ತಾಯಿ ನೆನೆದು ಕಣ್ಣೀರಿಟ್ಟ ಶಿವಣ್ಣ ಹೇಳಿದ ಮಾತುಗಳಿವು ಇದಕ್ಕೆ ಕ್ಷಮೆ ಕೇಳಿದ ಅನುಶ್ರೀ!
Updated:Monday, May 9, 2022, 08:41[IST]

ಅನೇಕ ವೇದಿಕೆ ಮೇಲೆ ಶಿವಣ್ಣ ಅಮ್ಮನ ಬಗ್ಗೆ ಹೇಳುತ್ತಾ ಭಾವುಕರಾಗಿದ್ದರು. ಈಗ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆರನೇ ಸಿಸನ್ ನ ತಾಯಂದಿರ ದಿನದ ವಿಶೇಷ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.
ತಮ್ಮ ಮಕ್ಕಳ ಸಿನಿಮಾದ ಎಲ್ಲಾ ಜವಬ್ದಾರಿಯನ್ನೂ ಪಾರ್ವತಮ್ಮ ಅವರೇ ನೋಡಿಕೊಳ್ಳುತ್ತಿದ್ದರು. ಸೆಟ್ಗೆ ಬಂದು ಮಕ್ಕಳ ನಟನೆಯನ್ನು ನೋಡುತ್ತಿದ್ದರು. ತನ್ನ ಮೂರು ಮಕ್ಕಳಿಗೂ ಯಾವ ರೀತಿಯ ಪಾತ್ರಗಳು ಸೂಟ್ ಆಗುತ್ತೆ ಎಂಬುದನ್ನು ನಿರ್ಧಾರ ಮಾಡುತ್ತಿದ್ದರು. ಅಣ್ಣಾವ್ರ ನಿಧನದ ನಂತರ ಪಾರ್ವತಮ್ಮ ಮೂರು ಜನ ಮಕ್ಕಳಿಗೆ ತಂದೆಯ ಸ್ಥಾನವನ್ನೂ ತುಂಬಿದರು ಎಂದರೆ ಅತೀಶಯದ ಮಾತಲ್ಲ.
ಇಂದು ತಾಯಂದಿರ ದಿನಾಚರಣೆ. ಶಿವಣ್ಣನಿಗೆ ಮಾತೃವಿಯೋಗದ ನೋವು ಇನ್ನು ಮಾಸಿಲ್ಲ. ಡ್ಯಾನ್ಸ್ ಕರ್ನಾಕಟ ಡ್ಯಾನ್ಸ್' ಕಾರ್ಯಕ್ರಮದಲ್ಲಿ ಅಮ್ಮನ ಫೋಟೊ ಕಂಡೊಡನೆ ನೋವು ತಡೆದುಕೊಳ್ಳಲಾಗದೆ ಶಿವಣ್ಣ ಕಣ್ಣೀರು ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ ತಾಯಂದಿರ ದಿನದ ಪ್ರಯುಕ್ತ ಜೀವ ಕೊಟ್ಟವಳು ತುತ್ತು ಇಟ್ಟವಳು ಭೂಮಿ ಮೇಲೆ ಒಬ್ಬಳೇ ಹಾಡಿಗೆ 15 ವರ್ಷದ ಸಹನಾ ಡ್ಯಾನ್ಸ್ ಮಾಡುವಾಗ ಡ್ಯಾನ್ಸ್ನಲ್ಲಿ ಜಡ್ಜಸ್ ತಮ್ಮ ತಾಯಂದಿರ ಜೊತೆಗಿರುವ ಫೋಟೊ ಹಾಕಿದ್ದರು ಪೋಟೊ ನೋಡಿದೊಡನೆ ಶಿವಣ್ಣನ ಕಣ್ಣಲ್ಲಿ ನೀರು ಕಂಡು ಅನುಶ್ರೀ ಕ್ಷಮೆಯನ್ನು ಕೇಳಿದರು. ಪರ್ಫಾಮೆನ್ಸ್ ಬಗ್ಗೆ ಮಾತನಾಡಿದ ಶಿವಣ್ಣ, ಇದೊಂದು ಬೇರೆ ಲೋಕಕ್ಕೆ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟಿದೆ. ಎಂದರು.
ನನಗೆ ತುಂಬಾ ಇಷ್ಟವಾದ ಫೋಟೊ ಇದು. ಯಾವ ಫೀಲಿಂಗ್ಸ್ ಬೇಕಾದರೂ ಮರೆಯಬಹುದು. ತಾಯಿ ಫೀಲಿಂಗ್ಸ್ ಮರೆಯೋದಕ್ಕೆ ಆಗಲ್ಲ. ನನಗೆ ಆ ಫೋಟೊ ನೋಡಿದ ಕೂಡಲೇ ದುಃಖ ತಡೆಯುವುದಕ್ಕೆ ಆಗಲಿಲ್ಲ. ಎಂದು ಬೇಡುವೆನು ವರವನ್ನು ಕೊಡೆ ತಾಯಿ ಜನ್ಮವನ್ನು ಎಂಬ ಜೊಗಿ ಸಿನಿಮಾದ ಹಾಡು ಹೇಳಿ ತಾಯಿಯನ್ನು ಕಣ್ಣೀರಲ್ಲಿ ನೆನೆದು ಎಲ್ಲರೂ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಶಿವರಾಜ್ ಕುಮಾರ್ ಭಾವುಕರಾಗಿ ಹೇಳಿದರು.