Shivraj Kumar : ಸಂಜಿ ಮುಂದ ಸಂತಿಗೊಂಟ್ಯಾ ಶಿವಪ್ಪ ಎನ್ನುತ್ತಲೇ ಶಿವಣ್ಣನ ಜೊತೆ ಹೆಜ್ಜೆ ಹಾಕಿದ ಸುಂದರ ಹುಡುಗಿ..!

By Infoflick Correspondent

Updated:Sunday, July 17, 2022, 15:55[IST]

Shivraj Kumar :  ಸಂಜಿ ಮುಂದ ಸಂತಿಗೊಂಟ್ಯಾ ಶಿವಪ್ಪ ಎನ್ನುತ್ತಲೇ ಶಿವಣ್ಣನ ಜೊತೆ ಹೆಜ್ಜೆ ಹಾಕಿದ ಸುಂದರ ಹುಡುಗಿ..!

ಡಾಕ್ಟರ್ ರಾಜಕುಮಾರ್ ಅವರ ಹಿರಿಯ ಪುತ್ರ ಶಿವರಾಜ್ ಕುಮಾರ್ ಅವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾದ ಜೊತೆ ಕನ್ನಡ ಕಿರುತೆರೆಯಲ್ಲೂ ಕೂಡ ಸಕ್ರಿಯ ಆಗಿದ್ದಾರೆ. ಶಿವಣ್ಣ ಅಂದ್ರೆ ಅಭಿಮಾನಿಗಳಿಗೆ ಪಂಚಪ್ರಾಣ. ಇತ್ತೀಚಿಗಷ್ಟೇ ಅವರ ಅರವತ್ತನೆ ಹುಟ್ಟುಹಬ್ಬ ಸಂಭ್ರಮವನ್ನ ಸರಳವಾಗಿ ಆಚರಣೆ ಮಾಡಿದರು. ವಯಸ್ಸು 60 ಆದ್ರೂ ಶಿವಣ್ಣ ಈಗ ತಾನೇ 30 ದಾಟಿದವರಂತೆ ಕಾಣುತ್ತಾರೆ. ಅಷ್ಟು ಯಂಗ್ ಆಗಿ ಕಾಣುತ್ತಾರೆ ಶಿವಣ್ಣ. ಅಪ್ಪು ಅವರ ಅಗಲಿಕೆ ನಡುವೆ ಈಗಲೂ ಕೂಡ ಶಿವಣ್ಣ ಅವರು ಹೊರಬಂದಿಲ್ಲ. ಅಪ್ಪುವನ್ನ ನಾವು ಎಂದಿಗೂ ಮರೆಯಬಾರದು ಜೊತೆಯಲ್ಲಿಯೇ ಆ ನೋವನ್ನು ತೆಗೆದುಕೊಂಡು ಹೋಗೋಣ ಎಂದು ಒಳಗಡೆ ನೋವಿದ್ದರೂ ಹೊರಗಡೆ ನಗುತ್ತಲೆ ಎಲ್ಲರೊಟ್ಟಿಗೆ ಸಮಯ ಕಳೆಯುತ್ತಾ ಶಿವಣ್ಣ ಅವರು ಜೀವನ ಮಾಡುತ್ತಿದ್ದಾರೆ.

ಹಾಗೆ ಅವರ ಅಭಿಮಾನಿಗಳು ಯಾರೆ ಮನೆಗೆ ಬಂದರು ಅವರೊಟ್ಟಿಗೆ ನಗುತಲೆ ಮಾತನಾಡಿಸುತ್ತಾ, ಅವರಿಷ್ಟದಂತೆ ಕೆಲವು ಹಾಡುಗಳಿಗೆ ಡಾನ್ಸ್ ಸ್ಟೆಪ್ ಹಾಕಿ ಅವರ ಮನ ರಂಜಿಸುತ್ತಾರೆ ಶಿವರಾಜ್ ಕುಮಾರ್. ಶಿವಣ್ಣ ನಟನೆಯ ಬೈರಾಗಿ ಚಿತ್ರ ಇತ್ತೀಚಿಗೆ ಬಿಡುಗಡೆಯಾಗಿತ್ತು. ಅವರ ಫ್ಯಾನ್ಸ್ ಸಿನಿಮವನ್ನು ಕಣ್ತುಂಬಿಕೊಂಡು ಶಿವಣ್ಣನ ಅಭಿನಯವನ್ನು ಮೆಚ್ಚಿಕೊಂಡಿದ್ದರು. ಹೌದು, ಇದರ ಹಾಡು ಸಂಜೆ ಮುಂದ ಸಂತಿಗೆ ಒಂಟಿ ಶಿವಪ್ಪ ಎನ್ನುವ ಒಂದು ಹಾಡು ಅದೆಷ್ಟರ ಮಟ್ಟಿಗೆ ವೈರಲಾಗಿದೆ ಎಂದರೆ, ಎಲ್ಲಿ ನೋಡಿದರೂ ಇದರ ವಿಡಿಯೋಗಳೇ ಕಾಣ ಸಿಗುತ್ತವೆ. ಹೌದು ನಟ ಶಿವಣ್ಣ ಸಹ ಅಭಿಮಾನಿಗಳ ಜೊತೆ ಮನೆಗೆ ಬಂದವರಲ್ಲಿ ಅಥವಾ ಬೇರೆ ಸ್ಥಳಗಳಲ್ಲಿ ಸಿಕ್ಕ ಸಿಕ್ಕ ವೇಳೆಯೇ ಅವರ ಇಷ್ಟಪಟ್ಟರು ಎಂಬ ಒಂದೇ ಕಾರಣಕ್ಕೇ ಅವರೊಡನೆ ಇದೇ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಅವರನ್ನು ಖುಷಿ ಪಡಿಸುತ್ತಾರೆ.

ಅಂತಹದ್ದೇ ಒಂದು ಡಾನ್ಸ್ ವಿಡಿಯೋದಲ್ಲಿ ಶಿವಣ್ಣ ಇದೀಗ ಕಂಡು ಬಂದಿದ್ದು, ನಟ ಶಿವಣ್ಣರೊಟ್ಟಿಗೆ ಒಂದು ಮುದ್ದಾದ ಹುಡುಗಿ ಇಷ್ಟಪಟ್ಟು ಸ್ಟೆಪ್ ಹಾಕಿದ್ದಾಳೆ. ಇಲ್ಲಿದೆ ನೋಡಿ ಆ ವಿಡಿಯೋ. ಇದೀಗ ಇದು ಸಹ ವೈರಲ್ ಆಗುತ್ತಿದೆ. ನಿಮಗೂ ಕೂಡ ಇಷ್ಟ ಆಗುತ್ತದೆ ಈ ಡ್ಯಾನ್ಸ್ ಸ್ಟೆಪ್ ವಿಡೀಯೋ ಅಂದು ಕೊಂಡಿದ್ದೇನೆ ಇಷ್ಟವಾದರೆ ಶೇರ್ ಮಾಡಿ ಧನ್ಯವಾದಗಳು..