಲ್ಲಿ ನಾನು ಖಂಡಿತ ಬಂದು ಮಾಡುತ್ತೇನೆ ಎಂದು ಶಿವಣ್ಣ ಭಾವುಕರಾದರು.      

ಹೌದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...(Video Credi : right news)