ಸಾಧನೆಯ ಮಾಡ್ಬೇಕನ್ನೋರಿಗೆ ಸ್ಫೂರ್ತಿಯಾಗೋ ಬೆಂಗಳೂರಿನ ಸಹನಾ..! ಕಣ್ಣೀರು ತಂದ ಶಿವಣ್ಣ
Updated:Thursday, April 21, 2022, 10:40[IST]

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು ಈಗ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿವೆ. ಸರಿಗಮಪ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿಯರ್ಸ್ ಹೀಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳಲ್ಲಿ ಕಲಾವಿದರು ಮನರಂಜಿಸುತ್ತಲೆ ಇದ್ದಾರೆ. ಕಿರುತೆರೆಯ ಪ್ರಿಯರನ್ನು ರಂಜಿಸುತ್ತಲೇ ಬರುತ್ತಿವೆ ಎಂದು ಹೇಳಬಹುದು. ಅದೇ ಸಾಲಿಗೆ ಇತ್ತೀಚೆಗಷ್ಟೇ ಆರಂಭವಾಗಿರುವ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ಕೂಡ ಮುಂದೆ ಬಂದಿದೆ ಎನ್ನಬಹುದು. ಕಾರ್ಯಕ್ರಮದಲ್ಲಿ ವಿಶೇಷ ಜಡ್ಜ್ ಆಗಿ ಶಿವಣ್ಣ ಅವರು ಕಾಣಿಸಿಕೊಂಡರೆ, ಇನ್ನೊಂದು ಕಡೆ ನಟಿ ರಕ್ಷಿತಾ ಪ್ರೇಮ್, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ, ಹಾಗೂ ಡಾನ್ಸ್ ಮಾಸ್ಟರ್ ಇದ್ದಾರೆ.
ಡಿಕೆಡಿ ಸೀಸನ್ 6ರ ಮೆಗಾ ಆಡಿಷನ್ ಇತ್ತೀಚಿಗೆ ನಡೆದಿದ್ದು ಕಾರ್ಯಕ್ರಮ ತುಂಬಾ ಗ್ರಾಂಡ್ ಎಂಟ್ರಿ ಪಡೆದುಕೊಂಡಿದೆ. ಬೆಂಗಳೂರಿನ ಸಹನಾ ಎನ್ನುವ ಒಬ್ಬ ಹುಡುಗಿ ವೇದಿಕೆಯ ಮೇಲೆ ಸಕ್ಕತಾಗಿ ಡಾನ್ಸ್ ಮಾಡಿದ್ದು, ಮುಂಭಾಗದಲ್ಲಿ ಕುಳಿತ ಪ್ರೇಕ್ಷಕರನ್ನು ಹಾಗೆ ಶಿವಣ್ಣ ಮತ್ತು ಇಡೀ ಡಿಕೆಡಿ ಸೆಟ್ಟನ್ನು ಕಣ್ಣೀರು ತರುವಂತೆ ಮಾಡಿದರು ಎನ್ನಬಹುದು. ಈ ಸಹನಾ ಎಂಬ ಹುಡುಗಿಗೆ ಹುಟ್ಟಿದಾಗ ಎರಡು ಕಾಲು ಇರುವುದಿಲ್ಲ ಎಂದು ಅವರ ತಾಯಿ ಹೇಳಿದ್ದು, ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡು ಬಂದು ಕಷ್ಟಪಟ್ಟು ಉಳಿಸಿಕೊಂಡೆವು.ಕಾಲು ಬಂದವು ಆದರೆ ಎಲ್ಲ ಸರಿ ಹೋಯಿತು ಎನ್ನುವಷ್ಟರಲ್ಲಿ ಇವಳಿಗೆ ಕಿವಿ ಕೇಳಿಸುತ್ತಿರಲಿಲ್ಲ ಎನ್ನುತ್ತಾರೆ. ಆಗ ಸಹನಾ ಎಂಬ ಹುಡುಗಿ ಅಪ್ಪು ಅಂದ್ರೆ ನನಗೆ ತುಂಬಾನೇ ಇಷ್ಟ ಎನ್ನುತ್ತಲೇ, ಅತ್ತ ಶಿವಣ್ಣ ಮಾಡಿದ್ದೇನು ಗೊತ್ತಾ..?
ಇಂತಹ ಹುಡುಗಿಯ ನೋಡಿದರೆ ತುಂಬಾ ಕಷ್ಟ ಆಗುತ್ತದೆ. ಎಲ್ಲಿ ಅತ್ತುಬಿಡ್ತೀನಿ ಎಂದು ಶಿವಣ್ಣ ವೇದಿಕೆ ಮೇಲೆ ಸಹನಾ ಅವರನ್ನು ಸಮಾಧಾನ ಮಾಡಿ ಬಂದರೆ, ಇದೀಗ ಅದೆ ಪ್ರೊಮೋ ವಿಡಿಯೋ ಬಾರಿ ವೈರಲ್ ಆಗುತ್ತಿದೆ. ಸಾಧನೆ ಮಾಡಬೇಕು ಎನ್ನುವವರಿಗೆ ಬೆಂಗಳೂರಿನ ಸಹನಾ ಸ್ಫೂರ್ತಿ ಆಗುತ್ತಾಳೆ. ಈ ವಿಡಿಯೋ ನೋಡಿ, ಹಾಗೆ ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು..