ಸಿಂಪಲ್ಲಾಗಿರೋದನ್ನ ನೋಡಿ ಡಮ್ಮಿ ಪೀಸ್ ಅನ್ಕೊಂಡಾ..! ಹುಲಿ ವೇಷದ ಶಿವಣ್ಣನ ಖಡಕ್ ಟೀಸರ್ ನೋಡಿ
Updated:Wednesday, March 16, 2022, 15:59[IST]

ಶಿವರಾಜ್ ಕುಮಾರ್ (Shiva Raj Kumar) ಅವರ 123 ನೇ ಸಿನಿಮಾ ಬೈರಾಗಿ ಚಿತ್ರದ ಟೀಸರ್ ಇದೀಗ ಬಿಡುಗಡೆಯಾಗಿದೆ. ನಾಳೆ ಇಡೀ ವಿಶ್ವದಾದ್ಯಂತ ಅವರ ಪ್ರೀತಿಯ ತಮ್ಮ ನಟ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಬಿಡುಗಡೆಯಾಗುತ್ತಿದೆ. ಹೌದು ನಾಳೆ ಥಿಯೇಟರ್ ನಲ್ಲಿ ಶಿವಣ್ಣನ ಅಭಿನಯದ ಬೈರಾಗಿ (Bairagi teser) ಚಿತ್ರದ ಟೀಸರ್ ಪ್ರಸಾರವಾಗಲಿದೆ ಎಂದು ಈಗ ತಿಳಿದುಬಂದಿದೆ. ಹೌದು ಬೈರಾಗಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ನಿರ್ದೇಶಕ ವಿಜಯ್ ಮಿಲ್ಟನ್. ಜೊತೆಗೆ ಬಂಡವಾಳ ಹೂಡಿರುವುದು ಕೃಷ್ಣ ಸಾರ್ಥಕ್ ಅವರು ಎಂದು ತಿಳಿದುಬಂದಿದೆ. ಜೆಪಿ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ನಲ್ಲಿ ಇದೀಗ ಶಿವರಾಜ್ ಕುಮಾರ್ ನಟನೆಯ ಬೈರಾಗಿ ಚಿತ್ರದ ಟೀಸರ್ ಎಂಟ್ರಿ ಕೊಟ್ಟಿದ್ದು ಸಿನಿಮಾದಲ್ಲಿ ಮಾಸ್ ಡೈಲಾಗ್ ಗಳು ರಾರಾಜಿಸುತ್ತಿವೆ.
ಶಿವರಾಜ್ ಕುಮಾರ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೊಂದು ಸಕ್ಕತ್ ಮಾಸ್ ಫಿಲಂ ಆಗಿದ್ದು ಶಿವರಾಜ್ ಕುಮಾರ್ ಅವರು ತುಂಬಾ ಬೋಲ್ಡ್ ಆಗಿ ನಟನೆ ಮಾಡಿದ್ದಾರೆ. ಹಾಗೆ ಹುಲಿವೇಷದಲ್ಲಿ ಕಾಣುವ ಶಿವರಾಜ್ ಕುಮಾರ್, ವೇಷ ಹಾಕಿಕೊಂಡರೆ ಮಾತ್ರ ನಾವು ಹುಲಿಯಲ್ಲ ಯಾವಾಗಲೂ ಹುಲಿಯೇ, ನಮ್ಮ ಜೊತೆ ಹುಲಿಯು ಕೂಡ ದೊಡ್ಡದಾಗಿದೆ ಎನ್ನುವ ಕಡಕ್ ಡೈಲಾಗ್ ಶಿವಣ್ಣ ಪ್ರೀತಿಯ ಅಭಿಮಾನಿಗಳು ಶಿಳ್ಳೆ ಹಾಕುವಂತೆ ಮಾಡಿದೆ. ಶಿವರಾಜ್ ಕುಮಾರ್ ಅವರ ಜೊತೆ ಡಾಲಿ ಸಹ ಕಾಣಿಸಿಕೊಳ್ಳಲಿದ್ದು ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಕೂಡ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ನೀವು ನೋಡಿದ್ದರೆ ಭೈರಾಗಿ ಸಿನಿಮಾದ ಟೀಸರ್ ಹೇಗಿದೆ..? ಹಾಗೆ ಶಿವಣ್ಣನ ಅಭಿನಯ ಹೇಗಿದೆ ಎಂದು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದ.. (Video credit : jp music)