ಡಿಕೆಡಿಯಲ್ಲಿ ಅಪ್ಪನ ನೆನೆದು ಕಣ್ಣೀರಿಟ್ಟ ಶಿವಣ್ಣ..! ಈ ಹಾಡೇ ಕಣ್ಣೀರಿಗೆ ಕಾರಣವಾಯ್ತು ನೋಡಿ

By Infoflick Correspondent

Updated:Sunday, June 26, 2022, 19:34[IST]

ಡಿಕೆಡಿಯಲ್ಲಿ ಅಪ್ಪನ ನೆನೆದು ಕಣ್ಣೀರಿಟ್ಟ ಶಿವಣ್ಣ..! ಈ ಹಾಡೇ ಕಣ್ಣೀರಿಗೆ ಕಾರಣವಾಯ್ತು ನೋಡಿ

ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ಇದೀಗ ಬೆಳ್ಳಿತೆರೆಯ ಕಡೆ ಗಮನ ಕೊಡುತ್ತಿರುವುದರ ಜೊತೆಗೆ ಕನ್ನಡ ಕಿರುತೆರೆಯ ಕಡೆ ಕೂಡ ಹೆಚ್ಚು ಗಮನ ನೀಡುತ್ತಿದ್ದಾರೆಂದು ಹೇಳಬಹುದು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಈ ಡಾನ್ಸ್ ಕರ್ನಾಟಕ ಡಾನ್ಸ್ ಸೀಸನ್ 6 ರಲ್ಲಿ ಶಿವಣ್ಣ ವಿಶೇಷ ಜಡ್ಜ್ ಆಗಿ ಆಗಮಿಸಿದ್ದಾರೆ. ಪ್ರತಿ ಎಪಿಸೋಡುಗಳಲ್ಲಿ ಶಿವಣ್ಣ ಅವರ ಸಾಕಷ್ಟು ವಿಚಾರಗಳು ಎಲ್ಲರಿಗೂ ಖುಷಿ ನೀಡುತ್ತವೆ ಎನ್ನಬಹುದು. ಹಾಗೆ ಅವರ ಭಾವನಾತ್ಮಕ ನಂಟು ಸಹ ಎಲ್ಲರನ್ನೂ ಒಂದು ಕ್ಷಣ ಕಣ್ಣೀರು ಹಾಕುವಂತೆ ಮಾಡುತ್ತದೆ. ಹೌದು ಶಿವರಾಜಕುಮಾರ್ ಅವರು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ ಮೇಲೆ ಆಗಾಗ ಡಾನ್ಸ್ ಮಾಡುತ್ತಿರುವುದು ಹಾಗೆ ಅಪ್ಪು ಅವರ ಬಗ್ಗೆ ಸಾಕಷ್ಟು ವಿಚಾರ ಹಂಚಿಕೊಂಡು ಕಣ್ಣೀರು ಹಾಕುವುದು ನಿಜಕ್ಕೂ ಎಂತಹ ಕಲ್ಲು ಮನಸ್ಸಿನ ವ್ಯಕ್ತಿಗಳಿಗೂ ಕೂಡ ಹೃದಯ ಮೃದುವಾಗುವಂತಿರುತ್ತದೆ.  

ಜೊತೆಗೆ ಕಣ್ಣೀರು ಬರುತ್ತದೆ..ಹೌದು ನಟ ಶಿವಣ್ಣ ಅವರು ಹೆಚ್ಚು ಭಾವನಾತ್ಮಕ ನಂಟು ಹೊಂದಿರುವುದು ಕೇವಲ ಡಿಕೆಡಿ ಜೊತೆ ಮಾತ್ರ ಅಲ್ಲ. ಅಭಿಮಾನಿಗಳೋಟ್ಟಿಗೂ ಕೂಡ ಶಿವಣ್ಣ ಹೆಚ್ಚು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಸ್ನೇಹದಿಂದ ಪ್ರೀತಿಯಲ್ಲಿಯೇ ಮಾತನಾಡುತ್ತಾರೆ. ಶಿವಣ್ಣವರ ಡಿಕೆಡಿ ಸೀಸನ್ 6 ರ ಈ ವಾರದ ಎಪಿಸೋಡ್ ನಲ್ಲಿ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕಿರುವ ದೃಶ್ಯ ಈಗ ವೈರಲ್ ಆಗಿದೆ. ಶಿವಣ್ಣ ಅವರ ಅಭಿನಯದ ಜಗವೇ ಒಂದು ರಣರಂಗ ಎನ್ನುವ ಹಾಡಿಗೆ ಕಂಟೆಸ್ಟೆಂಟ್ ಗಳು ಡಾನ್ಸ್ ಮಾಡಿದರು. ಬಳಿಕ ಶಿವಣ್ಣ ಅವರು ಈ ಹಾಡು ಬರುತ್ತಿದ್ದಂತೆ ನಮ್ಮ ತಂದೆಯವರು ನನಗೆ ನೆನಪಾಗುತ್ತಾರೆ, ಹಂಸಲೇಖ ಅವರು ಅದ್ಯಾವ ಮೂಡ್ನಲ್ಲಿ ಈ ಹಾಡು ಬರೆದರೂ ಗೊತ್ತಿಲ್ಲ ನಿಜಕ್ಕೂ ಮತ್ತೆ ಅದೇ ಸಿನಿಮಾದ ಶೂಟಿಂಗಿಗೆ ಹೋದ ಅನುಭವವೇ ನನಗಾಯಿತು ಎಂದರು ಶಿವಣ್ಣ.

ಈ ವಾರದ ಎಪಿಸೋಡಿನ ತುಣುಕನ್ನು ಶೇರ್ ಮಾಡಿಕೊಂಡ ಜೀ ಕನ್ನಡಚಾನೆಲ್. ಅಸಲಿಗೆ ಡಾ ರಾಜಣ್ಣನ ಬಗ್ಗೆ ಇನ್ನೂ ಏನೆನೆಲ್ಲ ಹೇಳಿದರು ಗೊತ್ತಾ ಎಂದು ತಿಳಿಯಬೇಕಾದರೆ ಈ  ವಿಡಿಯೋ ನೋಡಿ. ವಿಡಿಯೋ ನೋಡಿದ ಮೇಲೆ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡಿ ಧನ್ಯವಾದಗಳು...

 
 
 
 
 
 
 
 
 
 
 
 
 
 
 

A post shared by Zee Kannada (@zeekannada)