Shivarajkumar : ಅಪ್ಪು ಸಿನಿಮಾ ಆಗಲು ಶಿವಣ್ಣ ಹೇಗೆ ಕಾರಣ ಇಲ್ಲಿದೆ ಯಾರೂ ಅರಿಯದ ರೋಚಕ ಸಂಗತಿಗಳು

By Infoflick Correspondent

Updated:Wednesday, July 13, 2022, 09:02[IST]

Shivarajkumar : ಅಪ್ಪು ಸಿನಿಮಾ ಆಗಲು ಶಿವಣ್ಣ ಹೇಗೆ ಕಾರಣ ಇಲ್ಲಿದೆ ಯಾರೂ ಅರಿಯದ ರೋಚಕ ಸಂಗತಿಗಳು

ಅಪ್ಪು, ಶಿವಣ್ಣನಿಗೆ ಸಹೋದರ ಮಾತ್ರವಲ್ಲ ತಂದೆಯಂತಿದ್ದವರು. ಇಬ್ಬರ ನಡುವೆ 13 ವರ್ಷಗಳ ಅಂತರ. ಪುನೀತ್ ಮಗುವಿದ್ದಾಗ ಚೆನ್ನೈನ ಬೀದಿಗಳಲ್ಲಿ ಶಿವಣ್ಣ, ಅಪ್ಪುವನ್ನು ಎತ್ತಿಕೊಂಡು ಓಡಾಡಿದ್ದರು. ಪುನೀತ್ ರಾಜ್‌ಕುಮಾರ್ ಜೀವನದಲ್ಲಿ ಶಿವಣ್ಣ ಅವರದ್ದು ಮಹತ್ವದ ಪಾತ್ರ, ನಾಯಕ ನಟ ಆಗುವುದರಿಂದ ಹಿಡಿದು, ಪುನೀತ್ ವಿವಾಹದಲ್ಲೂ ಶಿವಣ್ಣನ ಪಾತ್ರವಹಿಸಿದ್ದಾರೆ. ಶಿವಣ್ಣ ನನಗೆ ತಂದೆ ಸಮಾನರೆಂದು ಅಪ್ಪು ಹಲವು ಬಾರಿ ಹೇಳಿಕೊಂಡಿದ್ದರು.

ಪುನೀತ್ ರಾಜ್‌ಕುಮಾರ್ ಮತ್ತು ರಕ್ಷಿತಾ ನಟನೆಯ `ಅಪ್ಪು’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿತ್ತು. ಪುನೀತ್ ನಟಿಸಿದ ಮೊದಲ ಚಿತ್ರದಲ್ಲೇ ಸೈ ಎನಿಸಿಕೊಂಡಿದ್ರು. ಇದೀಗ `ಅಪ್ಪು’ ಸಿನಿಮಾ ತೆರೆಕಂಡು ಇಂದಿಗೆ 20 ವರ್ಷಗಳಾಗಿದೆ.  ಅಪ್ಪು ಸಿನಿಮಾ ಹಿಂದಿದೆ ಅನೇಕ ರೋಚಕ ಕಥೆ


ಪುನೀತ್ ರಾಜ್‌ಕುಮಾರ್ ನಾಯಕ ನಟನಾಗುವಲ್ಲಿ ಶಿವಣ್ಣನ ಪಾತ್ರ ಪ್ರಮುಖವಾದುದು. ಶಿವಣ್ಣನಿಗಾಗಿ ತೆಲುಗಿನ ಪುರಿ ಜಗನ್ನಾಥ್ ಕೆಲವು ಕತೆಗಳನ್ನು ಹೇಳಿದ್ದರು. ಆ ಕತೆಗಳಲ್ಲಿ ಒಂದನ್ನು ತಮ್ಮ ಸಹೋದರ ಪುನೀತ್ ರಾಜ್‌ಕುಮಾರ್‌ಗೆ ಸೂಕ್ತ ಎಂದು ಆಯ್ಕೆ ಮಾಡಿದ್ದು, ಪುರಿ ಜಗನ್ನಾಥ್ ಅನ್ನು ಮನೆಗೆ ಕರೆದುಕೊಂಡು ಹೋಗಿ ಅಮ್ಮ ಪಾರ್ವತಮ್ಮನವರ ಬಳಿ ಮಾತನಾಡಿ ಪುನೀತ್ ರಾಜ್‌ಕುಮಾರ್‌ಗಾಗಿ ಇದೇ ಕತೆಯನ್ನು ಸಿನಿಮಾ ಮಾಡುವಂತೆ ಒಪ್ಪಿಸಿದ್ದು ಶಿವರಾಜ್ ಕುಮಾರ್. 'ಅಪ್ಪು' ಸಿನಿಮಾ ಆಗಿದ್ದು ಹೀಗೆ.

ಅಪ್ಪು ಸಿನಿಮಾದ ಪೋಸ್ಟರನ್ನ ನೋಡಿ , ಹಲವರು ಈ ಯುವ ತರುಣನಲ್ಲಿ ಹೀರೋ ಎಲಿಮೆಂಟ್ ಇಲ್ಲ ಎಂದೇ ಭವಿಷ್ಯ ನುಡಿದಿದ್ರು . ಅಲ್ಲದೇ ಪುನೀತ್ ಫಿಸಿಕ್ ನೋಡಿ ಕೂಡ ಈತ ಸೂಪರ್ ಸ್ಟಾರ್ ಆಗಲು ಸಾಧ್ಯವೇ ಇಲ್ಲ ಎಂದಿದ್ರು . ಯಾಕಂದ್ರೆ ಆ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಬರೋಬ್ಬರಿ 120 ಕೆಜಿ ತೂಕ ಇದ್ರು . ಇಂತಹ ಸಮದಯಲ್ಲಿ ವರ್ಕೌಟ್ ಅನ್ನೋ ಅಖಾಡಕ್ಕೆ ಧುಮುಕಿದ ಈ ವೀರ ಕನ್ನಡಿಗ ಒಂದು ವರ್ಷಗಳ ಕಾಲ ತಮ್ಮ ದೇಹವನ್ನ ದಂಡಿಸಿ , ಕಡೆಗೆ 40 ಕೆಜಿ ಕಡಿಮೆ ಮಾಡಿ ದೇಹದ ತೂಕವನ್ನ 80 ಕ್ಕೆ ಇಳಿಸಿದ್ರು . ಹೀಗೆ ಸತತ ಪ್ರಯತ್ನ ಪಟ್ಟ ಪರಿಶ್ರಮದ ಫಲವಾಗಿ ಪುನೀತ್‌ಗೆ ಅಂದು ಸಕ್ಸಸ್ ದೊರೆತಿತ್ತು .


ಅಪ್ಪು ಹೀರೋ ಆಗಿ ಬಣ್ಣ ಹಚ್ಚಿದ ಮೊದಲ ಸಿನಿಮಾವೇ ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸನಲ್ಲಿ ಕೊಳ್ಳೆ ಹೊಡೆದಿತ್ತು . ಪರಿಣಾಮ ಪುನೀತ್‌ರಾಜ್‌ಕುಮಾರ್ ಸ್ಯಾಂಡಲ್‌ವುಡ್ ಬೆಳ್ಳಿಯ ಪರದೆಯ ಅರಸನಾಗಿ ಗುರುತಿಸಿಕೊಂಡಿದ್ದರು . ಅಲ್ಲದೇ ಅಪ್ಪು ಸಿನಿಮಾದ 125 ನೇ ಅಪ್ಪು ದಿನದ ಸಂಭ್ರಮಾಚರಣೆಯಲ್ಲಿ ಸ್ವತಃ ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಬಂದು ಅಪ್ಪು ಅನ್ನೋ ಸ್ಯಾಂಡಲ್ ಬ್ರೆಡ್ ವಜ್ರದ ಮಣಿಯನ್ನ ಕೊಂಡಾಡಿದ್ರು . ಅಂದೇ ಪುನೀತ್ ರಾಜ್‌ಕುಮಾರ್ ಮುಖದಲ್ಲಿ ಪವರ್‌ಫುಲ್ ಕನಸನ್ನ ಕೂಡ ರಜನಿಕಾಂತ್ ಕಂಡಿದ್ದರು .