ಕಿಚ್ಚನ ಮನೆಗೆ ಸೀದಾ ಎಂಟ್ರಿ ಕೊಟ್ಟ ಶಿವಣ್ಣ ಗೀತಕ್ಕ ಕೊಟ್ಟ ಸರ್ಪ್ರೈಸ್ ಹೇಗಿತ್ತು ಗೊತ್ತಾ..? ನೀವೇ ನೋಡಿ

By Infoflick Correspondent

Updated:Saturday, September 3, 2022, 09:17[IST]

ಕಿಚ್ಚನ ಮನೆಗೆ ಸೀದಾ ಎಂಟ್ರಿ ಕೊಟ್ಟ ಶಿವಣ್ಣ ಗೀತಕ್ಕ ಕೊಟ್ಟ ಸರ್ಪ್ರೈಸ್ ಹೇಗಿತ್ತು ಗೊತ್ತಾ..? ನೀವೇ ನೋಡಿ

ನಟ ಕಿಚ್ಚ ಸುದೀಪ್ ಅವರು ನಿನ್ನೆ 49 ವರ್ಷದ ಹುಟ್ಟು ಹಬ್ಬದ ಆಚರಣೆಯನ್ನು ಮಾಡಿ ಕೊಂಡಿದ್ದಾರೆ. ಹೌದು, ಸುಮಾರು ಎರಡು ವರ್ಷಗಳ ಬಳಿಕ ಅಭಿಮಾನಿಗಳ ಅಂಗಳದಲ್ಲಿ ಕಿಚ್ಚ ಬ್ರೋ ಹುಟ್ಟು ಹಬ್ಬ ಸಂಭ್ರಮಾಚರಣೆ ತುಂಬಾ ಜೋರಾಗಿ ನಡೆಯಿತು ಎಂದು ಹೇಳಬಹುದು. ಕಿಚ್ಚ ಸುದೀಪ್ ಅವರು ಸಾಮಾನ್ಯವಾಗಿ ಯಾವುದೇ ಕೆಲಸ ಮಾಡಿಕೊಂಡರು ಸಹ ಸರಳವಾಗಿಯೇ ಮಾಡಿಕೊಳ್ಳುತ್ತಾರೆ. ಕನ್ನಡಿಗರ ಮನೆಮಾತಾಗಿರುವ ಕಿಚ್ಚ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ನಿನ್ನೆ ಕಿಚ್ಚ 49 ವರ್ಷದ ವಸಂತಕ್ಕೆ ಕಾಲಿಟ್ಟರು. ಅಭಿಮಾನಿಗಳು, ಕುಟುಂಬಸ್ಥರು, ಸ್ನೇಹಿತರು, ಮತ್ತು ಕನ್ನಡಿಗರು ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದ ಶುಭಾಶಯ ಕೋರಿ ಅವರಿಗೆ ದೇವರು ಇನ್ನಷ್ಟು ಆಯಸ್ಸು, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಹರಸಿದರು.

ಹೀಗಿರುವಾಗ ನಮ್ಮ ಹೆಮ್ಮೆಯ ನಟ ಶಿವಣ್ಣ ಮತ್ತು ಅವರ ಪತ್ನಿ ಗೀತಾ ಅವರು ಇದ್ದಕ್ಕಿದ್ದಂತೆ ಕಿಚ್ಚ ಸುದೀಪ್ ಅವರ ಮನೆಗೆ ಭೇಟಿ ನೀಡಿದ್ದಾರೆ, ಹೌದು. ಅದು ಕಿಚ್ಚ ಸುದೀಪ್ ಅವರಿಗೆ ಗೊತ್ತಿರದ ಹಾಗೇನೆ ಹೋಗಿದ್ದಾರೆ ಎನ್ನಲಾಗುತ್ತಿದೆ. ಸ್ವತಹ ಗೀತಕ್ಕ ಅವರೇ ತಯಾರು ಮಾಡಿದ ಕೇಕ್ ಜೊತೆಗೆ ಶಿವಣ್ಣ ಅವರು ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದು. ನಂತರ ಕಿಚ್ಚನಿಗೆ ಶಿವಣ್ಣ ಕೇಕ್ ತಿನ್ನಿಸಿ ಖುಷಿಯ ಕ್ಷಣದಲ್ಲಿ ಭಾಗಿಯಾಗಿದರು. ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದು, ನಿನ್ನೆ ಕೇಕ್ ತಿನಿಸಿದ ಕೆಲ ದೃಶ್ಯ ಹಾಗೂ ವಿಡಿಯೋಗಳು ಬಾರಿ ವೈರಲ್ ಆಗಿದ್ದಾವೆ. ಶಿವಣ್ಣ ಮತ್ತು ಗೀತಕ್ಕ ಅವರನ್ನು ನೋಡಿ ಅವರ ಪ್ರೀತಿಯ ಸರ್ಪ್ರೈಸ್ ನೋಡಿ ಕಿಚ್ಚ ಸುದೀಪ್ ಒಂದು ಕ್ಷಣ ಭಾವುಕರಾದರು ಎನ್ನಲಾಗಿದೆ.

ಅವರ ಬರ್ತಡೆಯಲ್ಲಿ ನಿನ್ನೆ ಶಿವಣ್ಣ ಗೀತಕ್ಕ ಹಾಗೆ ಕಿಚ್ಚ ಸುದೀಪ್ ಅವರ ಪತ್ನಿ ಕೂಡ ಕಂಡುಬಂದರು. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ಅವರಿಗೆ ಶುಭಾಶಯ ತಿಳಿಸಿದರು. ಶಿವಣ್ಣ ಮತ್ತು ಗೀತಕ್ಕ ಸರ್ಪ್ರೈಸ್ ನೋಡಿ ಕಿಚ್ಚ ಸುದೀಪ್ ಬೆರಗಾಗಿದ್ದು ನೀವು ಕೂಡ ಸುದೀಪ್ ಅವರಿಗೆ ಶುಭಾಶಯ ಹುಟ್ಟು ಹಬ್ಬದ ಶುಭ ಕೋರಿ. ನಿಮ್ಮ ನೆಚ್ಚಿನ ಸುದೀಪ್ ಅವರಿಗೆ ಒಳ್ಳೆಯದಾಗಲಿ ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು...