Shivaraj Kumar : ಕನ್ನಡ ಚಿತ್ರರಂಗದಲ್ಲಿ ಮಿಂಚಲು ರೆಡಿಯಾದ ಶಿವಣ್ಣನ ಮಗಳು..! ಯಾವ ಸಿನಿಮಾ ಗೊತ್ತಾ..?
Updated:Saturday, May 14, 2022, 11:18[IST]

ಕನ್ನಡ ಸಿನಿಮಾರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಸೆಂಚುರಿಸ್ಟಾರ್ ಈಗಾಗಲೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎಂದು ಹೆಚ್ಚು ಜನರಿಗೆ ಚಿರಪರಿಚಿತ ಆಗಿದ್ದಾರೆ. ಶಿವಣ್ಣ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಶಿವಣ್ಣ ಎಂದರೆ ಸರಳತೆ, ಅವರ ಪ್ರೀತಿ ವಿಶ್ವಾಸಕ್ಕೆ ಎಂದಿಗೂ ನಾವು ಚಿರಋಣಿ ಎನ್ನಬಹುದು. ನಟ ರಾಜ್ಕುಮಾರ್ ಅವರ ಕೆಳಗೆ ಬಂದ ಶಿವಣ್ಣ ಪುನೀತ್, ಮತ್ತು ರಾಘಣ್ಣ ಎಲ್ಲರೂ ಕೂಡ ದೊಡ್ಡದಾಗಿಯೇ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ. ಇದೀಗ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಗೌಡ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಇದೊಂದು ಖುಷಿಯ ವಿಚಾರ ಎನ್ನುತ್ತಾರೆ ಶಿವಣ್ಣ. ಹೌದು ನಿವೇದಿತಾ ನಿರ್ಮಾಣದಲ್ಲಿ ಬರುತ್ತಿರುವ ಹೊಸ ಸಿನಿಮಾ ಹನಿಮೂನ್ ಎನ್ನಲಾಗಿದೆ.
ಇದೊಂದು ವೆಬ್ ಸೀರೀಸ್ ಸಿನಿಮಾ ಆಗಿದ್ದು, ಒಟ್ಟು ಆರು ಎಪಿಸೋಡುಗಳು ಪ್ರಸಾರ ಆಗಲಿದೆಯಂತೆ. ಹನಿಮೂನ್ ಚಿತ್ರಕಥೆಯನ್ನು ಬರೆದಿರುವುದು ನಟ ನಾಗಭೂಷಣ್. ನಟ ನಾಗಭೂಷಣ ಹನಿಮೂನ್ ವೆಬ್ಸೇರೀಸ್ ನಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿದರೆ, ನಾಯಕಿಯಾಗಿ ಸಲಗ ಖ್ಯಾತಿಯ ನಟಿ ಸಂಜನಾ ಆನಂದ್ ಅವರು ಅಭಿನಯಿಸಿದ್ದಾರೆ. ಹೌದು ಇದೊಂದು ಆಧುನಿಕ ಈಗಿನ ಕಂಪ್ಯೂಟರ್ ಜನತೆಯ ಕಥೆ ಆಗಿದ್ದು ಮದುವೆಯಾದ ಬಳಿಕ, ಈ ಜೋಡಿ ಅತ್ತ ಕೇರಳ ಹನಿಮೂನ್ ಗೆ ಹೋಗುತ್ತದೆ. ನಂತರ ಅಲ್ಲಿ ಏನಾಗುತ್ತದೆ ಎನ್ನುವುದೆ ಈ ಕಥೆ. ಗಂಡ-ಹೆಂಡತಿ ಹನಿಮೂನ್ ಒಳಗೆ ಹೇಗೆ ಇರುತ್ತಾರೆ, ಯಾವ ರೀತಿ ವಿಷಯಗಳ ಬಗ್ಗೆ ಹೆಚ್ಚು ಗಲಾಟೆಯಾಗುತ್ತದೆ ಎಂದು ತೋರಿಸಲಾಗಿದೆ.
ಹೌದು ಶಿವಣ್ಣ ಅವರ ಮಗಳು ನಿವೇದಿತಾ ಹೇಳುವ ಹಾಗೆ ಕಳೆದ ವರ್ಷವೇ ನಮ್ಮ ಹನಿಮೂನ್ ವೆಬ್ ಸೀರೀಸ್ ಆಗಲೇ ಆರಂಭವಾಗಬೇಕಿತ್ತು, ಆದರೆ ಆಗಲಿಲ್ಲ. ಇದೀಗ ವೂಟ್ ನಲ್ಲಿ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮಗಳ ನಿರ್ಮಾಣದ ಮೊದಲ ಸಿನಿಮಾ ಆದ ಹನಿಮೂನ್ ಸಿರೀಸ್ ಬಗ್ಗೆ ಮಾತನಾಡಿದ ಶಿವಣ್ಣ ಅವರು ಇದೊಂದು ಹೊಸ ಪ್ರಯತ್ನ, ಕನ್ನಡ ಚಿತ್ರರಂಗದಲ್ಲಿ ಈ ರೀತಿ ಆಗಿಲ್ಲ ಈ ವೆಬ್ಸೇರಿಸ್ ಗೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಹಾಗೆ ಕಥೆ ಬರೆದ ನಾಗಭೂಷಣ ಅವರು ಶಿವಣ್ಣ ಅವರ ಬ್ಯಾನರ್ ಅಡಿಯಲ್ಲಿ ಕೆಲಸ ಮಾಡುವುದೆ ಒಂದು ಖುಷಿ ಎಂದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು ....