Shivarajkumar : ಕೊನೆಗೂ ವೆಬ್ಸಿರೀಸ್ ನಲ್ಲಿ ನಟನೆಗೆ ಮುಂದಾದ ಶಿವಣ್ಣ..! ಯಾರ ಅಡಿಯಲ್ಲಿ ನೋಡಿ

By Infoflick Correspondent

Updated:Sunday, May 1, 2022, 14:39[IST]

Shivarajkumar : ಕೊನೆಗೂ ವೆಬ್ಸಿರೀಸ್ ನಲ್ಲಿ ನಟನೆಗೆ ಮುಂದಾದ ಶಿವಣ್ಣ..! ಯಾರ ಅಡಿಯಲ್ಲಿ ನೋಡಿ

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ಅವರು ಇತ್ತೀಚಿಗೆ ಒಂದು ಕಾರ್ಯಕ್ರಮಕ್ಕೆ ಹೋಗಿದ್ದರು. ಆಗ ನಟ ಶಿವಣ್ಣ ನಾನು ಹೆಚ್ಚು ಮಾತನಾಡುವುದಿಲ್ಲ ಈಗೀಗ ಎಂದು ಮಾತು ಆರಂಭಿಸಿದ ಶಿವಣ್ಣ ಅವರು, ಈ ಟಾಕೀಸ್ ಎನ್ನುವ ಹೊಸ ಅಪ್ಲಿಕೇಶನ್ ಬಗ್ಗೆ ಮಾತನಾಡಿದರು. ಹೌದು ಸಾಕಷ್ಟು ಕಲಾವಿದರಿಗೆ ಇದು ಒಳ್ಳೆಯ ವೇದಿಕೆ ಆಗಿರುತ್ತದೆ. ಈ ವೆಬ್ ಸಿರೀಸ್ ಮಾಡುವವರಿಗೆ ಅವಕಾಶ ಸಿಕ್ಕಂತಾಗುತ್ತದೆ ಎಂದು ಹೇಳಿದ್ದಾರೆ. ಬೇರೆ ಸಿನಿಮಾರಂಗದಲ್ಲಿ ವೆಬ್ ಸೀರಿಸ್ ಗಳು ತುಂಬಾ ಚೆನ್ನಾಗಿ ಓಡುತ್ತವೆ. ಕ್ರೈಂ ಮತ್ತು ರೋಮ್ಯಾಂಟಿಕ್ ಹೀಗೆ ವಿಧವಿಧ ವಿಭಿನ್ನ ಪ್ರಯತ್ನಗಳನ್ನು ಮಾಡಿ ಬಾಲಿವುಡ್ ತಮಿಳು-ತೆಲುಗು ಎಲ್ಲರೂ ಗೆಲ್ಲುತ್ತಾರೆ. ಆದರೆ ನಮ್ಮ ಕನ್ನಡ ಸಿನಿರಂಗದ ವೆಬ್ ಸೀರಿಸ್ ಎಂದ ತಕ್ಷಣ ಯಾರು ಕೂಡ ಮುಂದೆ ಬರುತ್ತಿರಲಿಲ್ಲ. 

ಟಾಕೀಸ್ ಎನ್ನುವ ಹೊಸ ವೇದಿಕೆಯ ಮಾಡಿಕೊಟ್ಟಿರುವ ಕಾಮತ್ ಅವರು ತುಂಬಾನೇ ಒಳ್ಳೆ ಕೆಲಸ ಮಾಡಿದ್ದಾರೆ. ಹಾಗೆ ಅಪ್ಪಾಜಿ ಹೇಳುವ ಹಾಗೆ ನಿರ್ಮಾಪಕರು ನಿಜವಾದ ಸಿನೆಮಾರಂಗದ ಅನ್ನದಾತರು ಎಂದು, ಅದು ನಿಜ. ಹಾಗೆ ನಾನು ಕೂಡ ಒಂದು ವೆಬ್ ಸೀರಿಸ್ ನಲ್ಲಿ ನಟನೆ ಮಾಡುತ್ತಿದ್ದೇನೆ. ನನ್ನ ಮಗಳ ಪ್ರೊಡಕ್ಷನ್ ಅಡಿಯಲ್ಲೇ ಇದು ಬರುತ್ತದೆ. ಇದು ಕೊರೊನಾ ಬರುವುದಕ್ಕಿಂತ ಮುಂಚೆಯೇ ಪ್ಲಾನ್ ಆಗಿತ್ತು. ಎಂಟರಿಂದ ಒಂಬತ್ತು ಕತೆಗಳು ಇದ್ದವು. ಆದ್ರೆ ಎಲ್ಲವೂ ಅಲ್ಲಿಗೆ ನಿಂತು ಹೋಗಿತ್ತು. ಇದೀಗ ಮತ್ತೆ ಅವೆಲ್ಲಾ ಆರಂಭ ಆಗುತ್ತವೆ. ನನಗೆ ಇನ್ನೂ ವಯಸ್ಸು ಆಗಿಲ್ಲ ಎಂದ ಶಿವಣ್ಣ, ಎಲ್ಲರಲ್ಲೂ ಟ್ಯಾಲೆಂಟ್ ಇದ್ದರೆ ಸಾಕು ವಯಸ್ಸು ಅವಶ್ಯಕತೆ ಇಲ್ಲ ಎಂದು ಈಗಿನ ಜನತೆಗೆ ತಿಳಿ ಹೇಳಿದರು. 

ಹೌದು ಶಿವಣ್ಣ ಕೂಡ ಈಗ ವೆಬ್ ಸಿರೀಸ್ ನಲ್ಲಿ ನಟಿಸುವ ವಿಚಾರವನ್ನು ತಿಳಿಸಿದ್ದಾರೆ. ಕಾಮತ್ ಅವರ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಶಿವಣ್ಣ ಅವರನ್ನ ವೆಬ್ ಸಿರೀಸ್ ನಲ್ಲಿ ನೋಡಲು ಎಷ್ಟು ಕಾತುರರಾಗಿದ್ದೀರಿ ಎಂದು ಕಾಮೆಂಟ್ ಮಾಡಿ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..