ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರು
Updated:Wednesday, April 20, 2022, 14:17[IST]

ಹ್ಯಾಟ್ರೀಕ್ ಹೀರೋ ದೊಡ್ಮನೆಯ ನಟ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರುಪೇದಾಗಿದೆ. ಕೆಲವು ತಿಂಗಳ ಹಿಂದೆಯಷ್ಟೇ ದೊಡ್ಮನೆ ಕುಟುಂಬದದ ಆಘಾತಕಾರಿ ಸುದ್ದಿ ಕೇಳಿದ ಜನರ ನೋವು ಇನ್ನು ಮಾಸಿಲ್ಲದ ಸಮಯದಲ್ಲೇ ಶಿವಣ್ಣ ಆಸ್ಪತ್ರೆಗೆ ದಾಖಲಾಗಿರುವುದು ಆತಂಕ ಮೂಡಿಸಿದೆ.
ತಮ್ಮನ ಅಗಲಿಕೆಯ ನೋವು ಇನ್ನು ಮರೆಯಾಗದೇ ಹಲವಾರು ಕೆಲಸದಲ್ಲಿ ಮನೆ ಜವಾಬ್ದಾರಿಯಲ್ಲಿ ಬ್ಯೂಸಿಯಿದ್ದ ನಟ ಶಿವರಾಜ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿರಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಮೈಸೂರಿನಲ್ಲಿ ವೇದಾ ಶೂಟಿಂಗ್ ನಲ್ಲಿದ್ದ ಶಿವರಾಜ್ ಕುಮಾರ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಮೈಸೂರಿನ ಬಿಜೆಪಿಎಸ್ ಆಸ್ಪತ್ರೆಗೆ ತೆರಳಿ, ಪರೀಕ್ಷಿಸಿ, ಚಿಕಿತ್ಸೆ ಪಡೆದಿದ್ದಾರೆ ಎಂದು ಬಲ್ಲಮೂಲಗಳು ತಿಳಿಸಿವೆ.
ಶಿವರಾಜಕುಮಾರ್ ಜನರಲ್ ಚೆಕಪ್ ಮಾಡಿಕೊಂಡ ಬಳಿಕ ಮತ್ತೆ ವೇದಾ ಶೂಟಿಂಗ್ಗೆ ಮರಳಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಅಷ್ಟೇ ಎಂದು ಶಿವಣ್ಣ ಆಪ್ತರು ತಿಳಿಸಿದ್ದಾರೆ.