ಸೈಮಾ ವೇದಿಕೆಯಲ್ಲಿ ತಮ್ಮನಿಗಾಗಿ ಕಣ್ಣೀರಿಡುತ್ತಾ ಈ ಹಾಡನ್ನು ಹಾಡಿದ ಶಿವಣ್ಣ

By Infoflick Correspondent

Updated:Sunday, September 11, 2022, 15:07[IST]

ಸೈಮಾ ವೇದಿಕೆಯಲ್ಲಿ ತಮ್ಮನಿಗಾಗಿ ಕಣ್ಣೀರಿಡುತ್ತಾ ಈ ಹಾಡನ್ನು ಹಾಡಿದ ಶಿವಣ್ಣ

ಪ್ರತಿಷ್ಠಿತ ಸೈಮಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ನಟ ಶಿವರಾಜ್ ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ನಡೆಯಿತು.ಪುನೀತ್ ರಾಜ್ ಕುಮಾರ್ ಗೌರವಾರ್ಥ ಸೈಮಾವನ್ನು ಈ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ವೇದಿಕೆಯಲ್ಲಿ ಪುನೀತ್ ಗೆ ವಿಶೇಷ ಗೌರವ ನೀಡಲಾಯಿತು. 

ಸೈಮಾ 2022 ಅತ್ಯುತ್ತಮ ನಟ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ನೀಡಲಾಯಿತು. ಯುವರತ್ನ ಸಿನಿಮಾದ ನಟನೆಗೆ ಪುನೀತ್ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇಡಿ ಯುವರತ್ನ ತಂಡ ಪ್ರಶಸ್ತಿ ಸ್ವೀಕರಿಸಿ ಅಪ್ಪುಗೆ ಅರ್ಪಿಸಿದರು.  

ಈ ವೇಳೆ ವೇದಿಕೆ ಶಿವರಾಜ್ ಕುಮಾರ್ ಸೇರಿದಂತೆ ಇಡೀ ದೊಡ್ಮನೆ ಕುಟುಂಬವನ್ನು ವೇದಿಕೆಗೆ ಕರೆಸಿ ಗೌರವಿಸಲಾಯಿತು. ಈ ವೇಳೆ ಪುನೀತ್ ವಿಡಿಯೋ ನೋಡಿ ಶಿವಣ್ಣ ಮತ್ತು ಇಡೀ ಕುಟುಂಬ ವೇದಿಕೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್ ಹಾಗು ಶಿವಣ್ಣ ಸಹೋದರಿಯರು ಸೈಮಾ 2022 ವೇದಿಕೆಯಲ್ಲಿ ಕಾಣಿಸಿಕೊಂಡರು. ತನ್ನ ಕುಟುಂಬದ ಜೊತೆ ವೇದಿಕೆ ಏರಿದ ಶಿವಣ್ಣ ತಮ್ಮನ ನೆನಪಿಗೆ ಜಾರಿದರು. ಪ್ರೀತಿಯ ಸಹೋದರನಿಗೆ ಹಾಡು ಹೇಳಿ ಭಾವುಕರಾದರು. ಪುನೀತ್ ಇಷ್ಟದ 'ಬಾನದಾರಿಯಲ್ಲಿ ಸೂರ್ಯ ಜಾರಿ ಹೋದಾ...'ಹಾಡನ್ನು ಹೇಳಿದರು. ಶಿವಣ್ಣ ಈ ಹಾಡನ್ನು ಹೇಳುತ್ತಿದ್ದಂತೆ ಇಡೀ ಕುಟುಂಬ ಅಪ್ಪು ನೆನೆದು ಕಣ್ಣೀರಿಟ್ಟರು. ಶಿವಣ್ಣ ತಮ್ಮನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತರು.