Shivarajkumar : ಅಪ್ಪು ಅವರಂತೆಯೇ ಶಿವಣ್ಣ ಸಹ ಹೋವಬೋರ್ಡ್ ಮೇಲೆ ಜಾಲಿ ರೈಡ್..! ಪುನೀತ್ ಅವರನ್ನೇ ನೋಡಿದಂಗ್ ಆಯ್ತು
Updated:Wednesday, April 27, 2022, 16:08[IST]

ಪುನೀತ್ ರಾಜಕುಮಾರ್ ಅವರು ಇದೀಗ ನಮ್ಮನ್ನೆಲ್ಲಾ ದೈಹಿಕವಾಗಿ ಅಗಲಿ ನಾಲ್ಕೈದು ತಿಂಗಳು ಕಳೆದಿವೆ. ಆದರೂ ಅವರ ನೆನಪು ಸದಾ ನಮ್ಮೊಂದಿಗೆ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು. ದಿನೇದಿನೇ ಪುನೀತ್ ಅವರ ಒಂದಲ್ಲ ಒಂದು ವಿಡಿಯೋ ಫೋಟೋಗಳು ಅವರ ಕೆಲಸ ಕಾರ್ಯ ನಮಗೆ ಕಾಣಸಿಗುತ್ತವೆ. ಬದುಕಿದ್ದಾಗ ಅಪ್ಪುವವರು ಯಾವ ರೀತಿ ಜೀವನವನ್ನು ಮಾಡಿದ್ದರು, ಸರಳತೆಯ ರಾಜಕುಮಾರ ಆಗಿದ್ದರು ಎಂಬುದಾಗಿ ಹೆಚ್ಚು ಗೊತ್ತಾಗುತ್ತದೆ..ಹೌದು ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಚಿತ್ರ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸದ್ದು ಮಾಡಿದ್ದು ಆಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಅಪ್ಪು ಅವರದ್ದೇ ಕಾರುಬಾರು ಎಂದೆನಿಸಿತ್ತು.
ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಅವರ ಫೋಟೋಗೆ ದೇವರಂತೆ ಪೂಜೆಸಲ್ಲಿಸಿದ ಅವರ ಅಭಿಮಾನಿ ಬಳಗದವ್ರು ಇಂದಿಗೂ ಅವರ ಮನೆಯಲ್ಲಿ ಶಾಶ್ವತವಾಗಿ ಅಪ್ಪು ಅವರ ಫೋಟೋ ಹಾಕಿಕೊಂಡು ಪೂಜೆ ಮಾಡುತ್ತಿದ್ದಾರೆ. ಅಪ್ಪು ಅವರು ಇಲ್ಲವಾದ ಬಳಿಕ ಅವರ ಮನೆಯಲ್ಲಿ ಹೋವಾ ಬೋರ್ಡ್ ಮೇಲೆ ಸಕ್ಕತ್ ಜಾಲಿ ರೈಡ್ ಮಾಡಿದ್ದರು. ಹಾಗೆ ಎಲ್ಲದರಲ್ಲೂ ಮುಂದಿದ್ದ ಅಪ್ಪು ಅವರು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವಂತೆ ಎಲ್ಲಾ ವಿದ್ಯೆಯನ್ನು ಕಲಿತಿದ್ದರು ಎಂದು ಆ ವಿಡೀಯೋ ತೋರಿಸಿತ್ತು. ಹೋವಾ ಬೋರ್ಡ್ ಮೇಲೆ ಅಪ್ಪು ಅವರ ವಿಡಿಯೋ ಹೆಚ್ಚು ವೈರಲ್ ಆಗಿದ್ದು ನೀವು ಎಲ್ಲರೂ ನೋಡಿದ್ದೀರಿ.
ಅದೇ ರೀತಿ ಅಧಿಕ ಶಿವಣ್ಣ ಕೂಡ ಮನೆಯಲ್ಲಿ ಹೋವಾ ಬೋರ್ಡ್ ಮೇಲೆ ಸಕ್ಕತ್ ಜಾಲಿ ರೈಡ್ ಮಾಡಿದ್ದಾರೆ. ಅದರ ವಿಡಿಯೋ ತುಣುಕು ಹೆಚ್ಚು ವೈರಲ್ ಸಹ ಆಗುತ್ತಿದೆ. ಅಪ್ಪು ಅವರಂತೆಯೇ ಶಿವಣ್ಣ ಅವರು ಇದೀಗ ಅದರ ಮೇಲೆ ರೈಡ್ ಮಾಡಿದ್ದು ಅಪ್ಪು ನೆನಪನ್ನು ಮತ್ತೆ ತರಿಸಿತು ಈ ವಿಡಿಯೋ ಎನ್ನಬಹುದು. ನೀವು ಕೂಡ ಈ ವಿಡಿಯೋ ನೋಡಿ ಹಾಗೆ ವಿಡಿಯೋ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು...