Shivarajkumar : ರಾಷ್ಟ್ರ ಭಾಷೆ ವಿವಾದ ಮತ್ತು ಪುನೀತ್ ಸ್ಟಿಕರ್ ಹರಿದ ಸಂಗತಿ ಕುರಿತು ಶಿವಣ್ಣ ಗರಂ !!

By Infoflick Correspondent

Updated:Saturday, April 30, 2022, 23:28[IST]

Shivarajkumar : ರಾಷ್ಟ್ರ ಭಾಷೆ ವಿವಾದ ಮತ್ತು ಪುನೀತ್ ಸ್ಟಿಕರ್ ಹರಿದ ಸಂಗತಿ ಕುರಿತು ಶಿವಣ್ಣ ಗರಂ !!

ಸದ್ಯ ಕನ್ನಡ ಚಿತ್ರರಂಗದಲ್ಲಿ ಹಾಗು ಕರ್ನಾಟಕದಲ್ಲಿ ತುಂಬಾ ಸುದ್ದಿಯಾಗುತ್ತಿರುವ ವಿಷಯ ರಾಷ್ಟ್ರಭಾಷೆ ವಿವಾದ ಹಾಗು ತಿರುಪತಿಗಡಿಯಲ್ಲಿ ಪುನೀತ್ ಭಾವಚಿತ್ರದ ಸ್ಟಿಕರ್ ಹರಿದ ಸಂಗತಿ. ಈ ವಿಷಯದ ಬಗ್ಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ತಮ್ಮ ಭಾವಚಿತ್ರ ಹರಿದ ಬಗ್ಗೆ ಮತ್ತು ಕನ್ನಡ ಹಿಂದಿ ಚಿತ್ರರಂಗದಲ್ಲಿ ನಡೆಯುತ್ತಿರುವ ವಿವಾದದ ಬಗ್ಗೆ ರಾಷ್ಟ್ರ ಭಾಷೆಯ ಚರ್ಚೆಯ ಬಗ್ಗೆ ಶಿವಣ್ಣ ಹೇಳಿದ್ದೇನು ? ಇಲ್ಲಿದೆ ಓದಿ.  

ಟಾಕೀಸ್ ಎಂಬ ಆಪ್ ಅನ್ನು ಉದ್ಘಾಟಿಸಲು ಕಾರ್ಯಕ್ರಮಕ್ಕೆ ಬಂದ ಶಿವಣ್ಣ ಕಾರ್ಯಕ್ರಮವನ್ನು ಐಶಸ್ವಿಗೊಳಿಸಿ ಶುಭಕೋರಿ ಮಾಧ್ಯಮದ ಪ್ರಶ್ನೆಗಳಿಗೆ ಸದ್ಯದ ಬಿಸಿ ಬಿಸಿ ವಾದಕ್ಕೆ ಕೂಲ್ ಆಗಿ ಉತ್ತರ ನೀಡಿದ್ದಾರೆ. ಹಿಂದಿ ರಾಷ್ಟ್ರ ಭಾಷೆಯಲ್ಲ ಎಂಬ ಚರ್ಚೆಗೆ ನಿಮ್ಮ ಉತ್ತರ ಏನು ಎಂದು ಕೇಳಿದಾಗ  ಕನ್ನಡದ ಹಿರಿಯ ನಟ, ದೊಡ್ಮನೆಯ ಹಿರಿಮಗ ಶಿವರಾಜ ಕುಮಾರ್ ಭಾರತದ ಸಂವಿಧಾನದ ಪ್ರಕಾರ ಎಲ್ಲಭಾಷೆಯೂ ಸಮಾನ ಯಾವುದು ಮೇಲಲ್ಲ ಯಾವುದು ಕೀಳಲ್ಲ. ಎಲ್ಲಾ ಭಾಷೆಯೂ ಒಂದು. ಕನ್ನಡಕ್ಕೆ ಬಂದರೆ ನಾವು ಕನ್ನಡಿಗರಾಗಿ ನಮ್ಮ ಭಾಷೆ ನಮಗೆ ಹೆಚ್ಚು ಎಂದು ನೇರವಾಗಿ ಹೇಳಿದ್ದಾರೆ ಕನ್ನಡದ ರತ್ನ. 

ಫ್ಯಾನ್ ಇಂಡಿಯಾ ಬಗ್ಗೆ ಚರ್ಚೆ ನಡೆಯುತ್ತಿದೆ ಇದಕ್ಕೆ ನಿಮ್ಮ ಹೇಳಿಕೆ ಏನು ಎಂದು ಕೇಳಿದಾಗ ಫ್ಯಾನ್ ಇಂಡಿಯಾ ಎಂದು ಸುಮ್ಮನೆ ವಾದಮಾಡುವ ಬದಲು ನಾವೆಲ್ಲ ಭಾರತಿಯರು ಎಲ್ಲರೂ ಒಂದೇ ಹಾಗಾಗಿ ಫ್ಲಾನ್ ಇಂಡಿಯಾ ಬಗ್ಗೆ ವಿಚಾರ ಮಾಡೋಣ ವಿ ಶುಡ್ ಗೋ ಪ್ಲಾನ್ ಇಂಡಿಯಾ ಎಂದು ಒಗ್ಗಟ್ಟಿನ ಮಂತ್ರ ಸಾರಿದ್ದಾರೆ ದೊಡ್ಮನೆಯ ಮಗ. 

ಗಾಡಿಗೆ ಅಂಟಿಸಿರುವ ಪುನೀತ್ ರಾಜಕುಮಾರ್ ಭಾವಚಿತ್ರದ ಸ್ಟೀಕರ್ ಅನ್ನು ಕೀಳುವ ವಿಕೃತಿ ಮೇರೆದ ತಿರುಪತಿ ಗಡಿಯ ವಿಚಾರದ ಬಗ್ಗೆ ಶಿವಣ್ಣ ಎದುರು ಮಾತನಾಡಿದಾಗ ನನಗೆ ಈ ವಿಷಯದ ಕುರಿತು ಹೆಚ್ಚಾಗಿ ಮಾಹಿತಿ ಇಲ್ಲ. ನಾನು ಅಣ್ಣನಾಗಿ ಮಾತನಾಡುತ್ತಿಲ್ಲ ಮನುಷ್ಯನಾಗಿ ಹೇಳುವುದಾದರೇ ಇದು ತಪ್ಪು. ಯಾರ ಭಾವಚಿತ್ರವನ್ನು ಹರಿಯಬಾರದು. ನಾವು ಜೊಡಿಸುವ ಕೆಲಸ ಮಾಡಬೇಕೆ ಹೊರತು ಕೀಳುವುದಲ್ಲ. ಯಾವ ರಾಜ್ಯವೇ ಆಗಲಿ ಅಭಿಮಾನಿ , ಅಭಿಮಾನಿಯೇ ಅವರ ಭಾವನೆಗೆ ಗೌರವಕೊಡಬೇಕು. ಪ್ರತಿವ್ಯಕ್ತಿಗೂ ಗೌರವ ಇರುತ್ತದೆ ಆ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದಿದ್ದಾರೆ ಶಿವರಾಜಕುಮಾರ್.