ಶಿವಣ್ಣನ ಎಂಟ್ರಿಗೆ ಶಾಕ್ ರಕ್ಷಿತಾ ಪ್ರೇಮ್ ಅನುಶ್ರೀ..! ಅರ್ಜುನ್ ಜನ್ಯ ಇಎಂಐ ಕಟ್ಟೋದೆಗೆ ಎಂದಿದ್ದೇಕೆ

By Infoflick Correspondent

Updated:Thursday, April 14, 2022, 12:38[IST]

ಶಿವಣ್ಣನ ಎಂಟ್ರಿಗೆ ಶಾಕ್ ರಕ್ಷಿತಾ ಪ್ರೇಮ್ ಅನುಶ್ರೀ..! ಅರ್ಜುನ್ ಜನ್ಯ ಇಎಂಐ ಕಟ್ಟೋದೆಗೆ ಎಂದಿದ್ದೇಕೆ

ಕನ್ನಡ ಕಿರುತೆರೆಯಲ್ಲಿ ಹೆಚ್ಚು ಮನರಂಜನೆಯ ನೀಡುವ ಚಾನೆಲ್ ಎಂದರೆ ಅದು ಜೀ ಕನ್ನಡ ಎಂದು ಹೇಳಬಹುದು. ಸರಿಗಮಪ, ಕಾಮಿಡಿ ಕಿಲಾಡಿಗಳು, ಡಾನ್ಸ್ ಪ್ರೋಗ್ರಾಮ್ ಹೀಗೆ ಹೆಚ್ಚೆಚ್ಚು ವಾರಾಂತ್ಯಗಳಲ್ಲಿ ರಿಯಾಲಿಟಿ ಷೋಗಳು ಪ್ರಸಾರ ಆಗುತ್ತವೆ. ಹೌದು ಸದಾ ಒಂದಿಲ್ಲೊಂದು ಹೊಸತನ ತರುವ ಜೀ ಕನ್ನಡ ಚಾನೆಲ್ ಒಂದು ಕಾರ್ಯಕ್ರಮ ಚೆನ್ನಾಗಿ ಓಡುತ್ತಿದೆ, ಹಾಗೆ ಅದನ್ನ ಜನರು ಇಷ್ಟಪಡುತ್ತಿದ್ದಾರೆ ಎಂದರೆ ಮಾತ್ರ ಅದನ್ನು ಮುಂದುವರಿಸುತ್ತಾರೆ. ಇಲ್ಲವಾದಲ್ಲಿ ಅದನ್ನ ತಕ್ಷಣ ತೆಗೆದು ಬಿಡುತ್ತಾರೆ. ಹಾಗಾಗಿಯೇ ನಂಬರ್ ಒಂದನೇ ಸ್ಥಾನದಲ್ಲಿ ಜೀ ಕನ್ನಡ ಇದೆ ಎನ್ನಲಾಗಿದೆ. ಹೌದು ವೀಕ್ಷಕರು  ಇಷ್ಟಪಡುತ್ತಿಲ್ಲ ಈ ಶೋನ ಎಂದು ಅವರ ಗಮನಕ್ಕೆ ಬಂದರೆ ಆ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಿಬಿಡುತ್ತಾರೆ.

ಉದಾಹರಣೆಯೆಂಬಂತೆ ಇತ್ತೀಚಿಗೆ ಆರಂಭವಾಗಿದ್ದ ನಟ ಗಣೇಶ್ ನೇತೃತ್ವದ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಎಂದು ಹೇಳಬಹುದು. ಆರಂಭದಲ್ಲಿ ತುಂಬಾನೇ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡ ಈ ಗೋಲ್ಡನ್ ಗ್ಯಾಂಗ್ ಇತ್ತೀಚಿಗೆ ಮುಕ್ತಾಯವಾಯ್ತು. ಜೀ ಕನ್ನಡ ಡಿಕೆಡಿ ಕಾರ್ಯಕ್ರಮವನ್ನು ಇದೀಗ ಮತ್ತೆ ಶುರು ಮಾಡಲಿದೆ. 5 ಸೀಸನ್ ಮುಗಿಸಿರುವ ಡಿಕೆಡಿ ಶೋ ಒಳ್ಳೆ ಅಭಿಪ್ರಾಯಗಳನ್ನು ಗಿಟ್ಟಿಸಿಕೊಂಡಿದೆ. 6ನೇ ಸೀಸನ್ ಡಿಕೆಡಿ ಕಾರ್ಯಕ್ರಮ ಇದೆ ಎಪ್ರಿಲ್ 16 ರಿಂದ ಆರಂಭವಾಗುತ್ತಿದ್ದು ಪ್ರತಿಬಾರಿಯಂತೆ ನಿರೂಪಕಿ ಅನುಶ್ರೀ ಇದ್ದಾರೆ. ಜಡ್ಜಸ್ ಗಳಾಗಿ ರಕ್ಷಿತ ಪ್ರೇಮ್, ಅರ್ಜುನ್ ಜನ್ಯ ಚಿನ್ನಿ ಪ್ರಕಾಶ್ ಅವರು ಇದ್ದಾರೆ. ಆದರೆ ಇವರಿಗೆಲ್ಲಾ ಇದೀಗ ಒಂದು ಪ್ರೊಮೊ ಮೂಲಕ ಜಿ ಕನ್ನಡ ಟೆನ್ಶನ್ ಕೊಟ್ಟಿತ್ತು. 

ಡಿಕೆಡಿ ಕಾರ್ಯಕ್ರಮದಲ್ಲಿ ಮೊಟ್ಟಮೊದಲ ಬಾರಿಗೆ ನಮ್ಮ ಪ್ರೀತಿಯ, ಹಾಗೂ ನಿಮ್ಮೆಲ್ಲರ ನೆಚ್ಚಿನ ಡಾನ್ಸರ್ ಹಾಗೆ ಶಿವಣ್ಣ ಎಂದೇ ಕರ್ನಾಟಕದ ತುಂಬಾ ಕರೆಯಲ್ಪಡುವ ಶಿವರಾಜ್ ಕುಮಾರ್ ಅವರು ಬಂದಿದ್ದಾರೆ. ಪ್ರಮೋದಲ್ಲಿ ಶಿವಣ್ಣ ಅವರನ್ನು ನೋಡುತ್ತಿದ್ದಂತೆಯೇ,  ರಕ್ಷಿತಾ ಪ್ರೇಮ್ ಅವರಿಗೆ ಕಾಲ್ ಮಾಡಿದ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಡಿಕೆಡಿ ಪ್ರೊಮೋ ನೋಡಿದ್ರ ಎಂದು ಕೇಳುತ್ತಾರೆ. ನಂತರ ಒಂದು ಕಡೆ ರಕ್ಷಿತಾ ಪ್ರೇಮ್, ಅರ್ಜುನ್, ಅನುಶ್ರೀ ಮತ್ತು ಚಿನ್ನಿ ಪ್ರಕಾಶ್ ಕುಳಿತುಕೊಂಡಿದ್ದು ನಮ್ಮನ್ನು ಈ ಷೋದಿಂದ ತೆಗೆದುಬಿಡುತ್ತಾರ ಎಂದು ಮಾತಾಡಿಕೊಂಡು ಟೆನ್ಷನ್ ಅಲ್ಲಿ ಇರುತ್ತಾರೆ. ಟೆನ್ಷನ್ ಅಲ್ಲಿ ಇದ್ದಾಗಲೇ ನಟ ಶಿವಣ್ಣನ ಎಂಟ್ರಿಗೆ ಎಲ್ಲರೂ ಬೆಚ್ಚಿಬೀಳುತ್ತಾರೆ. ನಂತರ ಶಿವಣ್ಣ ಬಿಟ್ಟುಬಿಡುತ್ತಿವಾ ಎಂಬ ಡೈಲಾಗ್ ಹೊಡೆದು, ನಿಮ್ಮನ್ನು ಬಿಟ್ಟು ಈ ಕಾರ್ಯಕ್ರಮ ಮಾಡಲು ಆಗುತ್ತ..? ಎಲ್ಲರೂ ಒಟ್ಟಿಗೆ ಹೋಗೋಣ ಬನ್ನಿ ಎನ್ನುತ್ತಾರೆ. 

ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಶಿವಣ್ಣ ಅವರ ಎನರ್ಜಿ ಈ ಷೋ ಮೂಲಕ ಮತ್ತೆ ಎದ್ದು ಕಾಣುತ್ತಿದೆ. ಈ ವಿಡಿಯೋ ನೋಡಿ. ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು....