ನಾ ನಿನ್ನ ಮರೆಯಲಾರೆ ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ ಮತ್ತು ಲಕ್ಷ್ಮಿ..! ವಾವ್ ಕ್ಯೂಟ್ ಎಂದ ಫ್ಯಾನ್ಸ್

By Infoflick Correspondent

Updated:Friday, June 3, 2022, 22:12[IST]

ನಾ ನಿನ್ನ ಮರೆಯಲಾರೆ ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ ಮತ್ತು ಲಕ್ಷ್ಮಿ..! ವಾವ್ ಕ್ಯೂಟ್ ಎಂದ ಫ್ಯಾನ್ಸ್


ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಹೆಚ್ಚು ಕಾರ್ಯಕ್ರಮಗಳು ಒಂದಕ್ಕಿಂತ ಒಂದು ಹೆಚ್ಚು ಎಂಬಂತೆ ಪ್ರತಿವಾರ ಪ್ರೇಕ್ಷಕರನ್ನು ರಂಜಿಸುತ್ತಲೇ ಇವೆ. ಹೌದು ಜೀ ಕನ್ನಡದಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಡ್ರಾಮಾ ಜೂನಿಯರ್ ಸೀಸನ್ 4 ಒಳ್ಳೆಯ ಅನಿಸಿಕೆಯನ್ನು ಗಿಟ್ಟಿಸಿಕೊಂಡಿದೆ ಎನ್ನಬಹುದು. ಹಾಗೇನೇ ಇನ್ನೊಂದು ಕಡೆ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಕೂಡ ಒಂದು ಹಂತದವರೆಗೆ ಭರ್ಜರಿಯ ಮೆಚ್ಚುಗೆಯನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಹೀಗಿರುವಾಗ ಈ ವಾರ ಈ ಎರಡು ಷೋ ಪ್ರಿಯರಿಗೆ ಹಾಗೂ ಎಲ್ಲಾ ವೀಕ್ಷಕರಿಗೆ ಹೊಸ ಅನುಭವ ನೀಡಲು ಚಾನೆಲ್ ಮುಂದಾಗಿದ್ದು ವೇದಿಕೆ ಈ ವಾರ ಕಲರ್ಫುಲ್ ಆಗಿರುವುದು ಖಚಿತ. ಈ ಎರಡು ಕಾರ್ಯಕ್ರಮದ ಪ್ರಿಯರಿಗೆ ಒಂದು ಹೊಸದಾದ ರಸದೌತಣ ರೆಡಿಯಾಗಿದ್ದು, ಮಹಾಸಂಗಮ ನಡೆಯಲಿದೆ.

ಹೌದು ಡ್ರಾಮಾ ಜೂನಿಯರ್ಸ್ ಸೀಸನ್ 4 ಮತ್ತು ಡಾನ್ಸ್ ಕರ್ನಾಟಕ ಡಾನ್ಸ್ ಈ ವಾರ ಒಟ್ಟಿಗೆ ಪ್ರಸಾರವಾಗಲಿದೆ. ಈ ಮಹಾಸಂಗಮ ಒಂದೇ ವೇದಿಕೆಯಲ್ಲಿ ಒಟ್ಟು ಏಳು ಜಡ್ಜಸ್ ಕಾಣಿಸಲಿದ್ದಾರೆ. ಶಿವಣ್ಣ (Shivarajkumar), ನಟ ರವಿಚಂದ್ರನ್ (Ravichandran), ನಟಿ ರಚಿತಾ ರಾಮ್ (Rachitam Ram), ಹಿರಿಯ ನಟಿ ಲಕ್ಷ್ಮಿ (ulie Lakshmi)ಅಮ್ಮ,ಮ್ಯೂಸಿಕ್ ಮಾಂತ್ರಿಕ ಆದ ಅರ್ಜುನ್ ಜನ್ಯ, ನಟಿ ರಕ್ಷಿತಾ ಪ್ರೇಮ್, ಹಾಗೂ ಡಾನ್ಸ್ ಮಾಸ್ಟರ್ ಸಹ ಆಗಮಿಸಿದ್ದಾರೆ. ಒಂದು ಕಡೆ ಪುಟ್ಟ ಮಕ್ಕಳ ಕಾಮಿಡಿ ಜಲಕ್ ಪ್ರದರ್ಶನ ನಗೆಯಲ್ಲಿ ತೇಲಾಡುವಂತೆ ಮಾಡಿದರೆ, ಇನ್ನೊಂದು ಕಡೆ ಸಕ್ಕತ್ ಡಾನ್ಸ್ ಎನ್ನಬಹುದು. ಇದೀಗ ಇದರ ಒಂದು ಪ್ರೊಮೊ ಬಿಡುಗಡೆಯಾಗಿದ್ದು, ನಟ ಶಿವಣ್ಣನ ಜೊತೆ ಲಕ್ಷ್ಮಿ ಅಮ್ಮನವರ ನಾ ನಿನ್ನ ಮರೆಯಲಾರೆ ಎನ್ನುವ ಹಾಡಿಗೆ ಸಕ್ಕತ್ ಹೆಜ್ಜೆ ಹಾಕಿದ್ದಾರೆ.  

ವೇದಿಕೆ ಮೇಲೆ ಇವರ ಡಾನ್ಸ್ ನೋಡಿ ಅಭಿಮಾನಿಗಳು ಮತ್ತು ಪ್ರೇಕ್ಷಕರು ಶಿಳ್ಳೆ ಹಾಕಿ ಇವರ ಡಾನ್ಸ್ ಸ್ಟೆಪ್ ಗೆ ಫಿದಾ ಆಗಿದ್ದಾರೆ ಎನ್ನಲಾಗಿದೆ. ನಟ ಶಿವಣ್ಣ ಮತ್ತು ಲಕ್ಷ್ಮಿ ಅಮ್ಮ ವೇದಿಕೆ ಮೇಲೆ ಮೋಡಿ ಮಾಡಿದ ಡಾನ್ಸ್ ಅಸಲಿಗೆ ಹೇಗಿದೆ ಗೊತ್ತಾ..? ಇಲ್ಲಿದೆ ನೋಡಿ ಲೇಖನದ ಕೊನೆಯಲ್ಲಿ. ಒಮ್ಮೆ ಈ ವಿಡಿಯೋ ನೋಡಿ. ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ನಿಮ್ಮ ಫೇವರೆಟ್ ಶೋ ಡ್ರಾಮಾ ಜೂನಿಯರ್ಸ್ ಅಥವಾ ಡಾನ್ಸ್ ಕರ್ನಾಟಕ ಡಾನ್ಸ ಎಂದು ನಮಗೆ ಕಮೆಂಟ್ ಮಾಡಿ ವಿಡಿಯೋ ನಿಮಗೂ ಇಷ್ಟವಾದಲ್ಲಿ ತಪ್ಪದೇ ಶೇರ್ ಮಾಡಿ ಧನ್ಯವಾದಗಳು....( video credit : zee kannada tv )

 
 
 
 
 
 
 
 
 
 
 
 
 
 
 

A post shared by Zee Kannada (@zeekannada)