Shivraj Kumar : ಮನೆಗೆ ಬಂದು ತಮ್ಮ ಆಸೆ ಬಿಚ್ಚಿಟ್ಟ ಹುಡುಗಿಯರ ಜೊತೆ ಶಿವಣ್ಣನ ಡ್ಯಾನ್ಸ್ ಪರಿ ಹೀಗಿತ್ತು..! ವಾವ್
Updated:Tuesday, June 21, 2022, 17:03[IST]

ಶಿವಣ್ಣ ಅವರು ಅವರದೇಯಾದ ಚಾಣಕ್ಷತನದ ನಟನೆ ಹೊಂದಿದ್ದಾರೆ. ಅಷ್ಟು ವಯಸ್ಸಾದರೂ ಕೂಡ ಶಿವಣ್ಣ ಅವರು ಈಗ 16 ರ ಆಸುಪಾಸು ಇರಬಹುದು ಎಂಬಂತೆ ತುಂಬ ಎನರ್ಜಿ ಆಗಿರುತ್ತಾರೆ. ಯಾವುದೇ ವೇದಿಕೆ ಇರಲಿ ಹೆಚ್ಚು ಆಕ್ಟಿವ್ ಇರುವ ಶಿವರಾಜಕುಮಾರ್ ಅವರು ಸದಾ ಸರಳತೆಯ ಸಾಮ್ರಾಟ ಎನ್ನುವಂತಿರುತ್ತಾರೆ. ಅಭಿಮಾನಿಗಳ ಜೊತೆಗೆ ಹೆಚ್ಚು ಪ್ರೀತಿಯೆಂದಲೆ ಮಾತನಾಡುವ ಶಿವಣ್ಣ ಅವರೆಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ ಎಂದು ಹೇಳಬಹುದು. ಕನ್ನಡ ಜನತೆಯ ಪೂರ್ತಿ ಪ್ರೀತಿ ಸ್ನೇಹ ಗಳಿಸಿದ್ದಾರೆ ಶಿವಣ್ಣ. ಕನ್ನಡ ಜನತೆಯ ಹೃದಯವನ್ನು ಗೆಲ್ಲುತ್ತಲೇ ಶಿವಣ್ಣ ಇರುತ್ತಾರೆ ಎನ್ನಬಹುದು. ಹೌದು ಶಿವಣ್ಣ ಅವರಿಗೆ ಇದೀಗ 59 ವರ್ಷ ಆದರೂ ಕೂಡ ಯಾವುದೇ ಆಯಾಸವಿಲ್ಲದೆ ಹೆಚ್ಚು ಎನರ್ಜಿ ಆಗಿ ಕಾಣಿಸುತ್ತಾರೆ.
ಈ ಡಾನ್ಸ್ ವಿಚಾರಕ್ಕೆ ಬಂದರೆ ಅಭಿಮಾನಿಗಳನ್ನು ಮತ್ತು ಪ್ರೇಕ್ಷಕರ ರಂಜಿಸುವಲ್ಲಿ, ಯಾರಾದರೂ ಕೋರಿಕೆ ಇಟ್ಟರೆ ಸಾಕು ಹಿಂದುಮುಂದು ನೋಡದೆ ಎದ್ದುನಿಂತು ಮ್ಯೂಸಿಕ್ ಬಂದ ತಕ್ಷಣ ಮುದ್ದು ಮುದ್ದಾಗಿ ಹೆಜ್ಜೆ ಹಾಕಿಬಿಡುತ್ತಾರೆ.. ಅಷ್ಟರಮಟ್ಟಿಗೆ ಶಿವಣ್ಣ ಅಭಿಮಾನಿ ದೇವರುಗಳನ್ನು ಪ್ರೀತಿಸುತ್ತಾರೆ.
ಇದೀಗ ಶಿವಣ್ಣ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಮಹಾ ಗುರುಗಳ ಸ್ಥಾನದಲ್ಲಿ ಕುಳಿತು ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಖುಷಿ ವಿಚಾರ. ಇತ್ತೀಚೆಗೆ ಕೆಲವು ಹುಡುಗಿಯರು ಮತ್ತು ಹುಡುಗರು ಅತ್ತ ಶಿವಣ್ಣನವರ ಮನೆಯ ಬಳಿ ಹೋಗಿದ್ದರು. ಹಾಗೆ ಅವರ ಇಷ್ಟದಂತೆ ನಿಮ್ಮ ಜೊತೆ ಡಾನ್ಸ್ ಮಾಡಬೇಕು ಎನ್ನುವ ಆಸೆ ಹೊರಹಾಕಿದಾಗ, ಹಿಂದುಮುಂದು ನೋಡದೆ ಶಿವಣ್ಣ ಅವರ ಬೈರಾಗಿ ಸಿನಿಮಾದ ಹಾಡಿಗೆ ಅವರೊಟ್ಟಿಗೆ ಸಕ್ಕತ್ತಾಗಿ ಸ್ಟೆಪ್ ಹಾಕಿದ್ದಾರೆ ಶಿವಣ್ಣ.
ಅವರ ಜೊತೆಗೆ ಡಾನ್ಸ್ ಮಾಡಿದ ಈ ಹುಡುಗಿರ ವಿಡಿಯೋ ಈಗ ವೈರಲ್ ಆಗುತ್ತಿದೆ. ಎಲ್ಲರೂ ಕೂಡ ನಾಚುವಂತೆ ಹೆಣ್ಣುಮಕ್ಕಳು ನಾಚಿ ನೀರಾಗುವಂತೆ ಶಿವಣ್ಣ ಇವರೊಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..? ಇಲ್ಲಿದೆ ನೀವೇ ಒಮ್ಮೆ ನೋಡಿ. ಹಾಗೆ ವಿಡಿಯೋ ಹೆಚ್ಚು ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು.. ( video credit : kannada entertainment )