ವೇದಿಕೆ ಮೇಲೆ ರಾಗಣ್ಣನ ತಬ್ಬಿ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ..! ಎಂಥಾ ಅಣ್ಣ ತಮ್ಮಂದಿರು ಎಂದ ಫ್ಯಾನ್ಸ್

By Infoflick Correspondent

Updated:Monday, March 14, 2022, 14:25[IST]

ವೇದಿಕೆ ಮೇಲೆ ರಾಗಣ್ಣನ ತಬ್ಬಿ ಒಂದೇ ಸಮನೆ ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ..! ಎಂಥಾ ಅಣ್ಣ ತಮ್ಮಂದಿರು ಎಂದ ಫ್ಯಾನ್ಸ್

ನಿನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ರಾಜಕುಮಾರ್  (Puneeth Raj Kumar) ಅವರ ಕೊನೆಯ ಚಿತ್ರ ಜೇಮ್ಸ್ ಪ್ರೀ ರಿಲೀಸ್ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗದ ಗಣ್ಯಾತಿ ಗಣ್ಯರು ಬಂದಿದ್ದರು. ಇಡೀ ರಾಜ್ ಕುಟುಂಬ, ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ, ಹಾಗೂ ಮಕ್ಕಳು, ಅಣ್ಣಾ ಶಿವರಾಜಕುಮಾರ್ (Shiv Raj Kumar), ಇನ್ನೊಬ್ಬ ರಾಘಣ್ಣ ಎಲ್ಲರೂ ಕೂಡ ಆಗಮಿಸಿದ್ದರು. ಹೌದು ಪುನೀತ್ ರಾಜಕುಮಾರ್ ಅವರು ಇಲ್ಲದೇ ನಿನ್ನೆ ಪ್ರೀ ರಿಲೀಸ್ ಇವೆಂಟ್ ನೋವಿನಲ್ಲೇ ಮುಗಿದು ಹೋಯಿತು ಎಂದು ಹೇಳಬಹುದು. ಇದೇ ಮಾರ್ಚ್ 17ನೇ ತಾರೀಕು ಅಪ್ಪು ಹುಟ್ಟು ಹಬ್ಬದ ದಿವಸ ಜೇಮ್ಸ್ ಚಿತ್ರವನ್ನ ಅವರ ಅಭಿಮಾನಿಗಳು ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಮಾಡಲು ಎಲ್ಲಾ ಸಿದ್ಧತೆ ನಡೆಸಿದ್ದಾರೆ.

ಚಿತ್ರಕ್ಕೆ ನಿರ್ದೇಶಕ ಚೇತನ್ ಅವರು ಆಕ್ಷನ್ ಕಟ್ ಹೇಳಿದ್ದು ಪುನೀತ್ ರಾಜಕುಮಾರ್ ಅವರು ಮೊಟ್ಟಮೊದಲ ಬಾರಿಗೆ ಸೈನಿಕರ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಲಿದ್ದಾರೆ. ಪುನೀತ್ ಅವರ ಅಗಲಿಕೆ ಎಂದಿಗೂ ಕೂಡ ಅರಗಿಸಿಕೊಳ್ಳಲಾಗದ ಒಂದು ದೊಡ್ಡ ನೋವು ಅಂತಾನೆ ಹೇಳಬಹುದು. ಅಪ್ಪು ಅವರಿಲ್ಲದೆ ಈ ರೀತಿ ಕಾರ್ಯಕ್ರಮ ನಡೆಯುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ. ವೇದಿಕೆ ಮೇಲೆ ಶಿವಣ್ಣ ಅವರನ್ನು ಬರಮಾಡಿಕೊಂಡು ಚಿತ್ರತಂಡದ ಬಗ್ಗೆ ಹಾಗೂ ಪುನೀತ್ ಅಭಿನಯದ ಅವರ ಕೊನೆಯ ಚಿತ್ರ ಜೇಮ್ಸ್ ಬಗ್ಗೆ ಮಾತನಾಡಲು ನಟಿ ಹಾಗು ನಿರೂಪಕಿ ಅನುಶ್ರೀ ಹೇಳಿದರು. ಆಗ ಶಿವಣ್ಣ ದುಃಖ ತಡೆಯಲಾರದೆ ಒಂದೇ ಸಮನೆ ವೇದಿಕೆ ಮುಂಭಾಗದಲ್ಲಿ ಅಳುತ್ತಿದ್ದರು.    ..

ವೇದಿಕೆ ಮೇಲೆ ಹೋಗುತ್ತಿದ್ದಂತೆ ಪುನೀತ್ ಅವರನ್ನು ನೆನೆದು ರಾಘಣ್ಣ ಆಡಿದ ಮಾತುಗಳನ್ನು ನೆನೆದು ಶಿವಣ್ಣ, ರಾಘಣ್ಣ ಅವರನ್ನು ತಬ್ಬಿ ಬಿಕ್ಕಿಬಿಕ್ಕಿ ಕಣ್ಣೀರು ಹಾಕಿಬಿಟ್ಟರು. ಇದನ್ನು ನೋಡಿದ ಅಭಿಮಾನಿ ಬಳಗದವರು ಸಹ ಕಣ್ಣೀರು ಹಾಕಿದ್ದು ಸತ್ಯ. ಜೊತೆಗೆ ನೆಟ್ಟಿಗರು ಕೂಡ ಎಂತಹ ಅಣ್ಣತಮ್ಮಂದಿರು ಇವರು ಎಂದು ಈ ದೃಶ್ಯ ನೋಡಿ ನೋವ ವ್ಯಕ್ತಪಡಿಸಿದರು. ಅದೇ ವಿಡಿಯೋ ಇಲ್ಲಿದೆ. ನೀವೂ ಇನ್ನೊಮ್ಮೆ ನೋಡಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು...

(video credit : tv 9 kannada )