Shivraj Kumar : ಶಿವಣ್ಣನ ಜೊತೆ ಡಾಲಿ ಪೃಥ್ವಿ ಭರ್ಜರಿ ಡ್ಯಾನ್ಸ್...! ಶಿವಣ್ಣನ ಏನರ್ಜಿಗೆ ಅವರೇ ಸಾಟಿ..!

By Infoflick Correspondent

Updated:Thursday, July 7, 2022, 16:44[IST]

Shivraj Kumar :  ಶಿವಣ್ಣನ ಜೊತೆ ಡಾಲಿ ಪೃಥ್ವಿ  ಭರ್ಜರಿ ಡ್ಯಾನ್ಸ್...! ಶಿವಣ್ಣನ ಏನರ್ಜಿಗೆ ಅವರೇ ಸಾಟಿ..!

ಭೈರಾಗಿ ಸಿನಿಮಾ ಇದೀಗ ಕರ್ನಾಟಕದಾದ್ಯಂತ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ನಟ ಶಿವಣ್ಣ ಹಾಗೂ ಡಾಲಿ ಧನಂಜಯ್ ಅವರು ಮತ್ತೊಮ್ಮೆ ಮೋಡಿ ಮಾಡಿದ್ದಾರೆಂದು ಹೇಳಬಹುದು. ಡಾಲಿ ಪಾತ್ರ ಟಗರು ಸಿನಿಮಾದಲ್ಲಿ ನಟ ಧನಂಜಯ ಅವರಿಗೆ ಒಳ್ಳೆಯ ಪ್ರೇಮ್ ತಂದು ಕೊಟ್ಟಿತು. ಹಾಗೆ ಸಾಕಷ್ಟು ವೇದಿಕೆಯಲ್ಲಿ ಶಿವಣ್ಣ ಅವರ ಬಗ್ಗೆ ಡಾಲಿ ಅದನ್ನೇ ಹೆಚ್ಚು ಬಾರಿ ಹೇಳಿದ್ದಾರೆ. ಶಿವಣ್ಣನ ಜೊತೆ ನಟನೆ ಮಾಡೋದು ಒಂದು ಭಾಗ್ಯ ಎಂದಿದ್ದಾರೆ. ಶಿವಣ್ಣನ ಜೊತೆ ಡಾಲಿ ಮಾತ್ರ ಇದೀಗ ಅಭಿನಯ ಮಾಡಿಲ್ಲ. ಜೊತೆಗೆ ದಿಯಾ ಖ್ಯಾತಿಯ ನಟ ಪೃತ್ವಿ ಅಂಬರ್ ಅವರು ಸಹ ಶಿವಣ್ಣನ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.    

ಶಿವಣ್ಣನ ಸಿನಿಮಾ ಭೈರಾಗಿಯ ಒಂದು ಹಾಡು ಇತ್ತೀಚಿಗೆ ಬಾರಿ ವೈರಲ್ ಆಗಿತ್ತು. ಎಲ್ಲಿ ನೋಡಿದರೂ ಶಿವಣ್ಣನ ಜೊತೆ ಕೆಲ ಅಭಿಮಾನಿಗಳು ಶಿವಪ್ಪ ಎನ್ನುವ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದರು. ಹಾಗೆ ಶಿವಣ್ಣನ ಜೊತೆ ಆ ಸಮಯ ಕಳದದ್ದೆ ನಮ್ಮ ಪುಣ್ಯ ಎಂದು ಹೆಚ್ಚು ಮಾತನ್ನಾಡಿದ್ದಾರೆ. ಹೌದು ಸಿನಿಮಾ ಬರುವ ಮುನ್ನ ಶಿವಣ್ಣ ಅವರ ಮನೆಗೆ ಹೋಗಿ ಸಾಕಷ್ಟು ನವ ಕಲಾವಿದರು, ರೀಲ್ಸ್ ಮಾಡುವವರು ಅವರ ಜೊತೆ ಭೈರಾಗಿ ಸಿನಿಮಾದ ಶಿವಪ್ಪ ಹಾಡಿಗೆ ನೃತ್ಯ ಮಾಡಿದ್ದರು. ಅದೊಂದು ರೀತಿ ಹೊಸದಾದ ಸಿಗ್ನೇಚರ್ ಸ್ಟೆಪ್ ಹಾಕಿದ ರೀತಿಯೇ ವೈರಲ್ ಆಗಿತ್ತು.

ಇದೀಗ ನಟ ಶಿವಣ್ಣನ ಅದೇ ಹಾಡಿನ ಜೊತೆ ನಟ ಡಾಲಿ ಹಾಗೂ ಪೃತ್ವಿ ಅಂಬರ್ ಅವರು ಸ್ಟೆಪ್ ಹಾಕಿದ್ದಾರೆ. ಶಿವಪ್ಪ ಎಂದು ಹಾಕಿದ ಶಿವಣ್ಣ ಅವರ ಆ ಸ್ಟೆಪ್ ಹಾಗೂ ಏನರ್ಜಿಗೆ ಫಿದಾ ಆಗದೆ ಉಳಿಯದವರು ಯಾರು ಇಲ್ಲ ಎನ್ನಬಹುದು. ಇಲ್ಲಿದೆ ನೋಡಿ ಶಿವಣ್ಣನ ಶಿವಪ್ಪ ಎನ್ನುವ ಹಾಡಿನ ರೀಲ್ಸ್. ನಿಮಗೂ ಸಹ ಖಂಡಿತ ಇಷ್ಟ ಆಗುತ್ತೆ ಅಂದುಕೊಂಡಿದ್ದೇನೆ. ಖುಷಿಯಿಂದ ನಟ ಡಾಲಿ ಹಾಗೂ ಪೃತ್ವಿ ಅಂಬರ್ ಶಿವಣ್ಣನ ಜೊತೆ ಡ್ಯಾನ್ಸ್ ಮಾಡಿದ್ದಾರೆ ನೋಡಿ ಶೇರ್ ಮಾಡಿ ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು..