Shiva Rajkumar :ಕೆಜಿಎಫ್ ಚಿತ್ರದ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ಓಂ, ಜೋಗಿ ಸಿನಿಮಾ ಹೆಸರೇಳಿದ್ದೇಕೆ..?

By Infoflick Correspondent

Updated:Thursday, June 16, 2022, 21:16[IST]

Shiva Rajkumar :ಕೆಜಿಎಫ್ ಚಿತ್ರದ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ಓಂ, ಜೋಗಿ ಸಿನಿಮಾ ಹೆಸರೇಳಿದ್ದೇಕೆ..?

ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಈಗ ಭೈರಾಗಿ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಜುಲೈ 1 ರಂದು ಬೈರಾಗಿ ಚಿತ್ರ ರಿಲೀಸ್‌ ಆಗಲಿದೆ. ಅಂದು ಶಿವರಾಜ್ ಕುಮಾರ್ ಅವರ ಜನ್ಮ ದಿನದ ಅಡ್ವಾನ್ಸ್ ಉಡುಗೊರೆಯಾಗಿ ಈ ಚಿತ್ರ ರಿಲೀಸ್‌ ಆಗುತ್ತಿದೆ ಎಂದು ನಿರ್ಮಾಪಕ ಕೃಷ್ಣ ಸಾರ್ಥಕ್ ಹೇಳಿದ್ದಾರೆ. ಶಿವಣ್ಣ ಅವರ ನಟನೆಯ 123ನೇ ಸಿನಿಮಾ ಬೈರಾಗಿ. ಈ ಚಿತ್ರ ಬಿಡುಗಡೆಗೂ ಮುನ್ನವೇ ಲಾಭದಲ್ಲಿದೆ. ಚಿತ್ರದ ಸ್ಯಾಟಲೈಟ್‌ ಹಕ್ಕುಗಳು ಈಗಾಗಲೇ ಮಾರಾಟವಾಗಿದೆ. ಬರೋಬ್ಬರಿ 10 ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಮಾರಾಟವಾಗಿದೆ.

ಸದ್ಯಕ್ಕೆ ಈ ಸಿನಿಮಾ ಕನ್ನಡದಲ್ಲಷ್ಟೇ ಬಿಡುಗಡೆಯಾಗುತ್ತಿದೆ. ಇನ್ನು ಇತರೆ ಭಾಷೆಗಳಿಂದಲೂ ಈ ಚಿತ್ರದ ಡಬ್ಬಿಂಗ್‌ಗೆ ಬೇಡಿಕೆ ಬಂದಿದೆ. ಆದರೆ ಸದ್ಯ ಕನ್ನಡದಲ್ಲಷ್ಟೇ ರಿಲಿಸ್‌ ಆಗ್ತಿದೆ. ಈ ಬಗ್ಗೆ ಮಾತನಾಡುವಾಗ ಮೀಡಿಯಾದವರು, ಕೆಜಿಎಫ್‌ ಚಿತ್ರದ ಬಗ್ಗೆ ಕೇಳಿದ್ದಾರೆ. ಆಗ ಶಿವಣ್ಣ ಅವರು ಕೆಜಿಎಫ್‌ ಬೇರೆ, ನನ್ನ ಸಿನಿಮಾಗಳೇ ಬೇರೆ. ಹಾಗೆಲ್ಲಾ ಹೇಳುವುದಕ್ಕೆ ಆಗುವುದಿಲ್ಲ. ಹಾಗೆ ಹೇಳೋದಕ್ಕೆ ಹೋದರೆ, ಓಂ ಚಿತ್ರವಿಲ್ಲವಾ.. ಓಂ ಚಿತ್ರಕ್ಕಿಂತ ಬೇಕಾ. ಜೋಗಿ ಚಿತ್ರವಿದೆ. ಇದಕ್ಕೆ ಕೆಜೆಎಫ್‌ ಗೆ ಹೋಲಿಸುವುದಕ್ಕೆ ಸಾಧ್ಯವಾ.

ನಮ್ಮದು ಭಾವನೆಗಳಿರುವ ಸಿನಿಮಾಗಳು. ಮಂದಾರ ಹೂವೇ, ಓಂ, ಜೋಗಿ, ಜನುಮದ ಜೋಡಿ ಈ ಚಿತ್ರಗಳೆಲ್ಲಾ ಬ್ರೇಕ್‌ ಮಾಡಿವೆ. ಕೆಜಿಎಫ್‌ ಚಿತ್ರದ ವ್ಯೂವಿಂಗ್‌ ಬೇರೆ ಇದೆ. ಸುಮ್ಮನೆ ಚಿತ್ರದ ಬಗ್ಗೆ ಪ್ರೊಜೆಕ್ಟ್‌ ಮಾಡುವುದಕ್ಕೆ ಆಗುವುದಿಲ್ಲ. ಬೈರಾಗಿ ಸಿನಿಮಾ ಏನಿದೆಯೋ ಅದನ್ನ ಹೇಳಿದೀವಿ. ಜನ ನೋಡುವುದು ಜನರಿಗೆ ಬಿಟ್ಟಿದ್ದು. ಶಿವಣ್ಣ ಏನು ದೊಡ್ಡ ಹೀರೋ ಅಲ್ಲ. ಒಂದು ಪಾತ್ರವಷ್ಟೇ. ಎಷ್ಟು ಸಿನಿಮಾ ಓಡಬೇಕೋ ಓಡುತ್ತೆ. ಎಲ್ಲಾ ಚಿತ್ರಗಳೂ ಮೇಕಿಂಗ್‌ ಮೇಲೆ ಹೋಗುತ್ತದೆ ಎಂದು ಎಕ್ಸ್‌ ಪೆಕ್ಟ್‌ ಮಾಡಬೇಡಿ ಎಂದು ಹೇಳಿದ್ದಾರೆ. ( video credit : cini buzz)