Shivarajkumar : ಓಂ 2 ಸಿನಿಮಾದ ಬಗ್ಗೆ ಕೊನೆಗೂ ಮೌನ ಮುರಿದ ಶಿವಣ್ಣ ಹೇಳಿದ್ದೇನು ಇಲ್ಲಿದೆ ಹೊಸ ಅಪ್ಡೇಟ್

By Infoflick Correspondent

Updated:Monday, July 25, 2022, 10:02[IST]

Shivarajkumar : ಓಂ 2 ಸಿನಿಮಾದ ಬಗ್ಗೆ ಕೊನೆಗೂ ಮೌನ ಮುರಿದ ಶಿವಣ್ಣ ಹೇಳಿದ್ದೇನು ಇಲ್ಲಿದೆ ಹೊಸ ಅಪ್ಡೇಟ್

ಓಂ ಸಿನಿಮಾ ಎಂದರೆ ಜನರ ಹುಬ್ಬೇರುತ್ತದೆ ಮುಖದಲ್ಲಿ ಅಬ್ಬಾ ಎಂಬ ಭಾವ ಮೂಡತ್ತದೆ.
1995ರಲ್ಲಿ ಡಾ. ಶಿವಾರಾಜ್​ ಕುಮಾರ್​  ನಟನೆಯ 'ಓಂ' ಸಿನಿಮಾ ಭರ್ಜರಿ ಹಿಟ್​​ ಆಗಿ ಸ್ಯಾಂಡಲ್​ವುಡ್​ನಲ್ಲಿ  ಹೊಸ ದಾಖಲೆ ಬರೆದಿತ್ತು ಓಂ. ಕನ್ನಡದಲ್ಲಿ 'ಓಂ' ಸಿನಿಮಾದ ಮೂಲಕ ಗ್ಯಾಂಗ್​ ಸ್ಟಾರ್​ ಸಿನಿಮಾಗಳ ಎರಾ ಪ್ರಾರಂಭವಾಯಿತು. ಉಪೇಂದ್ರ ನಿರ್ದೇಶನದಲ್ಲಿ ಮೂಡಿಸಬಂದ 'ಓಂ' ಸಿನಿಮಾದಲ್ಲಿ ನಟ ಶಿವರಾಜ್​ ಕುಮಾರ್​ ಅವರನ್ನು ವಿಭಿನ್ನವಾಗಿ ತೋರಿಸಿಕೊಟ್ಟಿದ್ದರು.

ಓಂ ಸಿನಿಮಾ ಬಹಳಷ್ಟು ಬಾರಿ ರೀರಿಲೀಸ್ ಆಗಿದೆ. ಆಗೆಲ್ಲ ಜನ ಓಂ 2 ಯಾವಾಗ ಎಂಬ ಪ್ರಶ್ನೆ ಕೇಳುತ್ತಿದ್ದರು. ಬಹಳಷ್ಟು ಬಾರಿ ಓಂ 2 ಸಿನಿಮಾ ಮಾಡುವಂತೆ ಮನವಿ ಮಾಡಿದ್ದರು. ಈಗ ಈ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್​ ಒಂದು ಬಂದಿದೆ. ಅದರಲ್ಲೂ ಈ ಬಗ್ಗೆ ಶಿವರಾಜ್​ಕುಮಾರ್​ ಅವರೇ ಮಾತನಾಡಿದ್ದಾರೆ.

ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಎನ್ನುವ ರಿಯಾಲಿಟಿ ಶೋನಲ್ಲಿ ಓಂ 2 ಸಿನಿಮಾ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ಚಿನ್ನಿ ಮಾಸ್ಟರ್ ನಿರ್ದೇಶಿಸಲಿರುವ ಸಿನಿಮಾದಲ್ಲಿ ನಾನು ನಟಿಸಲಿದ್ದೇನೆ. ಸಿನಿಮಾದ ಹೆಸರು ಇನ್ನೂ ಅಂತಿಮಗೊಂಡಿಲ್ಲ, ಆದರೆ ಸಿನಿಮಾಕ್ಕೆ 'ಓಂ ರಿಟರ್ನ್' ಎಂದು ಹೆಸರಿಡುವ ಆಲೋಚನೆ ಇದೆ ಎಂದು ಶಿವರಾಜ್ ಕುಮಾರ್ ಹೇಳಿದರು.

ಓಂ' ಸಿನಿಮಾಕ್ಕೆ ತನ್ನದೇ ಆದ ಅಭಿಮಾನಿ ವರ್ಗವಿದೆ, ತನ್ನದೇ ಆದ ಪ್ರತ್ಯೇಕ ಬ್ರಾಂಡ್ ಇದೆ. ಆದರೆ ಆ ಸಿನಿಮಾವನ್ನು ಚಿನ್ನಿ ಪ್ರಕಾಶ್ ನಿರ್ದೇಶಿಸುವುದು ಸರಿಯಾ? ಚಿನ್ನಿ ಪ್ರಕಾಶ್ 'ಓಂ' ಹೆಸರಿನ ನ್ಯಾಯ ನೀಡಬಲ್ಲ ಸಿನಿಮಾ ಮಾಡಬಲ್ಲರಾ? ಎಂಬ ಬಗ್ಗೆಯೂ ಅನುಮಾನಗಳಿವೆ ಎಂದಿದ್ದಾರೆ ಪ್ರೇಕ್ಷಕ ಪ್ರಭುಗಳು.