ತಮಿಳಿನ ಸೂಪರ್ ಸ್ಟಾರ್ ಜೊತೆ ಕನ್ನಡದ ಸೆಂಚುರಿ ಸ್ಟಾರ್! ಹೇಗಿರಲಿದೆ ಈ ಸಿನಿಮಾ‌?

By Infoflick Correspondent

Updated:Thursday, May 5, 2022, 10:11[IST]

ತಮಿಳಿನ ಸೂಪರ್ ಸ್ಟಾರ್ ಜೊತೆ ಕನ್ನಡದ ಸೆಂಚುರಿ ಸ್ಟಾರ್! ಹೇಗಿರಲಿದೆ ಈ ಸಿನಿಮಾ‌?

ಚಂದನವನದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರುವ ನಟ ಎಂದರೆ ಅದು ಶಿವರಾಜ್​ಕುಮಾರ್ ಈವರೆಗೂ  125ಕ್ಕೂ ಅಧಿಕ ಸಿನಿಮಾಗಳನ್ನು ಮಾಡಿದ್ದಾರೆ. ಅವರ ಜೊತೆ ಕೆಲಸ ಮಾಡಲು ಎಲ್ಲಾ ಭಾಷೆಯ ನಟ ನಟಿಯರು ನಿರ್ದೇಶಕರು ಆಸಕ್ತಿ ಹೊಂದಿದ್ದಾರೆ. 

ಹ್ಯಾಟ್ರಿಕ್​ ಹೀರೋ' ಅಭಿನಯಿಸಲಿರುವ ಮುಂದಿನ ಸಿನಿಮಾ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಸೂಪರ್​ ಸ್ಟಾರ್​' ರಜನಿಕಾಂತ್ ಜೊತೆ ಸಿನಿಮಾ ಮಾಡಲಿದ್ದಾರಂತೆ ಶಿವಣ್ಣ!  ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಮತ್ತು ಸೆಂಚುರಿಸ್ಟಾರ್ ಒಟ್ಟಿಗೆ ತೆರೆ ಹಂಚಿಕೊಕ್ಳುತ್ತಿರುವ ಸಿಜಿಮಾ ಹೈಒಲ್ಟೆಜ್ ಸಿನಿಮಾ ಆಗಲಿದೆ. ಇದು ಸಿನಿ ಪ್ರಿಯರಿಗೆ ಧಮಾಕಾ ಸುದ್ದಿ.   

ಈ ಸಿನಿಮಾಗೆ 'ಬೀಸ್ಟ್​' ಖ್ಯಾತಿಯ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​  ಅವರು ಆಯಕ್ಷನ್​-ಕಟ್​ ಹೇಳಲಿದ್ದಾರೆ. ಪ್ರತಿಷ್ಠಿತ ಸನ್​ ಪಿಕ್ಚರ್ಸ್​ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಲಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ತಲೈವರ್ 169' ಎಂದು ಹೆಸರಿಸಲಾಗಿದೆ. ಚಿತ್ರತಂಡದಿಂದ ಅಧಿಕೃತ ಘೋಷಣೆಗಾಗಿ ಅಭಿಮಾನಿ ಬಳಗ ಕಾತುತ್ತಿದೆ. 

ರಜನಿಕಾಂತ್​ ಅವರು ನಾಯಕನಾಗಿ ಅಭಿನಯಿಸಲಿದ್ದು, ಶಿವರಾಜ್​ಕುಮಾರ್​ ಕೂಡ ಒಂದು ಮುಖ್ಯಪಾತ್ರವನ್ನು ಮಾಡಲಿದ್ದಾರಂತೆ. ಇದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಮೂಡಿಬರಲಿದೆ. ಆಗಸ್ಟ್​ ವೇಳೆಗೆ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಇನ್ನುಳಿದ ಕಲಾವಿದರ ಆಯ್ಕೆ ಪ್ರಕ್ರಿಯೆ ಕೂಡ ನಡೆಯುತ್ತಿದೆ ಎಂದು ವರದಿ ಆಗಿದೆ. 

ರಜನಿಕಾಂತ್ ಮತ್ತು ಶಿವಣ್ಣ ಕಾಂಬಿನೇಷನ್ ಹೇಗೆ ಇರಲಿದೆ ಎನ್ನುವ ಬಗ್ಗೆ ಕುತೂಹಲ ಇಗ ಎಲ್ಲದರಲ್ಲೂ ಮೂಡಿದೆ. ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಒಂದೇ ಚಿತ್ರದಲ್ಲಿ, ಅದರಲ್ಲೂ ಶಿವಣ್ಣ ಮತ್ತು ರಜನಿಕಾಂತ್ ಜೊತೆಯಾಗಿ ಬಿಗ್ ಸ್ಕ್ರೀನ್ ಮೇಲೆ ಬರಲಿರುವ ಸಂಗತಿ ಜನರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ.