ಅಪ್ಪು ಅಭಿಮಾನಿಗಳಿಗೆ ಶಿವಣ್ಣನ ಕಿವಿಮಾತಿದು !! ಏನ್ ಇದು ಸಡನ್ ಆಗಿ ನೋಡಿ

By Infoflick Correspondent

Updated:Tuesday, August 2, 2022, 09:05[IST]

ಅಪ್ಪು ಅಭಿಮಾನಿಗಳಿಗೆ ಶಿವಣ್ಣನ ಕಿವಿಮಾತಿದು !! ಏನ್ ಇದು ಸಡನ್ ಆಗಿ ನೋಡಿ

ಚಾಮರಾಜನಗರ ಜಿಲ್ಲೆಯ ಡಾ.ಬಿ.ಆರ್‌.ಅಂಬೇಡ್ಕರ್ ಕ್ರೀಡಾಂಗಣದಲ್ಲಿ 'ಬೈರಾಗಿ' ಪ್ರೀ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮದ ಆರಂಭದಿಂದಲೂ "ಅಪ್ಪು-ಅಪ್ಪು.." ಎಂಬ ಘೋಷಣೆಗಳು ಸಾಮಾನ್ಯವಾಗಿತ್ತು. ನಟ ಶಿವರಾಜ್ ಕುಮಾರ್ ಮಾತನಾಡುವ ವೇಳೆಯೂ ಅಭಿಮಾನಿಯೋರ್ವ ಒಂದೇ ಸಮನೆ ಘೋಷಣೆ ಕೂಗುತ್ತಿದ್ದ.

ಇದನ್ನು ಗಮನಿಸಿದ ಶಿವಣ್ಣ ಶನಿವಾರ ನಡೆದ 'ಬೈರಾಗಿ' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡರು.  "ಏಯ್ ಸುಮ್ಮನೆ ಕೂತ್ಕೊಳಪ್ಪ, ಅವನದ್ದೂ ನನ್ನದೂ ಒಂದೇ ರಕ್ತ, ನೀನು ಈಗ ನೋಡಿದೀಯ, ನಾನು ಅವನನ್ನು ಕೂಸಿನಿಂದಲೂ ನೋಡಿದ್ದೀನಿ. ಪ್ರೀತಿ ಹೃದಯದಲ್ಲಿರಲಿ, ಕೇವಲ ಗಂಟಲಿನ‌ ಹೊರಗೆ ಮಾತ್ರವಲ್ಲ" ಎಂದು ತರಾಟೆಗೆ ತೆಗೆದುಕೊಂಡು ಬುದ್ಧಿಮಾತು ಹೇಳಿದರು.

ಪುನೀತ್ ಅಗಲಿದ ಬಳಿಕ ತವರಿಗೆ ಶಿವರಾಜ್ ಕುಮಾರ್ ಅವರ ಮೊದಲ ಭೇಟಿ ಇದಾಗಿದೆ. ಕಳೆದ ಬಾರಿ ಪುನೀತ್ ಕುಟುಂಬ ಹಾಗೂ ಶಿವರಾಜ್ ಕುಮಾರ್ ಎರಡೂ ಕುಟುಂಬವೂ ಒಟ್ಟಿಗೆ ಗಾಜನೂರಿಗೆ ಭೇಟಿ ಕೊಟ್ಟಿದ್ದರು‌.

ನಂತರ ಶಿವರಾಜ್‌ಕುಮಾರ್‌ ಅವರು, ಡಾ.ರಾಜ್‌ಕುಮಾರ್‌ ಅವರ ಹುಟ್ಟೂರು ತಾಳವಾಡಿಯಲ್ಲಿರುವ ದೊಡ್ಡಗಾಜನೂರಿಗೆ ತೆರಳಿ, ಸೋದರತ್ತೆ ನಾಗಮ್ಮ ಅವರ ಆರೋಗ್ಯ ವಿಚಾರಿಸಿದರು. ಅವರೊಂದಿಗೆ ಚಿತ್ರ ತಂಡವೂ ಜೊತೆಗಿತ್ತು.